ಬಂಟ್ಸ್ ನ್ಯೂಸ್
ವಲ್ಡ್, ಬೆಂಗಳೂರು: ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ದುಡಿಯುತ್ತಿದ್ದು ಪುರುಷರಷ್ಟೇ ಸರಿ ಸಮಾನವಾದ
ಸಾಧನೆ ಮಾಡುತ್ತಿದ್ದಾರೆ. ಅತಂಹ ಅನೇಕರಲ್ಲಿ ಉದ್ಯಮರಂಗದಲ್ಲಿ ಸಾಧನೆ ಮಾಡುತ್ತಿರುವ ಅಶ್ವಿನಿ ರೈ
ಆತ್ರಾಡಿ ಅವರು ಒಬ್ಬರೆನ್ನಲು ಹೆಮ್ಮೆಯಾಗುತ್ತದೆ.
ಮೂಲತಃ ಉಡುಪಿಯ ಆತ್ರಾಡಿ ಗ್ರಾಮದ ಪರೀಕ ಊರಿನವರಾದ ಅಶ್ವಿನಿ ಅವರು ಚಿತ್ತರಂಜನ್
ರೈ ಹಾಗೂ ಉಷಾ ಸಿ. ರೈ ದಂಪತಿಯ ಮಗಳು. ಎಂಬಿಎ ಪದವೀಧರರಾಗಿರುವ ಅಶ್ವಿನಿ ರೈ ಇಂದು ತಮ್ಮದೇ ಉದ್ಯಮ
ಹುಟ್ಟು ಹಾಕುವ ಮೂಲಕ ಉದ್ಯಮರಂಗದಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ.
ಕಿರಿಯ ವಯಸ್ಸಿಗೆ ತನ್ನ ಸ್ವಂತ ಉದ್ಯಮ: ಪ್ರಾರಂಭದಲ್ಲಿ ICICI, DELLನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅಶ್ವಿನಿ ರೈ ಅವರು ನಂತರದ
ದಿನಗಳಲ್ಲಿ ತಮ್ಮ ಸ್ವಂತಃ ಉದ್ಯಮ ಮಾಡುವ ಕನಸನ್ನು ಕಂಡರು. ಈ ನಿಟ್ಟಿನಲ್ಲಿ ತಮ್ಮ ಉದ್ಯೋಗವನ್ನು
ತೊರೆದು ತನ್ನದೇ ಆದ ಸ್ವಂತ ಉದ್ಯಮ ಕಟ್ಟಿಕೊಂಡರು.
ಉತ್ತಮ ಬೆಳಕು ನೀಡುವ ಅಶ್ವಿನಿ ರೈ ಅವರ Albright ಉದ್ಯಮ: ಅಶ್ವಿನಿ ರೈ ಅವರು ಹುಟ್ಟು ಹಾಕಿದ Albright ಸಂಸ್ಥೆಯು ಇಂದು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಹುಟ್ಟಿಹಾಕಿದೆ. ಉದ್ಯಮರಂಗದಲ್ಲಿ ವೇಗವಾಗಿ
ಬೆಳೆಯುತ್ತಿರುವ Albright ಸಂಸ್ಥೆಯು ತನ್ನ ಉತ್ತಮ ಗುಣಮಟ್ಟದ
LED ಉಪಕರಣಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಅಶ್ವಿನಿ ರೈ ಅವರ ಕನಸಿನ ಕೂಸು Albright ಬ್ರಾಂಡ್ನ LED ತಂತ್ರಜ್ಞಾನದಲ್ಲಿ ಸಿದ್ದಗೊಳ್ಳುತ್ತಿರುವ
ನಾನಾ ರೀತಿಯ ಬೆಳಕಿನ ಉಪಕರಣಗಳು ಇಂದು ದೇಶದೆಲ್ಲೆಡೆ ಲಭ್ಯವಿದೆ. ಈ ಉಪಕರಣಗಳು ಕಡಿಮೆ ವಿದ್ಯುತ್
ಬಳಸಿಕೊಂಡು ಉತ್ತಮ ಬೆಳಕು ನೀಡುತ್ತಿರುವುದು Albright ಬ್ರಾಂಡ್ನ ವಿಶೇಷತೆಯಾಗಿದೆ.
ಅಶ್ವಿನಿ ರೈ ಅವರ ಈ ಉದ್ಯಮದ ಹಿಂದಿನ
ಉದ್ದೇಶ: “ ಇಂದು ವಿದ್ಯುತ್ ಸಮಸ್ಯೆ ನಿವಾರಣೆ
LED ದೀಪದಿಂದ ಮಾತ್ರ ಸಾಧ್ಯ. ಕಡಿಮೆ ವಿದ್ಯುತಿನಲ್ಲಿ LED ದೀಪಗಳು ಬೆಳಗುತ್ತವೆ. ಮುಂದಿನ ದಿನಗಳಲ್ಲಿ
ದೇಶದೆಲ್ಲೆಡೆ ಲೆಡ್ ಉಪಕರಣಗಳ ಬಳಕೆ ಹೆಚ್ಚಲಿದ್ದು ಈ ಹಂತದಲ್ಲಿ Albright LED ದೀಪಗಳು ದೇಶದ ಪ್ರತಿಯೊಂದು ಭಾಗಕ್ಕೂ ತಲುಪುವ ಗುರಿ ಹೊಂದಿದೆ” ಎಂದು ಅಶ್ವಿನಿ ರೈ ಅವರು ಹೇಳುತ್ತಾರೆ.
ಅಲ್ಲದೇ ಇನ್ನೂ
ಬೆಳಕು ಕಾಣದ ದೇಶದ ಬಹುತೇಕ ಗ್ರಾಮೀಣ ಭಾಗದಲ್ಲಿ ಬೆಳಕು ನೀಡುವ ಸದುದ್ದೇಶವನ್ನು Albright ಸಂಸ್ಥೆ ಹೊಂದಿದ್ದು ತಮ್ಮ ಉತ್ಪನ್ನವನ್ನು ವಿದೇಶಗಳಿಗೆ ರಫ್ತು ಮಾಡುವ ಬಯಕೆಯನ್ನು ಅಶ್ವಿನಿ ರೈ ಅವರು ವ್ಯಕ್ತ ಪಡಿಸಿದ್ದಾರೆ.
ಈ ರೀತಿ ಉದ್ಯಮರಂಗದಲ್ಲಿ ಹೊಸ ಅಲೆ ಸೃಷ್ಠಿಸುವ ಮೂಲಕ ಸಾಧನೆ ಮಾಡುತ್ತಿರುವ ಬಂಟ ಸಮಾಜದ ದಿಟ್ಟ ಹೆಣ್ಣು ಅಶ್ವಿನಿ ರೈ ಅವರು ಪ್ರತಿಯೊಂದು
ಕಾರ್ಯದಲ್ಲೂ ಯಶಸ್ಸು ಲಭಿಸಲೆಂದು ಹಾರೈಸೋಣ.
ಬರಹ: ರವಿರಾಜ್ ಶೆಟ್ಟಿ ಕಟೀಲು www.buntsnews.com