ಮಹಿಳೆಯರನ್ನು ಸಂಘಟಿಸಲು ‘ಅಸ್ಮಿತೆ’ಯಂತಹ ಸಮಾವೇಶ ಅಗತ್ಯ: ಉಲ್ಲಾಸ್ ಶೆಟ್ಟಿ - BUNTS NEWS WORLD

ಮಹಿಳೆಯರನ್ನು ಸಂಘಟಿಸಲು ‘ಅಸ್ಮಿತೆ’ಯಂತಹ ಸಮಾವೇಶ ಅಗತ್ಯ: ಉಲ್ಲಾಸ್ ಶೆಟ್ಟಿ

Share This
Bunts News, ಮಂಗಳೂರು: ಮಹಿಳೆಯರನ್ನು ಸಂಘಟಿತರನ್ನಾಗಿಸಲು ಮತ್ತು ಅವರಲ್ಲಿ ಆತ್ಮಸ್ಥೆರ್ಯ ಮತ್ತು ಸ್ಫೂರ್ತಿ ತುಂಬಲು ಸಮಾವೇಶದಂತಹ ಕಾರ್ಯಕ್ರಮ ಮಹಿಳೆಯರಲ್ಲಿ ಜಾಗೃತಿ  ಮೂಡಿಸಲು ಸಾಧ್ಯವಾಗುತ್ತದೆ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ತಿಳಿಸಿದರು.
ಎಪ್ರಿಲ್ 8ರಂದು ಭಾನುವಾರ  ಸುರತ್ಕಲ್ ಬಂಟರ ಭವನದಲ್ಲಿ ನಡೆಯುವ  ಬಂಟ ಮಹಿಳಾ ಸಮಾವೇಶ ‘ಅಸ್ಮಿತೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಂಟರ ಭವನದಲ್ಲಿ  ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಹಿಳಾ ಸಶಕ್ತೀಕರಣದ ಮೂಲಕ ಒಟ್ಟು ಸಮಾಜದ ಒಳಿತನ್ನು ಸಾಧಿಸುವ ಸದುದ್ದೇಶದೊಂದಿಗೆ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮಹಿಳಾ ವೇದಿಕೆಯ  ಅಧ್ಯೆಕ್ಷೆ ಚಂದ್ರಕಲಾ ಶೆಟ್ಟಿ ತಿಳಿಸಿದರು.

ಸಮಾರಂಭದಲ್ಲಿ “ಸಾಂಸಾರಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ ನಡುವೆ ಹೆಣ್ಣಿನ ಹೆಮ್ಮೆಯ ಅಸ್ತಿತ್ವ ಹುಡಕಾಟ ವಿಚಾರದಲ್ಲಿ ವಿಚಾರಗೋಷ್ಠಿ ನಡೆಯಲಿದೆ ಎಂದು ಕಾರ್ಯದರ್ಶಿ ವಿಜಯ ಭಾರತಿ ಶೆಟ್ಟಿ ತಿಳಿಸಿದರು.  ಸಮಾವೇಶದಲ್ಲಿ ಮಹಿಳಾ ನಾಯಕಿಯರು,  ಸಾಧಕಿಯರು, ವಿಷಯ ಪರಿಣಿತರು, ಸಂಪನ್ಮೂಲ ವ್ಯಕ್ತಿಗಳು, ಪ್ರತಿಭಾನ್ವಿತರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನಾ ಕಾರ್ಯದರ್ಶಿ ವೀಣಾಶೆಟ್ಟಿ ತಿಳಿಸಿದರು.

ಆಮಂತ್ರಣ ಪತ್ರಿಕೆ  ಬಿಡುಗಡೆ ಸಮಾರಂಭದಲ್ಲಿ ಮಹಿಳಾ  ವೇದಿಕೆಯ ಕಾರ್ಯದರ್ಶಿ ವಿಜಯಭಾರತಿ  ಶೆಟ್ಟಿ ಜತೆಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ, ಉಪಾಧ್ಯಕ್ಷೆ ಬೇಬಿ  ಶೆಟ್ಟಿ, ಕೋಶಾಧಿಕಾರಿ ಭವ್ಯಾ ಶೆಟ್ಟಿ. ಮಾಜೀ ಅಧ್ಯಕ್ಷೆ ಅಂಜನಿ ಶೆಟ್ಟಿ, ಬಂಟರ ಸಂಘದ  ಪದಾಧಿಕಾರಿಗಳಾದ  ಸುಧಾಕರ ಪೂಂಜ, ಸೀತಾರಾಮ ರೈ ಪ್ರವೀಣ್  ಶೆಟ್ಟಿ , ಜಯರಾಮ ಶೆಟ್ಟಿ, ನಿರ್ದೇಶಕರಾದ  ನವೀನ್ ಶೆಟ್ಟಿ ಪಡ್ರೆ, ಮಂಜಯ್ಯ  ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Pages