ಯೋಧ ಏಕನಾಥ ಶೆಟ್ಟಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ಮಂಜೂರಿಗೆ ಮುಖ್ಯಮಂತ್ರಿಗೆ ಮನವಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯೋಧ ಏಕನಾಥ ಶೆಟ್ಟಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ಮಂಜೂರಿಗೆ ಮುಖ್ಯಮಂತ್ರಿಗೆ ಮನವಿ

Share This
ಬಂಟ್ಸ್ ನ್ಯೂಸ್, ಬೆಂಗಳೂರು: ಕಳೆದ ವರ್ಷ ಜುಲೈಯಲ್ಲಿ ಸೇವೆಯಲ್ಲಿದ್ದಾಗ ಮೃತಪಟ್ಟ ವಾಯುಸೇನೆಯ ಯೋಧ, ಬೆಳ್ತಂಗಡಿ ತಾಲೂಕಿನ ಏಕನಾಥ ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನು ಮಂಜೂರು ಮಾಡುವಂತೆ ಅರಣ್ಯ ಹಾಗೂ .. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಚೆನ್ನೈ ತಾಂಬರಂ ವಾಯುನೆಲೆಯಿಂದ ಅಂಡಮಾನ್ಗೆ ವಾಯಸೇನೆಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನವು ಕಳೆದ ವರ್ಷ ಜುಲೈ 22ರಂದು ನಿಗೂಡವಾಗಿ ಕಾಣೆಯಾಗಿ, ಬಳಿಕ ಯೋಧರು ಬದುಕುಳಿಯುವ ಸಾಧ್ಯತೆ ಇಲ್ಲದ್ದರಿಂದ ವಾಯುಸೇನೆಯು ಏಕನಾಥ್ ಹಾಗೂ ಇತರ ಯೋಧರ  ಮರಣ ಪ್ರಮಾಣಪತ್ರ ನೀಡಿದೆ. ಯೋಧನ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು, ಮಕ್ಕಳ ಶೈಕ್ಷಣಿಕ ಹಾಗೂ ಕುಟುಂಬ ನಿರ್ವಹಣೆಯ ನೆಲೆಯಲ್ಲಿ ಏಕನಾಥ ಅವರ ಪತ್ನಿ ಜಯಂತಿ ಅವರಿಗೆ ನೆರವು ನೀಡುವಂತೆ ಉಸ್ತುವಾರಿ ಸಚಿವರು ಏಕನಾಥ ಅವರ ಕುಟುಂಬದ ಸದಸ್ಯರೊಂದಿಗೆ ಮಂಗಳವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿದರು.

Pages