ಬಂಟ್ಸ್ ನ್ಯೂಸ್ ವಲ್ಡ್, ಪುಣೆ: ಪುಣೆಯಲ್ಲಿ ನಿರ್ಮಾಣಗೊಂಡಿರುವ ಪುಣೆ ಬಂಟರ ಸಾಂಸ್ಕೃತಿಕ
ಭವನ ಒನಿಮಜಲು ಜಗನ್ನಾಥ ಬಿ. ಶೆಟ್ಟಿ ಕಲ್ಚರಲ್ ಸೆಂಟರ್ ಇದರ ಉದ್ಘಾಟನಾ ಸಮಾರಂಭವು ಎ.7-8ರಂದು ನಡೆಯಲಿದೆ.
ಪುಣೆ ಬಂಟರ ಭವನವು
ಸರಿ ಸುಮಾರು 30ಕೋ. ರೂ.ಗಳ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣಗೊಂಡಿದೆ. ಈ ಭವನವು 1,200 ಆಸನದ ವ್ಯವಸ್ಥೆಯುಳ್ಳ
ವಿಶಾಲ ಸಭಾಭವನ, 200 ಆಸನವುಳ್ಳ ಪ್ರತ್ಯೇಕ ಕಿರು ಸಭಾಭವನವನ್ನು ಒಳಗೊಂಡಿದೆ. ಸಭಾಭವನನದಲ್ಲಿ ಗುರು
ನಿತ್ಯಾನಂದ ಸ್ವಾಮಿಗಳ ಸುಂದರ ಮೂರ್ತಿ, ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರು ಹಾಗೂ ಮಹಾಗಣಪತಿ
ದೇವರ ಪೂಜಾ ಮಂಟಪ ಹಾಗೂ ಇನ್ನಿತರ ಹಲವು ವಿಶೇಷತೆಗಳನ್ನು ಹೊಂದಿದೆ.