ಪಡುಬಿದ್ರೆ ಬಂಟರ ಸಂಘದ “ನಾರಿ ರೂವಾರಿ” ಸ್ಪರ್ಧೆಯಲ್ಲಿ ಸುರತ್ಕಲ್ ಸಂಘಕ್ಕೆ ಪ್ರಥಮ ಸ್ಥಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಡುಬಿದ್ರೆ ಬಂಟರ ಸಂಘದ “ನಾರಿ ರೂವಾರಿ” ಸ್ಪರ್ಧೆಯಲ್ಲಿ ಸುರತ್ಕಲ್ ಸಂಘಕ್ಕೆ ಪ್ರಥಮ ಸ್ಥಾನ

Share This
ಬಂಟ್ಸ್ ನ್ಯೂಸ್ ವಲ್ಡ್, ಸುರತ್ಕಲ್: ಪಡುಬಿದ್ರಿ  ಬಂಟರ ಸಂಘದ ಮಹಿಳಾ ವಿಭಾಗವು  ಪಡುಬಿದ್ರಿ ಬಂಟರ ಭವನದಲ್ಲಿ ಆಯೋಜಿಸಿದ್ದ ನಾರಿ ರೂವಾರಿ ಕಾರ್ಯಕ್ರಮದಂಗವಾಗಿ ಏರ್ಪಡಿಸಿದ್ದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯು 50 ಸಾವಿರ ರೂ. ನಗದು ಶಾಶ್ವತ ಫಲಕದೊಂದಿಗೆ ಕೂಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ.
ಪಡುಬಿದ್ರೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಎಸ್. ಶೆಟ್ಟಿ, ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಬಿ.ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಪದಾಧಿಕಾರಿಗಳಾದ ಬೇಬಿ ಶೆಟ್ಟಿ ಕುಡುಂಬೂರು, ವೀಣಾ ಶೆಟ್ಟಿ, ವಿಜಯಭಾರತಿ ಶೆಟ್ಟಿ, ಚಿತ್ರಾ ಜೆ. ಶೆಟ್ಟಿ, ಭಾರತಿ ಜಿ. ಶೆಟ್ಟಿ, ತಂಡದ ನಿರ್ದೇಶಕಿ ರಾಜೇಶ್ವರಿ ಡಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಹೆಣ್ಣು ಶಕ್ತಿ ಸ್ವರೂಪಿಣಿ, ಪ್ರಕೃತಿಯ ಪ್ರತಿರೂಪ, ಪ್ರಕೃತಿಯ ಪಂಚ ತತ್ವಗಳು ಅವಳೊಳಗೆ ಅಡಕವಾಗಿವೆ ಎನುವುದನ್ನು ನೃತ್ಯ, ಸಮೂಹ ಗಾಯನ, ಅಭಿನಯ, ಪ್ರಹಸನಗಳ ಮೂಲಕ ಒಂದೊಂದಾಗಿ ರಂಗದ ಮೇಲೆ ನಿರೂಪಿಸುತ್ತಾ ಸಾಗಿದ ಪ್ರದರ್ಶನ, ಸುಂದರವಾದ ರಂಗ ಸಜ್ಜಿಕೆ, ಬೆಳಕಿನ ವಿನ್ಯಾಸದೊಂದಿಗೆ ಕಾರ್ಯಕ್ರಮ ಮೂಡಿಬಂದಿತ್ತು. ರಾಜೇಶ್ವರಿ ಡಿ ಶೆಟ್ಟಿ ಅವರ ಕಲ್ಪನೆ, ಸಾಹಿತ್ಯ  ನಿರ್ದೇಶನದಲ್ಲಿ ಮೂಡಿ ಬಂದ ಪ್ರಹಸನ ಪ್ರಥಮ ಸ್ಥಾನ ಗೆದ್ದುಕೊಂಡಿತು. ಕೂಟದಲ್ಲಿ ಶ್ರೇಷ್ಟ ನಟನೆ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಮಹಿಳಾ ವೇದಿಕೆಯ ಸದಸೆÀ್ಯ ಪ್ರತಿಷ್ಠಾ ರೈ ಚೇಳ್ಯಾರ್, ದಾಕ್ಷಾಯಿನಿ ಪಾತ್ರದ ನಿರ್ವಹಣೆಗಾಗಿ ಪಡೆದುಕೊಂಡರು.

20 ನಿಮಿಷಗಳ ಕಾಲಾವಧಿಯ  ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ  ಮಹಿಳಾ ತಂಡದಲ್ಲಿ ಮೂರು ತಿಂಗಳ ಮಗುವಿನಿಂದ  ಹಿಡಿದು 70ರ ಹರೆಯದವರೆಗೆ ಸುಮಾರು 65 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಕೂಟದಲ್ಲಿ ಒಟ್ಟು 12 ತಂಡಗಳು  ಭಾಗವಹಿಸಿತ್ತು. ತೀರ್ಪುಗಾರರಾಗಿ ಕೃಷ್ಣಮೂರ್ತಿ ಕವತ್ತಾರು, ಗುರುಪ್ರಸಾದ್ ಹೆಗ್ಡೆ, ಡಾ. ನಿಕೇತನ ಉಡುಪಿ ಭಾಗವಹಿಸಿದ್ದರು.

Pages