ಸುಧೀರ್ ಕುಮಾರ್ ಶೆಟ್ಟಿಯವರಿಂದ “ವಿಶ್ವ ತುಳು ಸಮ್ಮೇಳನ ದುಬಾಯಿ” ಲಾಂಛನ ಲೋಕಾರ್ಪಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುಧೀರ್ ಕುಮಾರ್ ಶೆಟ್ಟಿಯವರಿಂದ “ವಿಶ್ವ ತುಳು ಸಮ್ಮೇಳನ ದುಬಾಯಿ” ಲಾಂಛನ ಲೋಕಾರ್ಪಣೆ

Share This
BUNTS NEWS NETWORK,ಯುಎಇ: “ವಿಶ್ವ ತುಳು ಸಮ್ಮೇಳನ ದುಬಾಯಿ 2018" ಅಧಿಕೃತ ಲಾಂಛನವನ್ನು ಯು.ಎ.ಇ. ಎಕ್ಸ್ಚೇಂಜ್ ಗ್ಲೋಬಲ್ ಅಪರೇಶನ್ಸ್ ಅಧ್ಯಕ್ಷರಾದ ಸುಧೀರ್ ಕುಮಾರ ಶೆಟ್ಟಿಯವರು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
"ವಿಶ್ವ ತುಳು ಸಮ್ಮೇಳನ ದುಬಾಯಿ 2018" ಲಾಂಛನವನ್ನು ತುಳುನಾಡಿನ ಮತ್ತು ಗಲ್ಫ್ ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಸಂಯೋಜಿಸಿ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಿರುವ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಬಿ. ಕೆ. ಗಣೇಶ್ ರೈಯವರು ಲಾಂಚನದ ಬಗ್ಗೆ ಅತೀ ಸೂಕ್ಷ್ಮವಾಗಿ ಸಭೆಯ ಮುಂದೆ ವಿವರಣೆ ನೀಡಿದರು.

ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಜು.27ರಂದು ದುಬಾಯಿ ಮಾರ್ಕೊಪೋಲ್ ಹೋಟೆಲ್ ಸಭಾಂಗಣದಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕರು ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಲಹಾ ಸಮಿತಿಯ ಸದಸ್ಯರಾದ ಶೋಧನ್ ಪ್ರಸಾದ್ ಸರ್ವರನ್ನು ಸ್ವಾಗತಿಸಿದರು.

ಮುಖ್ಯ ಸಂಘಟಕರು ಸರ್ವೋತ್ತಮ ಶೆಟ್ಟಿಯವರು ವಿಶ್ವ ತುಳು ಸಮ್ಮೇಳನ ದುಬಾಯಿ 2018ರ ಪೂರ್ಣ ವಿವರಗಳನ್ನು ಸಂಕ್ಷಿಪ್ತವಾಗಿ ಸಭೆಯಲ್ಲಿ ವಿವರಿಸಿ, ಸಮ್ಮೇಳನದ ಪೂರ್ವ ತಯಾರಿಯಲ್ಲಿ ಸೂಕ್ತ ಮಾರ್ಗದರ್ಶವನ್ನು ನೀಡಿ ಸರ್ವ ಸದಸ್ಯರು ಪೂರ್ಣ ಸಹಕಾರ ನೀಡಿ ಅತ್ಯಂತ ಜವಬ್ಧಾರಿಯುತವಾಗಿ ಕಾರ್ಯನಿರ್ವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡರು.

ಸಭೆಯಲ್ಲಿ ಸಲಹ ಸಮಿತಿಯ ಸದ್ಯರಾದ  ಬಿ. ಕೆ. ಗಣೇಶ್ ರೈ, ಶೋಧನ್ ಪ್ರಸಾದ್, ದೇವ್ ಕುಮಾರ್ ಕಾಂಬ್ಲಿ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು, ನೋವೆಲ್ ಡಿ' ಅಲ್ಮೇಡಾ, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸ್ಮರಣ ಸಂಚಿಕೆಗೆ ಹೆಸರು "ವಿಶ್ವ ತುಳು ಐಸಿರಿ" ಆಯ್ಕೆ: ಅರಬ್ ಸಂಯುಕ್ತ ಸಂಸ್ಥಾದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ "ವಿಶ್ವ ತುಳು ಸಮ್ಮೇಳನ ದುಬಾಯಿ 2018" ಸಮ್ಮೇಳನದ ಸವಿ ನೆನಪಿಗಾಗಿ ಲೋಕಾರ್ಪಣೆಗೊಳ್ಳಲಿರುವ ಸ್ಮರಣ ಸಂಚಿಕೆಗೆ ಹೆಸರು ಸೂಚಿಸಿ ಪ್ರಕಟಣೆ ನೀಡಿ ಆಹ್ವಾನಿಸಲಾಗಿದ್ದು ಇಲ್ಲಿಯವರೆಗೆ 166 ಹೆಸರುಗಳು 22 ಮಂದಿ ತುಳು ಅಭಿಮಾನಿಗಳಿಂದ ಹೆಸರುಗಳನ್ನು ಸ್ವೀಕರಿಸಲಾಗಿತ್ತು. ಹಿರಿಯ ಸಾಹಿತಿಗಳು ತುಳು ಜ್ಞಾನಭಂಡಾರ ಡಾ. ಬಿ. ಎ. ವಿವೇಕ್ ರೈ ಮತ್ತು ಮುಂಬಯಿಯಲ್ಲಿ ನೆಲೆಸಿರುವ ಡಾ. ಸುನಿತಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ಬಿ. ಕೆ. ಗಣೇಶ್ ರೈ ಸೂಚಿಸಿದ್ದ ಹೆಸರು "ವಿಶ್ವ ತುಳು ಐಸಿರಿ" ಹೆಸರನ್ನು ಆಯ್ಕೆಮಾಡಲಾಯಿತು. ವರದಿ: ಬಿ. ಕೆ. ಗಣೇಶ್ ರೈ - ಯು.ಎ.ಇ. ಛಾಯಚಿತ್ರ ಕೃಪೆ: ಅಶೋಕ್ ಬೆಳ್ಮಣ್

Pages