ಮಿಥುನ್ ರೈಗೆ ಟಿಕೆಟ್ ಸಿಗದ ಕಾರಣ ಮತ್ತೆ NSUI 80 ಸದಸ್ಯರ ಸಾಮೂಹಿಕ ರಾಜೀನಾಮೆ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಿಥುನ್ ರೈಗೆ ಟಿಕೆಟ್ ಸಿಗದ ಕಾರಣ ಮತ್ತೆ NSUI 80 ಸದಸ್ಯರ ಸಾಮೂಹಿಕ ರಾಜೀನಾಮೆ

Share This
ಮಂಗಳೂರು: ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಚುನಾವಣಾ ಸ್ಪರ್ಧಿಸಲು ಟಿಕೆಟ್ ನೀಡದ ಕಾರಣ ಕಾಂಗ್ರೆಸ್ ವಿದ್ಯಾರ್ಥಿ ಘಟಕ NSUI ಇದರ ಬೇರೆ ಬೇರೆ ಕಾಲೇಜಿನ 80 ಮಂದಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
NSUI 80 members Resignation In Support Of  Mithun rai
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ NSUI ನಾಯಕರು, ಮಿಥುನ್ ರೈ ನಮ್ಮ ನಾಯಕರಾಗಿದ್ದು ನಮ್ಮ ಸಂಘಟನೆಯನ್ನು ಸಂಘಟಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಅಂತಹ ಯುವ ನಾಯಕ ಮಿಥುನ್ ರೈಗೆ ಟಿಕೆಟ್ ನೀಡದಿರುವುದು ಅಸಮಾಧಾನ ತಂದಿದೆ. ಮಿಥುನ್ ನಮ್ಮ ನಾಯಕರು, ನಾವು ಅವರ ಬೆಂಬಲಿಗಿದ್ದೇವೆ. ಅವರಿಗೆ ಅನ್ಯಾಯವಾಗಲು ಬೀಡಲಾರೆವು ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ NSUIನ ರೂಪೇಶ್ ರೈ, ಸುಮನ್ ಶೆಟ್ಟಿ, ಅಭಿಷೇಕ್ ಉಳ್ಳಾಲ್, ಜೋಸ್ವಾ, ಸಾವುದ್ ಸುಳ್ಯ ಹಾಗೂ ಮತ್ತಿತರು ಉಪಸ್ಥಿತರಿದ್ದರು.

Pages