ಮಂಗಳೂರು: ವಗೆನಾಡು ಶ್ರೀ ಸುಬ್ರಾಯ
ದೇವಸ್ಥಾನದ ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ
ಸಂಘವು ಅನೇಕ ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯಾಗಿ
ನೀಡಿದಂತಹ ಸಂಸ್ಥೆ ಈ ಕ್ಷೇತ್ರವಾಗಿದೆ.
ಪಟ್ಲ ಗುತ್ತು ಮಹಾಬಲ ಶೆಟ್ಟಿಯವರಿಂದ
ಸ್ಥಾಪಿಸಲ್ಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ
ಸಂಘ ಹಲವು
ವರ್ಷಗಳಿಂದಲೂ ನಿರಂತರ ಒಂದು ತಿಂಗಳ
ಪರ್ಯಂತ ಯಕ್ಷಗಾನ, ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು
ಬರುತ್ತಿರುವುದು ಶ್ಲಾಘನೀಯ ಎಂದು ಒಡಿಯೂರು ಶ್ರೀಗಳು ಹೇಳಿದರು.
ಅವರು ವಗೆನಾಡು
ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶ್ರೀ
ಸುಬ್ರಹ್ಮಣ್ಯೇಶ್ವರ ಕಲಾ ಸಂಘ (ರಿ)
ವಗೆನಾಡು ಇದರ 20ನೇ ವರ್ಷದ
ಯಕ್ಷಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ
ನೀಡುತ್ತ, ಇಂದಿಗೆ ಇಪ್ಪತ್ತು ವರ್ಷ ಈ ಸಂಸ್ಥೆಗೆ
ತುಂಬಿದ್ದು ಕಲಾವಿದರನ್ನು ಬೆಳೆಸಿ ಪೋಷಿಸುವುದರ ಜತೆಗೆ
ಸುಮಾರು 100ಕ್ಕೂ ಅಧಿಕ ಕಲಾವಿದರನ್ನೂ
ಗುರುತಿಸಿ ಗೌರವ ನಿಧಿಯೊಂದಿಗೆ ಸಮ್ಮಾನಿಸಿದೆ
ಎಂದರು.
ಸ್ವಗ್ರಾಮದಲ್ಲಿರುವ
ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ, ಗ್ರಾಮದಲ್ಲಿರುವ
ಎಲ್ಲಾ ಸರಕಾರಿ ಹಾಗೂ ಅನುದಾನಿತ
ಶಾಲಾ ಪ್ರತಿಭಾವಂತ ಬಡ ಮಕ್ಕಳಿಗೆ ವಿದ್ಯಾರ್ಥಿವೇತನ
ಹೀಗೆ ಅನೇಕ ಜನಪರ ಕಾರ್ಯಗಳನ್ನು
ಮಾಡುತ್ತಾ ಬಂದ ಸಂಸ್ಥೆಯು ಇನ್ನಷ್ಟು
ಉಜ್ವಲ ಮಟ್ಟಕ್ಕೆ ಬೆಳೆಯಲಿ ಎಂದು ಶ್ರೀಗಳು
ಹಾರೈಸಿದರು.
ಸಂಸ್ಥೆಯ
ಅಧ್ಯಕ್ಷರಾದ ಪಟ್ಲಗುತ್ತು ಮಹಾಬಲ ಶೆಟ್ಟಿಯವರ ಜತೆಗೆ
ದೇವಸ್ಥಾನದ ಆಡಳಿತ ಮೊಕ್ತೇಸರ ತಿರುಮಲೇಶ್ವರ
ಭಟ್ ಉಪಸ್ಥಿತರಿದ್ದರು. ಪಟ್ಲ ಸತೀಶ್ ಶೆಟ್ಟಿ
ವಂದಿಸಿದರು.