ಶ್ರೀ ರಾಮಕೃಷ್ಣ ಕಾಲೇಜಿಗೆ ಹೊಸ ಕಂಪ್ಯೂಟರ್ ಲ್ಯಾಬ್: ಯೂನಿಯನ್ ಬ್ಯಾಂಕ್ ಸಿ.ಇ.ಒ ರಾಜ್'ಕಿರಣ್ ರೈ ಜಿ ಅವರಿಂದ ಉದ್ಘಾಟನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶ್ರೀ ರಾಮಕೃಷ್ಣ ಕಾಲೇಜಿಗೆ ಹೊಸ ಕಂಪ್ಯೂಟರ್ ಲ್ಯಾಬ್: ಯೂನಿಯನ್ ಬ್ಯಾಂಕ್ ಸಿ.ಇ.ಒ ರಾಜ್'ಕಿರಣ್ ರೈ ಜಿ ಅವರಿಂದ ಉದ್ಘಾಟನೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜಿಗೆ ಯೂನಿಯನ್ ಬ್ಯಾಂಕಿನ ಸೋಷಿಯಲ್ ಫೌಂಡೇಶನ್ ವತಿಯಿಂದ 43 ಕಂಪ್ಯೂಟರ್‍ಗಳ ಸುಸಜ್ಜಿತ ಕಂಪ್ಯೂಟರ್ ಲ್ಯಾಬನ್ನು ದೇಣಿಗೆಯಾಗಿ ನೀಡಲಾಯಿತು. ಈ ಲ್ಯಾಬನ್ನು ಯೂನಿಯನ್ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಒ ಆದ ರಾಜ್‍ಕಿರಣ್ ರೈ ಜಿ ಅವರು (24 ಫೆಬ್ರವರಿ 2018) ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘವು ಲಾಭರಹಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸೋಷಿಯಲ್ ಫೌಂಡೇಶನ್‍ನ ಚೀಫ್ ಎಕ್ಸಿಕ್ಯೂಟಿವ್ ಶ್ರೀ ಪಿ.ಕೆ. ಸಿಂಗ್, ಪ್ರಾದೇಶಿಕ ಮುಖ್ಯಸ್ಥರಾದ ಅಶೋಕ್ ಕುಮಾರ್‍ದಾಸ್ ಉಪಸ್ಥಿತರಿದ್ದರು. ಬಂಟರ ಯಾನೆ ನಾಡವರ ಮಾತೃಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿಯವರು ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ರವೀಂದ್ರನಾಥ ಎಸ್. ಶೆಟ್ಟಿಯವರು ಧನ್ಯವಾದ ಅರ್ಪಿಸಿದರು.

ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಬಿ. ಕೃಷ್ಣಪ್ರಸಾದ್ ರೈಯವರು, ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿಶೋರ್‍ಕುಮಾರ್ ರೈ ಶೇಣಿ ಮತ್ತು ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Pages