ಬಂಟ್ಸ್ ನ್ಯೂಸ್ ವಲ್ಡ್, ಕತಾರ್: ಕತಾರ್ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ
ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂಡಂಬೈಲು ರವಿ ಶೆಟ್ಟಿ ಅವರು ಬಹುಮತದಿಂದ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ರವಿಶೆಟ್ಟಿಯವರು
ಸುಮಾರು 20 ವರ್ಷದಿಂದ ಕತಾರಿನ ನಿವಾಸಿಯಾಗಿರುತ್ತಾರೆ. ಜನಸೇವೆಯೇ
ಜನಾರ್ಧನ ಸೇವೆ ಎಂಬ ನುಡಿಯನು
ಪರಿಪೂರ್ಣವಾಗಿ ನಂಬಿರುವ ಅವರು ಅದರಂತೆ
ನಡೆದುಕೊಂಡಿದ್ದಾರೆ. ಕತಾರಿನ ತುಳುಕೂಟದ ಅಧ್ಯಕ್ಷರಾಗಿ
ದಾಖಲೆಯ ಮೂರು ಅವಧಿಗೆ ಸೇವೆ
ಸಲ್ಲಿಸಿರುತ್ತಾರೆ. ಇದಲ್ಲದೆ, ಬಂಟ್ಸ್ ಕತಾರಿನ ಸಂಸ್ಥಾಪಕ
ಅಧ್ಯಕ್ಷರೂ ಆಗಿ ಅವರ ಅಳಿಲು
ಸೇವೆ ಸಲ್ಲಿಸಿರುತ್ತಾರೆ.
ಕರ್ನಾಟಕದ
ಸಹೋದರ ಸಂಸ್ಥೆಗಳ ಕಾರ್ಯಕ್ರಮದಲ್ಲೂ ಸಕ್ರಿಯನಾಗಿರುವ ಶ್ರೀಯುತರು ಹಲವಾರು ಸಂಸ್ಥೆಗಳಿಗೆ ಪ್ರಾಯೋಜಕತ್ವರಾಗಿ
ಸೇವೆ ಸಲ್ಲಿಸಿರುತ್ತಾರೆ.
ಅಷ್ಟೇ ಅಲ್ಲದೇ, ನಮ್ಮ ತಾಯಿನಾಡಿನ
ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯನಾಗಿ
ಪಾಲ್ಗೊಂಡು, ಹಲವಾರು ಕಾರ್ಯಕ್ರಮಗಳ ಪ್ರಾಯೋಜಕರಾಗಿರುತ್ತಾರೆ.
ರವಿಶೆಟ್ಟಿಯವರ
ಸಹಭಾಗಿತ್ವದಲ್ಲಿ ನಡೆಯುತ್ತಿರುವ ಎ.ಟಿ.ಎಸ್
ಸಂಸ್ಥೆಯ ಮೂಲಕ ನಮ್ಮ ಕರ್ಮಭೂಮಿ
ಕತಾರಿನ ಮಣ್ಣಿಗೆ ಅವರ ಕಿಂಚಿತ್
ಸೇವೆ ಅರ್ಪಣೆಯಾದರೆ, ತನ್ಮೂಲಕ ಸಾವಿರಾರು ಜನರಿಗೆ
ಉದ್ಯೋಗಭಾಗ್ಯ ಒದಗಿಸಿದ ನೆಮ್ಮದಿ ಧನ್ಯತೆ
ಅವರಿಗಿದೆ.
ಇಂತಹ ಅಪರೂಪದ ವ್ಯಕ್ತಿಗಳು ಕೇವಲ
ವ್ಯಕ್ತಿಸ್ವರೂಪರಲ್ಲ, ಬದಲಾಗಿ ಅವರೊಂದು ಶಕ್ತಿರೂಪ.
ಅವರು ಯಾವುದೇ ಸಂಘ-ಸಂಸ್ಥೆಗಳ
ಆಸ್ತಿಯಲ್ಲ. ಬದಲಾಗಿ ಪರಿಪೂರ್ಣರಾಗಿ ಕತಾರಿನ
ಭಾರತೀಯ ಸಮುದಾಯಕ್ಕೆ ಸಮಾನ್ಯವಾಗಿ ಮತ್ತು ವಿಶೇಷವಾಗಿ ಅಖಂಡ
ಕನ್ನಡ ಸಮುದಾಯಕ್ಕೆ ಸೇರಿದ ವ್ಯಕ್ತಿ ಶಕ್ತಿರೂಪಿ ಆಸ್ತಿ.
ರವಿ ಶೆಟ್ಟಿ ಅವರ
ನಿಸ್ವಾರ್ಥ ಸಮಾಜ ಸೇವೆಗಾಗಿ ಪ್ರತಿಷ್ಠಿತ
ಆರ್ಯಭಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,
ರಜತ ರಂಗ ಮತ್ತು ಕದಂಬ
ಪ್ರಶಸ್ತಿ ಮತ್ತು ಹಲವಾರು ಇನ್ನಿತರ
ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.