ಬಂಟ್ಸ್ ನ್ಯೂಸ್, ಮಂಗಳೂರು: ಕುಟುಂಬ ಸಮಾಜದ ಬೆಸುಗೆಯಾಗಿ
ಬಿಸುಪರ್ಬ ಮಹತ್ವ ಪಡೆದಿದೆ. ತುಳುನಾಡಿನ
ಕೃಷಿ ಸಂಸ್ಕøತಿಯೊಂದಿಗೆ ಹಾಸು
ಹೊಕ್ಕಾಗಿರುವ ಬಿಸುವನ್ನು ಮುಂದಿನ ತಲೆಮಾರಿಗೂ ಉಳಿಸುವ
ಕೆಲಸ ವಾಗಬೇಕು ಎಂದು ಮೂಡಬಿದಿರೆ
ಅಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿಪ್ರಾಯಪಟ್ಟರು.
ಬಂಟರ ಯಾನೆ ನಾಡವರ ಮಾತೃ
ಸಂಘದ ಮಂಗಳೂರು ತಾಲೂಕು ಸಮಿತಿ
ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ನ
ಗೀತಾ ಎಸ್.ಎಂ.ಶೆಟ್ಟಿ
ಸಭಾಂಗಣದಲ್ಲಿ ನಡೆದ `ಬಿಸುಪರ್ಬ-2017' ಅನ್ನು
ಶನಿವಾರ ಉದ್ಘಾಟಿಸಿದ ಅವರು ಎಳವೆಯಲ್ಲಿಯೇ ಮಕ್ಕಳ
ಮನಸ್ಸಲ್ಲಿ ಸಂಸ್ಕøತಿಯ ಸೊಗಡನ್ನು ಪಸರಿಸುವ
ಕೆಲಸವಾಗಲಿ ಎಂದರು.
ಬಂಟರ ಯಾನೆ ನಾಡವರ ಮಾತೃ
ಸಂಘದ ಅಧ್ಯಕ್ಷ ಅಜಿತ್ ಕುಮಾರ್
ರೈ ಮಾಲಾಡಿ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು. ಲೇಖಕಿ ಆಶಾ ದಿಲೀಪ್
ರೈ `ಬಿಸು ಪರ್ಬ' ಕುರಿತು
ಉಪನ್ಯಾಸ ನೀಡಿದರು. ಪ್ರಗತಿಪರ ಕೃಷಿಕರನ್ನು ಈ ವೇಳೆ ಸಮ್ಮಾನಿಸಲಾಯಿತು.
ಸಮಿತಿ ಸಂಚಾಲಕ ಎಸ್. ಜಯರಾಮ
ಸಾಂತ ಸ್ವಾಗತಿಸಿದರು. ಸಹ ಸಂಚಾ ಲಕ
ಕೆ. ಉಮೇಶ್ ರೈ ವಂದಿಸಿದರು.
ಪ್ರಕಾಶ್ ಮೇಲಾಂಟ ಮತ್ತು ಸತೀಶ್
ಶೆಟ್ಟಿ ಕೊಡಿಯಾಲ್ಬೈಲ್ ಕಾರ್ಯಕ್ರಮ ನಿರೂಪಿಸಿದರು.