ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು:
ಬಂಟರ ಯಾನೆ ನಾಡವರ ಮಾತೃ
ಸಂಘ ಮಂಗಳೂರು
ತಾಲೂಕು ಸಮಿತಿಯ ವತಿಯಿಂದ ತಾಲೂಕಿನ
ವಿಶೇಷ ಚೇತನರಿಗೆ ಸಹಾಯ ಹಸ್ತ, ಸಮಾಜದ
ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು
ವಿದ್ಯಾರ್ಥಿ ವೇತನ ಹಾಗೂ ವೈವಾಹಿಕ
ಆರ್ಥಿಕ ಸಹಾಯ ನೀಡಿಕೆ ಸಮಾರಂಭವು
ಮಾತೃಸಂಘದ ಅಮೃತೋತ್ಸವ ಕಟ್ಟಡದಲ್ಲಿ ಜರಗಿತು.
ಮಾತೃಸಂಘದ
ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್
ರೈಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ ಜಲ್ಲಾ
ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ
ಸಿಎ ಶಾಂತಾರಾಮ ಶೆಟ್ಟಿ ಮಾತೃ ಸಂಘದ
ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಮತ್ತು
ಮಾತೃಸಂಘದ ಮಂಗಳೂರಿನ ವಿದ್ಯಾಸಂಸ್ಥೆಗಳ ಸಂಚಾಲಕ ಕೃಷ್ಣಪ್ರಸಾದ್ ರೈ
ಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಮಾತೃಸಂಘದ
ಕೋಶಾಧಿಕಾರಿ ರವೀಂದ್ರನಾಥ ಎಸ್. ಶೆಟ್ಟಿ, ಮಾತೃ
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಕಾಲೇಜಿನ
ಪ್ರಾಂಶುಪಾಲರುಗಳು, ಅಧ್ಯಾಪಕ ವೃಂದ, ಕಂಕನಾಡಿ
ಬಂಟರ ಸಂಘದ ಪದಾಧಿಕಾರಿಗಳು ಮತ್ತು
ಸಮಾಜದ ಹಲವಾರು ಇತರ ಗಣ್ಯರು
ಉಪಸ್ಥಿತರಿದ್ದರು. ತಾಲೂಕು ಸಮಿತಿಯ ಸಂಚಾಲಕ
ಯಸ್. ಜಯರಾಮ ಸಾಂತ ಸ್ವಾಗತಿಸಿದರು.
ಸಹ ಸಂಚಾಲಕ ಶ್ರೀ ಕೆ.
ಉಮೇಶ್ ರೈ ವಂದಿಸಿದರು.