ಮಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ ಏಷ್ಯಾದ ಪ್ರಪ್ರಥಮ 3ಡಿ 8ಕೆ ಪ್ಲಾನಿಟೋರಿಯಂ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ ಏಷ್ಯಾದ ಪ್ರಪ್ರಥಮ 3ಡಿ 8ಕೆ ಪ್ಲಾನಿಟೋರಿಯಂ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ನಗರದ ಪಿಲಿಕುಳ ಪ್ರಾದೇಶಿಕ  ವಿಜ್ಞಾನ ಕೇಂದ್ರದ ಆವರಣದಲ್ಲಿ ಏಷ್ಯಾದ ಪ್ರಪ್ರಥಮ 3ಡಿ 8ಕೆ ಸ್ವಾಮಿ ವಿವೇಕಾನಂದ ತಾರಾಲಯವು ಮಾ.1ರಂದು ಉದ್ಘಾಟನೆಗೊಳ್ಳಲಿದೆ.
ಕರ್ನಾಟಕ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ 36ಕೋಟಿ ರೂ. ಅನುದಾನದಿಂದ ಸ್ವಾಮಿ ವಿವೇಕಾನಂದ ತಾರಾಲಯವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮೂಲಕ ಸ್ಥಾಪನೆಗೊಂಡಿದೆ. ಈ ತಾರಾಲಯದಲ್ಲಿ 18ಮೀ ವ್ಯಾಸದ ಆಧುನಿಕ ತಂತ್ರಜ್ಞಾನದ ನ್ಯಾನೋಸಿಮ್ ಡೋಮ್’ನ್ನು 15 ಡಿಗ್ರಿ ಕೋನದಲ್ಲಿ ಇರಿಸಲಾಗಿದೆ. ಅಪ್ಟೋ ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಟನ್ ಸಿಸ್ಟಂಗಳನ್ನು ಅಳವಡಿಸಿರುವ ಈ ಹೈಬ್ರಿಡ್ ಆಕ್ಟಿವ್ 3ಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಪ್ರದರ್ಶನದಲ್ಲಿ ತಲ್ಲೀನರಾಗುವ ಹೊಸ ಅನುಭವವನ್ನು ನೀಡುತ್ತದೆ.

ಈ ತಾರಾಲಯದ ಪ್ರವೇಶ ಶುಲ್ಕ 60ರೂ (ದೊಡ್ಡವರಿಗೆ), 25ರೂ (ಮಕ್ಕಳಿಗೆ) ನಿಗದಿಯಾಗಿದ್ದು ಪ್ರತಿದಿನ 25 ನಿಮಿಷಗಳ 6 ಪ್ರದರ್ಶನಗಳ ನಡೆಯಲಿವೆ. ಅಲ್ಲದೇ bookmyshow ತಾಣದಲ್ಲಿ 100ರೂ ಶುಲ್ಕವನ್ನು ನಿಗದಿಪಡಿಸಲಾಗಿದ್ದು ಈ 100ರೂ ಟಿಕೇಟಿನಲ್ಲಿ ತಾರಾಲಯ ಪ್ರದರ್ಶನದ ಜತೆಗೆ ಪಿಲಿಕುಳ ನಿಸರ್ಗಧಾಮವನ್ನು ಸಂಪೂರ್ಣವಾಗಿ ಸುತ್ತುವ ವಿಶೇಷ ಕೊಡುಗೆಯನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನಕೇಂದ್ರ ನೀಡಿದೆ.

ಸ್ವಾಮಿ ವಿವೇಕಾನಂದ ತಾರಾಲಯವು ಏಷ್ಯಾದಲ್ಲಿ ಪ್ರಥಮ ಹಾಗೂ ವಿಶ್ವದ 21ನೇ ತಾರಾಲಯವಾಗಿದೆ.

Pages