ಪಟ್ಲ ಫೌಂಡೇಶನ್ ಕಾರ್ಯ ಶ್ಲಾಘನೀಯ: ಅಗರಿ ರಾಘವೇಂದ್ರ ರಾವ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಟ್ಲ ಫೌಂಡೇಶನ್ ಕಾರ್ಯ ಶ್ಲಾಘನೀಯ: ಅಗರಿ ರಾಘವೇಂದ್ರ ರಾವ್

Share This
BUNS NEWS NETWORK, ಮಂಗಳೂರು: ಯಕ್ಷಗಾನ ಕಲೆ ಬೆಳೆಯುತ್ತಿದೆ, ಮತ್ತಷ್ಟು ಬೆಳೆಯಲು ಸರ್ವರ, ಕಲಾಭಿಮಾಗಳ ಸಹಕಾರ ಅಗತ್ಯ. ಯಕ್ಷಗಾನ ಕಲೆ ಬೆಳವಣಿಗೆ ನಿಟ್ಟಿನಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಲ್ಲರನ್ನು ಸೇರಿಸಿ ಕಾರ್ಯವೆಸಗುತ್ತಿರುವುದು ಶ್ಲಾಘನೀಯ ಎಂದು ಅಗರಿ ಎಂಟರ್‍ಪ್ರೈಸಸ್ ಸಮೂಹ ಸಂಸ್ಥೆಗಳ ಮಾಲಿಕ ಅಗರಿ ರಾಘವೇಂದ್ರ ರಾವ್ ಹೇಳಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ಕಾರ್ಯ ಶ್ಲಾಘನೀಯ: ಅಗರಿ ರಾಘವೇಂದ್ರ ರಾವ್
ಅವರು ಯಕ್ಷಧ್ರುವ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ 29ನೇ ಸುರತ್ಕಲ್ ಘಟಕದ  ಉದ್ಘಾಟನೆ ಸಮಾರಂಭ ಇಲ್ಲಿನ  ಬಂಟರ ಭವನದಲ್ಲಿ ಭಾನುವಾರ ನಡೆದಾಗ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಪ್ರಸಿದ್ದ ಜ್ಯೋತಿಷಿ ಕೆಸಿ ನಾಗೇಂದ್ರ ಭಾರಧ್ವಜ್ ಸುರತ್ಕಲ್ ಮಾತನಾಡಿ, ಯಕ್ಷಗಾನ ಕಲಾವಿದನ ಕಷ್ಟ ಪರಿಹಾರಕ್ಕೆ ಟ್ರಸ್ಟ್ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಹತ್ವದ ಕ್ರಮವಾಗಿದೆ ಎಂದರು.

ಟ್ರಸ್ಟ್‍ನ ಕೇಂದ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ  ಭಂಡಾರಿ ಅಡ್ಯಾರ್ ಮಾತನಾಡಿ, ಅನೇಕ ಯಕ್ಷಗಾನ ಕಲಾವಿದರಿಗೆ ಟ್ರಸ್ಟ್ ನೆರವು ನೀಡುತ್ತಿದೆ. ಟ್ಟಸ್ಟ್‍ನ ವಿದೇಶಗಳಲ್ಲಿ  ಘಟಕ ಆರಂಭಿಸಿದೆ, ಅಮೇರಿಕದಲ್ಲಿ ಟ್ರಸ್ಟ್‍ನ  ಘಟಕ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದರು.

ಸುರತ್ಕಲ್ ಘಟಕ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷತೆ ವಹಿಸಿದ್ದರು. ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರೀ ದೇವಳದ   ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು,ಉದ್ಯಮಿಯಾದವ ಕೋಟ್ಯಾನ್,ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಉಲ್ಲಾಸ್ ಆರ್  ಶೆಟ್ಟಿ, ಪ್ರೇಮ್ ಶೆಟ್ಟಿಸುರತ್ಕಲ್ ಮುಂಬಯಿ,ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಗಂಗಾಧರ್ ಹೊಸಬೆಟ್ಟು,ಲಲಿತಕಲಾ ಆಟ್ಸ್ ಮಂಗಳೂರುಇದರ ಮಾಲಿಕ ಧನಪಾಲ್ ಶೆಟ್ಟಿಗಾರ್,ಉದ್ಯಮಿ ರಮಾನಾಥ ಶೆಟ್ಟಿ ಕೃಷ್ಣಾಪುರ,ಸತೀಶ್ ಮು ಂಚೂರು,ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡೋನಿ ಸುವಾರಿಸ್,ಉದ್ಯಮಿ ಟಿ ಎನ್ ರಮೇಶ್, ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೇಂದ್ರೀಯ ಸಮಿತಿ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಮಹಿಳಾ ಘಟಕ ಅಧ್ಯಕ್ಷೆ ಪೂರ್ಣಿಮಾ  ಯತೀಶ್ ರೈ, ಸುರತ್ಕಲ್ ಘಟಕ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಕಟ್ಲ, ಸಂಚಾಲಕ ರವಿ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ಸತೀಶ್ ಶೆಟ್ಟಿ ಬಾಳಿಕೆ ಮೊದಲಾದವರಿದ್ದರು. ಶಾಸಕ ಮೊಹಿದೀನ್ ಬಾವಾ ಭೇಟಿಯಿತ್ತರು.

ಸುರತ್ಕಲ್ ಘಟಕ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.  ನವೀನ್ ಕುಮಾರ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಲೋಕಯ್ಯಶೆಟ್ಟಿ ಪರಿಚಯಿಸಿದರು. ಭಾಗವತ ಶಿವ ಎಲ್ ಸುವರ್ಣ, ಹೊಸಬೆಟ್ಟು, ಚಕ್ರತಾಳ ವಾದಕ ಸುರೇಶ್ ಕಾಮತ್ ಅವರಿಗೆ 25 ಸಾವಿರ ನಗದಿನೊಂದಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂದರ್ಭ ಯಕ್ಷಗಾನದ ಸಾಧನೆಗಾಗಿ ಅಗರಿ ರಘುರಾಮ ಭಾಗವತರು,  ಅರುಣ್  ಪೈ ಮಾರಿಗುಡಿ ಸುರತ್ಕಲ್,ಶಿವರಾಮ್  ಪಣಂಬೂರು,  ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್  ಮಂಬಯಿ,ಮಾಧವ ಶೆಟ್ಟಿ ಬಾಳ, ಜನಾರ್ದನ್ ಡಿ ಶೆಟ್ಟಿಗಾರ್ ಸುರತ್ಕಲ್,ರವಿ ಕುಮಾರ್ ಸುರತ್ಕಲ್, ಅಪೂರ್ವ ಸುರತ್ಕಲ್ ಇವರಿಗೆ ಗೌರವಾರ್ಪಣೆ  ನಡೆಯಿತು.

Pages