ಬಂಟ್ಸ್ ನ್ಯೂಸ್, ಮಂಗಳೂರು: ಹೆಸರಾಂತ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ
ಶೆಟ್ಟಿ (70) ಅವರು ವಿಧಿವಶರಾಗಿದ್ದಾರೆ.
ಕಟೀಲು ಸಮೀಪದ ಎಕ್ಕಾರಿನಲ್ಲಿ
ನಡೆಯುತ್ತಿದ್ದ “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ” ಯಕ್ಷಗಾನದಲ್ಲಿ ಅರುಣಾಸುರನ ಪಾತ್ರ ನಿರ್ವಹಿಸುತ್ತಿದ್ದ
ಸಂದರ್ಭ ಗಂಗಯ್ಯ ಶೆಟ್ಟಿ ಅವರು ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಗೇರುಕಟ್ಟೆ ಗಂಗಯ್ಯ
ಶೆಟ್ಟಿ ಅವರು ಕಳೆದ 48 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರಾಗಿ
ಸೇವೆ ಸಲ್ಲಿಸುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆಯ ಗೇರುಕಟ್ಟೆ ಇವರ ಹುಟ್ಟೂರಾಗಿದೆ.
www.buntsnews.com