ಜಗನ್ನಾಥ ಶೆಟ್ಟಿ ಬಾಳರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಗನ್ನಾಥ ಶೆಟ್ಟಿ ಬಾಳರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು : ಹಿರಿಯ ಪತ್ರಕರ್ತ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಜಗನ್ನಾಥ ಶೆಟ್ಟಿ ಬಾಳ ಇವರಿಗೆ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಜಗನ್ನಾಥ ಶೆಟ್ಟಿಯವರು ಪತ್ರಿಕೋದ್ಯಮದಲ್ಲಿ 30 ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ.  1987 ರಲ್ಲಿ ವಡ್ಡರ್ಸೆ ರಘರಾಮ ಶೆಟ್ಟರ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಸೇರ್ಪಡೆಗೊಂಡ ಇವರ ಈಗ ಜಯಕಿರಣ ಕನ್ನಡ ದೈನಿಕದಲ್ಲಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವವಣೆ ಮಾಡುತ್ತಿದ್ದಾರೆ.

ಇವರಿಗೆ 2008ರಲ್ಲಿ ..ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. 2011ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ  ಸದಸ್ಯರಾಗಿ ಆಯ್ಕೆಯಾಗಿದ್ದರುಕಳೆದ 3 ವರ್ಷಗಳಿಂದ ..ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

ತುಳು ನಾಟಕ ರಂಗಕ್ಕೆ ಸಂಬಂಧಿಸಿದ 2 ಪುಸ್ತಕ ರಚನೆ ನಂದಿಕೇಶ್ವರ ನಾಟಕ ಸಂಘದ ಕುರಿತು ಪುಸ್ತಕ ರಚನೆ ಮಾಡಿದ್ದಾರೆ ಇತ್ತೀಚೆಗೆ ತುಳು ಸಿನಿಮಾವಲೋಕನ ಕೃತಿ ರಚಿಸಿ ಬಿಡುಗಡೆ ಮಾಡಿದ್ದಾರೆ. ಬಂಟರ ಸಂಘದ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಇವರು ಭಾಗವಹಿಸಿದ್ದೇ ಅಲ್ಲದೆ ಸುರತ್ಕಲ್ ಬಂಟರ ಸಂಘ ಮತ್ತು ಬಂಟರ ಮಾತೃ ಸಂಘದ ಪದಾಧಿಕಾರಿಯಾಗಿ ಸೇವೆ ಮಾಡುತ್ತಿದ್ದಾರೆ. 52  ವರ್ಷ ವಯಸ್ಸಿನ ಇವರು ಇಪ್ಪತ್ತೆರಡನೇ ವಯಸ್ಸಿಯಲ್ಲಿ ಪತ್ರಿಕಾರಂಗಕ್ಕೆ ಪ್ರವೇಶಿಸಿದ್ದರು.

Pages