ಪ್ರತಿಷ್ಠಿತ “ಕ್ಲೈಮೇಟ್ ಕಂಟ್ರೋಲ್ ಅವಾರ್ಡ್ 2017”ನ ಆಯ್ಕೆ ಸಮಿತಿಯ ಸದಸ್ಯರಾಗಿ ಕಂದಾವರ ಸತೀಶ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪ್ರತಿಷ್ಠಿತ “ಕ್ಲೈಮೇಟ್ ಕಂಟ್ರೋಲ್ ಅವಾರ್ಡ್ 2017”ನ ಆಯ್ಕೆ ಸಮಿತಿಯ ಸದಸ್ಯರಾಗಿ ಕಂದಾವರ ಸತೀಶ ಶೆಟ್ಟಿ

Share This
FB Page LIKE ಮಾಡಿ ಬೆಂಬಲಿಸಿ
ಬಂಟ್ಸ್ ನ್ಯೂಸ್ ವಲ್ಡ್, ದುಬೈ: ಮದ್ಯ ಪ್ರಾಚ್ಯದ ಪ್ರತಿಷ್ಠಿತ ಪ್ರಶಸ್ತಿಕ್ಲೈಮೇಟ್  ಕಂಟ್ರೋಲ್ ಅವಾರ್ಡ್ 2017”   ಬಾರಿಯ ಆಯ್ಕೆ ಸಮಿತಿಯ ಸದಸ್ಯರಾಗಿ ಕಂದಾವರ ಸತೀಶ ಶೆಟ್ಟಿ ಯವರು ನಾಮನಿರ್ದೇಶನ ಹೊಂದಿರುತ್ತಾರೆ. ಕಂದಾವರ ಸತೀಶ ಶೆಟ್ಟಿಯವರು ಇತ್ತೀಗಷ್ಟೇ  ದುಬೈನಲ್ಲಿ  “ಎನೊಕ್ ಎನರ್ಜಿ ಅವಾರ್ಡ್ನ್ನು ಪಡೆದುಕೊಂಡಿದ್ದು ಇದೀಗ ಪ್ರತಿಷ್ಠಿತ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿರುವದು ನಾವು  ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಕಂದಾವರ ಅವರು ದುಬೈನ ಸರ್ಕಾರದ ನ್ಯಾಷನಲ್ ಆಯಿಲ್ ಕಂಪೆನಿ  ENOC ಗ್ರೂಪ್ ಎಂಜಿನಿಯರಿಂಗ್  ಅಂಡ್ ಪ್ರಾಜೆಕ್ಟ್ಸ್ ಮ್ಯಾನೇಜ್ಮೆಂಟ್ನಲ್ಲಿ ಹಿರಿಯ ಇಂಜಿನಿಯರ್ರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೈಗಾರಿಕಾ ವಲಯದ ಕಟ್ಟಡ ಮತ್ತು ಅನಿಲ ಆವರಣಗಳ ತಾಪನ, ಪವನ ಮತ್ತು ವಾತಾನುಕೂಲ ತಜ್ಞರಾಗಿ ಕಳೆದ 15 ವರ್ಷಗಳಿಂದ ಯುಎಇಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ದುಬೈ ಕ್ಯಾಂಪಸ್ ಹೆರಿಯಟ್ ವ್ಯಾಟ್ (Heriot Watt University) ವಿಶ್ವ ವಿದ್ಯಾನಿಲಯದ ಶಕ್ತಿ ವಿಭಾಗದಲ್ಲಿ ವಿಜ್ಞಾನದ ಸ್ನಾತಕೋತ್ತರ (ಎಂ  ಎಸ್ಸಿ) ಪದವಿ ಮತ್ತು ಕರ್ನಾಟಕದ ದಾವಣಗೆರೆಯ BIET (ಬಾಪೂಜಿ ಇನ್ಸ್ಟಿಟ್ಯೂಟ್ ಒಫ್ ಇಂಜಿನಿಯರಿಂಗ್ ಟೆಕ್ನಾಲಜಿ)ಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಅತ್ತುನ್ನತ ಶ್ರೇಣಿಯಲ್ಲಿ ಪಡೆದಿರುತ್ತಾರೆ.

ಕಂದಾವರ ಸತೀಶ ಶೆಟ್ಟಿಯವರು ಕುಂದಾಪುರದ ಬಳ್ಲ್ಕೂರು ಗ್ರಾಮದಕಂದಾವರಬಂಟ ನಾಡವ ಕುಟುಂಬದರಾಗಿದ್ದು, ತಂದೆ ಮೊಳಹಳ್ಳಿ ಗೋಪಾಲಕೃಷ್ಣ ಶೆಟ್ಟಿ ಹಾಗು ತಾಯಿ ಕಂದಾವರ ದೇವಕಿ ಶೆಟ್ಟಿಯವರ ನಾಲ್ಕನೆ ಮಗನಾಗಿರುತ್ತಾರೆ. ಇವರು ಪ್ರಾಥಮಿಕ ಶಿಕ್ಶಣವನ್ನ ಬಲ್ಕೂರ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಿಕ್ಷಣವನ್ನು ಬಾಯ್ಸ್ ಹೈಸ್ಕೂಲ್ ಬಸ್ರುರನಲ್ಲಿ ಪಡೆದಿರುತ್ತಾರೆಇವರು ಕುಂದಾಪುರದ  ಬಂಡಾರಕರ್ಸ ಕಾಲೇಜನ ವಿಜ್ಞಾನ ವಿಭಾಗದ ಹಳೆವಿದ್ಯಾರ್ಥಿ ಆಗಿದ್ದು, ಕುಂದಾಪುರದ ಯುವ ಬಂಟರ ಸಂಘದ ಆರಂಭಿಕ ಗೌರವ ಮಹಾಪೊಸಕರಾಗಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದಾರೆಇವರು ಆರಂಭಿಕ ಶಿಕ್ಷಣವನ್ನ ಸರ್ಕಾರಿ ಶಾಲೆಯಲ್ಲಿ ಪಡೆದಿರುವುದು ಗಮನಾರ್ಹ ಸಂಗತಿ.

ಈಬಾರಿಯ ಪ್ರತಿಷ್ಠಿತ  “ಕ್ಲೈಮೇಟ್ ಕಂಟ್ರೋಲ್ ಅವಾರ್ಡ್ 2017” ಸೆರೆಮನಿ, ಅಲ್ ಯಸ್ಯಾಟ್ ಬಾಲ್ರೂಮ್, ಅಲ್ ಮೂರೂಜ್ ರೋಟನ, ದುಬೈ ನಲ್ಲಿ 27ನೇ ನವಂಬರ್ ನಲ್ಲಿ ಯುಎಇ ಮಿನಿಸ್ಟ್ರಿ ಒಫ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಮಧ್ಯಸ್ಥಿಕೆಯಲ್ಲಿ ನೆಡೆಯಲಿದೆ. ಮಧ್ಯಪ್ರಾಚ್ಯದ ಉತ್ಪಾದಕರು ಮತ್ತು ಉಧ್ಯಮಿಗಳು ತಮ್ಮ ಉತ್ಪನ್ನದ ವಿಶೇಷತೆಯು ಹೇಗೆ ವಿಶ್ವದ ಹವಾಮಾನ ಬದಲಾವಣೆಗೆ ಮತ್ತು ಸುಸ್ಥಿರತೆಯಲ್ಲಿ ಇಡಲು ಕೆಲಸಮಾಡುತ್ತದೆ ಎನ್ನೂದನ್ನ ಪ್ರದಶಿಸಬೇಕಾಗುತ್ತದೆ.

Pages