BUNTS NEWS, ಮುಂಬಯಿ: ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್ ಪ್ರಸ್ತಿತಿಯ
ಹಾಸ್ಪಿಟ್ಯಾಲಿಟಿ ಲೀಡರ್'ಸ್ ಇಂಡಸ್ಟೀ
ಚಾಯ್ಸ್ ಅವಾರ್ಡ್ಸ್ ಇದರ
ನಾಲ್ಕನೇ ವಾರ್ಷಿಕ ಪ್ರಶಸ್ತಿ ಪ್ರದಾನ
ಭವ್ಯ ಸಮಾರಂಭ ಇಂದಿಲ್ಲಿ ಮಂಗಳವಾರ
ರಾತ್ರಿಮುಂಬಯಿ ಮಹಾನಗರದ ಸಾಂತಕ್ರೂಜ್ ಪೂರ್ವದ
ಗ್ರ್ಯಾಂಡ್ ಹೈಯ್ಯತ್ ಸಭಾಗೃಹದಲ್ಲಿ ನೇರವೇರಿತು.
ಬಂಜಾರ-ಗೋಲ್ಡ್ಫಿಂಚ್ ಪ್ರಕಾಶಣ್ಣ
ಪ್ರಸಿದ್ಧಿಯ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ
(ಉಡುಪಿ) ಜಿಲ್ಲೆಯ ಪಡುಬಿದ್ರಿ ಮೂಲದ
ಪ್ರಸಿದ್ಧ ಉದ್ಯಮಿ, ಎಂಆರ್ಜಿ
(ಮಾಧವ್ ರತ್ನಾ ಗೌರವ್) ಸಮೂಹದ
ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ
ಅವರಿಗೆ ಈ ಬಾರಿ `ವರ್ಷದ
ಕನಸುಗಾರ ಹೊಟೇಲು ಮಾಲಕ' ಪ್ರಾಪ್ತಿಯಾಗಿದ್ದು,
ಇಂದಿಲ್ಲಿ ನಡೆಸಲ್ಪಟ್ಟ 2018ನೇ ಐಡಿಇ ಗ್ಲೋಬಲ್
ವಾರ್ಷಿಕ ಪ್ರಶಸ್ತಿ ಪ್ರದಾನ ಭವ್ಯ ಸಮಾರಂಭದಲ್ಲಿ
ಮುಖ್ಯ ಅತಿಥಿಯಾಗಿ ಉಪಸ್ಥಿತ ಐಡಿಇ ಗ್ಲೋಬಲ್
ನಿರ್ದೇಶಕರುಗಳಾದ ಕೆ.ಸುರೇಶ್ ಮತ್ತು
ಎಸ್.ಗಣೇಶ್ ಅವರು ಪ್ರಕಾಶ್
ಶೆಟ್ಟಿ ಅವರಿಗೆ `ವ್ಹಿಜನರಿ ಹೊಟೇಲ್
ಓನರ್ ಆಫ್ ದ ಈಯರ್'
ಪ್ರಶಸ್ತಿ ಫಲಕ ಪ್ರದಾನಿಸಿ ಗೌರವಿಸಿ
ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಸ್ಪ್ರಿಂಗ್ಏರ್ ಸಂದೀಪ್ ಮೆನನ್,
ನಿತೀನ್ ನಾಗ್ರಾಲೆ, ಡೋನ್ ಕಬಿರಾಜ್, ರಾಜೇಶ್
ನಾಯರ್, ಪ್ರೇಮ್ ರುವೇರಿ ಮತ್ತು
ಐಡಿಇ ಗ್ಲೋಬಲ್ ಮುಖ್ಯಸ್ಥರು ಉಪಸ್ಥಿತರಿದ್ದು
ನೆರೆದ ರಾಷ್ಟ್ರದಾದ್ಯಂತದ ನೂರಾರು ಗಣ್ಯರ ಉಪಸ್ಥಿತಿಯಲ್ಲಿ
ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.
ಗಣ್ಯರ ಅಭಿನಂದನೆ-ಶುಭಾರೈಕೆ:`ವ್ಹಿಜನರಿ ಹೊಟೇಲ್ ಓನರ್ ಆಫ್
ದ ಈಯರ್' ಪ್ರಶಸ್ತಿ
ಪುರಸ್ಕೃತ ಪ್ರಕಾಶ್ ಶೆಟ್ಟಿ ಅವರಿಗೆ
ಚರಿಷ್ಮಾ ಬಿಲ್ಡರ್ಸ್ನ ಆಡಳಿತ ನಿರ್ದೇಶಕ
ಸುಧೀರ್ ವಿ.ಶೆಟ್ಟಿ, ತುಂಗಾ
ಹೊಟೇಲು ಸಮೂಹÀದ ಆಡಳಿತ
ನಿರ್ದೇಶಕ ಸುಧಾಕರ್ ಎಸ್.ಹೆಗ್ಡೆ,
ಸಂಸದ ಗೋಪಾಲ ಸಿ.ಶೆಟ್ಟಿ,
ಆಲ್ಕಾರ್ಗೋ ಸಮೂಹದ ಶಶಿಕಿರಣ್
ಶೆಟ್ಟಿ, ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್
ಶೆಟ್ಟಿ, ಭವಾನಿ ಫೌಂಡೇಶನ್ನ
ಸಂಸ್ಥಾಪಕಾಧ್ಯಕ್ಷ ಕೆ.ಡಿ ಶೆಟ್ಟಿ,
ಬಂಟರ ಸಂಘ ಮುಂಬಯಿ ಅಧ್ಯಕ್ಷ
ಪದ್ಮನಾಭ ಎಸ್.ಪಯ್ಯಡೆ, ಉಪಾಧ್ಯಕ್ಷ
ಚಂದ್ರಹಾಸ ಕೆ.ಶೆಟ್ಟಿ, ನಗ್ರಿಗುತ್ತು
ವಿವೇಕ್ ಶೆಟ್ಟಿ, ಬಿ.ವಿವೇಕ್
ಶೆಟ್ಟಿ, ರಘುರಾಮ ಕೆ.ಶೆಟ್ಟಿ
(ಬೆಳಗಾಂ), ಸಿಎ| ಶಂಕರ್ ಬಿ.ಶೆಟ್ಟಿ, ಕರ್ನಿರೆ ವಿಶ್ವನಾಥ
ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ,
ವಿರಾರ್ ಶಂಕರ್ ಶೆಟ್ಟಿ, ಜಯರಾಮ
ಎನ್.ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ಮಹೇಶ್
ಎಸ್.ಶೆಟ್ಟಿ ಸೇರಿದಂತೆ ನೂರಾರು
ಗಣ್ಯರು ಅಭಿನಂದಿಸಿ ಶುಭಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ರತ್ನಾಕರ
ಆರ್.ಶೆಟ್ಟಿ ಮುಂಡ್ಕೂರು ಹಾಜರಿದ್ದು
ಪ್ರಶಸ್ತಿ ಸ್ವೀಕೃತ ಪ್ರಕಾಶ್ ಶೆಟ್ಟಿ
ಅವರ ಮಹತ್ತರ ಸಾಧನೆಯನ್ನು ಪ್ರಶಂಸಿಸಿ
ಶುಭಾರೈಸಿದರು. ಕೆ.ಸನೀಲ್ ಸ್ವಾಗತಿಸಿ
ಪ್ರಸ್ತಾವಿಕ ನುಡಿಗಳನ್ನಾಡಿ ಪ್ರಶಸ್ತಿಗೆ ಭಾಜನರಾದ ಸರ್ವರಿಗೂ ಶುಭಾರೈಸಿ
ಕಾರ್ಯಕ್ರಮ ನಿರೂಪಿಸಿದರು. [ಚಿತ್ರ
/ ವರದಿ
: ರೋನ್ಸ್ ಬಂಟ್ವಾಳ್ – www.Buntsnews.com ]