ಅಂತರಾಷ್ಟ್ರೀಯ ಕಿರಿಯರ ಸೌಂದರ್ಯ ಸ್ಪರ್ಧೆಯಲ್ಲಿ ಕುಡ್ಲದ ಕುವರಿ ವರ್ಷಾ ಶೆಟ್ಟಿ ಸೆಕೆಂಡ್ ರನ್ನರ್‍ಅಪ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಂತರಾಷ್ಟ್ರೀಯ ಕಿರಿಯರ ಸೌಂದರ್ಯ ಸ್ಪರ್ಧೆಯಲ್ಲಿ ಕುಡ್ಲದ ಕುವರಿ ವರ್ಷಾ ಶೆಟ್ಟಿ ಸೆಕೆಂಡ್ ರನ್ನರ್‍ಅಪ್

Share This
FB Page LIKE ಮಾಡಿ ಬೆಂಬಲಿಸಿ
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಕೇರಳದ ಕೊಚ್ಚಿನ್ನಲ್ಲಿ ನಡೆದ ಜ್ಯೂನಿಯರ್ ಮೊಡೆಲ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ  ಕುಡ್ಲದ ಕನ್ಯೆ ವರ್ಷಾ ಶೆಟ್ಟಿ  ಸೆಕೆಂಡ್ ರನ್ನರ್ಅಪ್ ಆಗಿ  ಆಯ್ಕೆಯಾಗಿದ್ದಾರೆ. ಬೆಸ್ಟ್ ಪೋಟೊಜನಿಕ್ ಇಂಡಿಯಾ ಆಗಿಯೂ ವರ್ಷಾ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮೊಡೆಲ್ ಜಗತ್ತಿನಲ್ಲಿ ಮಿಂಚಲು ಇನ್ನೋರ್ವ ಕರಾವಳಿಯ ಕುವರಿ ಸಿದ್ದವಾದಂತೆನಿಸುತ್ತಿದೆ.
ವರ್ಷಾರ ತಾಯಿ ಗುಣ ವಿ. ಶೆಟ್ಟಿ ಸುರತ್ಕಲ್ ಸಮೀಪದ ಕುತ್ತೆತ್ತೂರಿನವರು, ಈಗ ಪತಿ ವಸಂತ ಶೆಟ್ಟಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಸಂತ ಶೆಟ್ಟಿ ಬೆಂಗಳೂರಿನ ಬಿಇಎಲ್ ಸಂಸ್ಥೆಯ ಉದ್ಯೋಗಿ. ಬಿಇಎಲ್ ಶಿಕ್ಷಣ ಸಂಸ್ಥೆಯ ಸಿಬಿಎಸ್ಸಿ ಎಂಟನೆ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ ವರ್ಷಾ. ಕೊಚ್ಚಿಯಲ್ಲಿ ಇಂಡಿಯನ್ ಮೊಡೆಲ್ ವಿಭಾಗದಲ್ಲಿ ಆಯ್ಕೆಯಾಗಿರುವ ವರ್ಷಾ ಮುಂದೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಿದ್ಧತೆಯಲ್ಲಿದ್ದಾರೆ.

ವರ್ಷಾ ಶೆಟ್ಟಿಗೆ ಚಿಕ್ಕಂದಿನಿಂದಲೂ ಸಾಂಸ್ಕತಿಕ ಕ್ಷೇತ್ರದಲ್ಲಿ ಆಸಕ್ತಿ. ಸೂಪರ್ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದರು. ಈಗ ಕರಾಟೆ ಮತ್ತು ಡಾನ್ಸ್ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಪಂಜಾಬ್ನಲ್ಲಿ ಇದೇ ತಿಂಗಳು ನಡೆಯಲಿರುವ ರಾಷ್ಟ್ರ ಮಟ್ಟದ ಎರೋಬಿಕ್ಸ್ ಸ್ಪರ್ಧೆಯಲ್ಲಿ ತಮ್ಮ ಶಾಲೆಯನ್ನು ವರ್ಷಾ ಪ್ರತಿನಿಧಿಸುತ್ತಿದ್ದಾರೆ.

ಕಳೆದ ವಾರ ಬೆಂಗಳೂರಿನ ಪ್ರತಿಷ್ಠಿತ ಎಸ್.ಎಂ.ಸ್ಕೂಲ್ ಆಫ್ ಫ್ಯಾಶನ್ ಇನ್ಸ್ಟಿಟ್ಯೂಟ್'ನವರು ಆಯೋಜಿಸಿದ ಲಿಟ್ಲ್ ಸೂಪರ್ ಮೊಡೆಲ್ ಕರ್ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಈಗಾಗಲೇ ಮೊಡೆಲಿಂಗ್ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಕರಾವಳಿಯ ಸಾಕಷ್ಟು ಬೆಡಗಿಯರು ಹೆಸರು ಮಾಡಿ ದ್ದಾರೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ ಟಾಪ್ ಲೇವಲ್ನಲ್ಲಿರು ವವರು ಇವರದೇ ಸಾಲಿನಲ್ಲಿ ವರ್ಷಾ ಸಾಗಲಿ ಎಂಬ ಆಶಯ ನಮ್ಮದು.

Pages