ಬಂಟ್ಸ್ ನ್ಯೂಸ್, ಮಂಗಳೂರು: ಖ್ಯಾತ ಬಹುಭಾಷಾ ನಟಿ
ಐಶ್ವರ್ಯ ರೈ ತಂದೆ ಕೃಷ್ಣರಾಜ್
ರೈ ಅವರ ಪಿಂಡ ಪ್ರದಾನ
ಕಾರ್ಯ ನೆರವೇರಿಸಲು ಮಂಗಳೂರಿಗೆ ಏ.8ಕ್ಕೆ
ಆಗಮಿಸಿದ್ದರು.
ಬೆಳಗ್ಗೆ ಕದ್ರಿ
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಐಶ್ವರ್ಯ ಕುಟುಂಬ ನಂತರ ಉಪ್ಪಿನಂಗಡಿಯ
ಸಹಸ್ರ ಲಿಂಗೇಶ್ವರ ದೇವಸ್ಥಾನ ಬಳಿಯ ನದಿಯಲ್ಲಿ ಪಿಂಡ
ಪ್ರದಾನ ಕಾರ್ಯ ಮಾಡಿದ್ದಾರೆ.
ಐಶ್ವರ್ಯ
ರೈ ಅವರ ತಂದೆ ಕೃಷ್ಣರಾಜ್ ರೈ (78) ಅವರು ಮಾರ್ಚ್
18ರಂದು ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ
ಅಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದರು.