ಬಂಟ್ಸ್ ನ್ಯೂಸ್, ಮಂಗಳೂರು: ಶ್ರೀ ರಾಮಕೃಷ್ಣ ವಿದ್ಯಾರ್ಥಿ ಭವನ ಮಂಗಳೂರು ಇದರ
ಶತಮಾನೋತ್ಸವದ ಸವಿನೆನಪಿಗಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಕಚೇರಿ ಬಳಿ ನಿರ್ಮಿಸಿದ ಸಾಂಸ್ಕøತಿಕ
ಕೇಂದ್ರದ ಕಚೇರಿಯ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ
ನೆರವೇರಿಸಿದರು.
ಸಮಾರಂಭದಲ್ಲಿ ಕಾರ್ಯದರ್ಶಿ
ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆ
ಗುತ್ತು ರವಿರಾಜ ಶೆಟ್ಟಿ, ಕೃಷ್ಣಪ್ರಸಾದ್ ರೈ, ಎಂ. ಕರುಣಾಕರ ಶೆಟ್ಟಿ, ಬಾಲರಾಜ ರೈ, ಶೆಡ್ಡೆ ಮಂಜುನಾಥ
ಭಂಡಾರಿ, ರಘು ಶೆಟ್ಟಿ ಕಾಸರಗೋಡು, ಬಾಲಕೃಷ್ಣ ಶೆಟ್ಟಿ, ಉಮೇಶ್ ರೈ, ಪಿ.ಬಿ. ದಿವಾಕರ ರೈ. ಡಾ. ಆಶಾಜ್ಯೋತಿ
ರೈ ಮೊದಲಾದವರು ಉಪಸ್ಥಿತರಿದ್ದರು.