BUNTS NEWS NETWORK, ಮುಂಬಯಿ:
ಬಂಟರ ಸಂಘ ಮುಂಬಯಿಯ ಮಾಜಿ
ಅಧ್ಯಕ್ಷ, ಹಾಲಿ ಟ್ರಷ್ಟಿ ಕರ್ನಿರೆ
ವಿಶ್ವನಾಥ ಶೆಟ್ಟಿ ಯವರು ಕಳೆದ
23 ವರ್ಷಗಳಿಂದ ತನ್ನ ಹುಟ್ಟುರು ಕರ್ನಿರೆ
ಜಿಲ್ಲಾ ಪಂಚಾಯತ್ ಶಾಲೆಗಳ ಮಕ್ಕಳಿಗೆ
ಉಚಿತವಾಗಿ ಪುಸ್ತಕ, ಬ್ಯಾಗ್ ಹಾಗೂ
ಇತರ ಶಾಲಾ ಪರಿಕರಗಳನ್ನು ನೀಡುತ್ತಿದ್ದು
ಇತ್ತೀಚೆಗೆ ಈ ಕಾರ್ಯಕ್ರಮವು ನಡೆಯಿತು.
ಕರ್ನಿರೆ
ವಿಶ್ವನಾಥ ಶೆಟ್ಟಿ ಯವರ ಸಹೋದರ
ವಸಾಯಿ ಪರಿಸರದ ಸಮಾಜ ಸೇವಕ
ಕರ್ನಿರೆ ಶ್ರೀಧರ ಶೆಟ್ಟಿಯವರ ಸ್ಮರಣಾರ್ಥ
ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಿ
ಮಾತನಾಡುತ್ತಾ ತನ್ನ ಶಾಲಾ ದಿನಗಳನ್ನು
ನೆನಪಿಸಿ ಕೊಂಡರು ವಿದ್ಯಾರ್ಥಿಗಳಿಗೆ ಸೂಕ್ತ
ಮಾರ್ಗದರ್ಶನ ನೀಡಿದರಲ್ಲದೆ ಕರ್ನಿರೆ ಪೌಂಡೇಶನ್ ಸ್ಥಾಪನೆ
ಬಗ್ಗೆ ಮಾಹಿತಿಯಿತ್ತರು. ಈ
ಸಲ ತನ್ನ ಸಹೋದರನ ಸ್ಮರಣಾರ್ಥವಾಗಿ
ಶಾಲಾ ಮಕ್ಕಳಿಗೆ ಒಂದು ವಾಹನದ ವ್ಯವಸ್ಥೆಯನ್ನು
ಮಾಡಿದ್ದಾರೆ.
ಈ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ
ಲಕ್ಷ್ಮೀ ಆಚಾರ್ಯ, ಪ್ರಭಾಕರ ಶೆಟ್ಟಿ,
ಉದ್ಯಮಿ ಹರೀಶ್ಚಂದ್ರ ಶೆಟ್ಟಿ, ಹಳೆ ವಿದ್ಯಾರ್ಥಿ
ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,
ಉಮೇಶ್ ಅಮೀನ್, ಚಂದ್ರಶೇಖರ ಶೆಟ್ಟಿ
ಹೊಸಮನೆ, ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತಿತರರು
ಉಪಸ್ಥಿತರಿದ್ದರು. ವರದಿ:
ಈಶ್ವರ ಎಂ. ಐಲ್, ಚಿತ್ರ: ದಿನೇಶ್ ಕುಲಾಲ್