ಕಟೀಲಿನ ಅನುವಂಶಿಕ ಮೊಕ್ತೇಸರ ಕೊಡೆತ್ತೂರು ಡಾ.ರವೀಂದ್ರನಾಥ ಪೂಂಜಾ ವಿಧಿವಶ - BUNTS NEWS WORLD

 

ಕಟೀಲಿನ ಅನುವಂಶಿಕ ಮೊಕ್ತೇಸರ ಕೊಡೆತ್ತೂರು ಡಾ.ರವೀಂದ್ರನಾಥ ಪೂಂಜಾ ವಿಧಿವಶ

Share This
ಬಂಟ್ಸ್ ನ್ಯೂಸ್, ಮಂಗಳೂರು: ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರ ಕೊಡೆತ್ತೂರು ಡಾ.ರವೀಂದ್ರನಾಥ ಪೂಂಜಾ (74) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. www.buntsnews.com
ಕಟೀಲಿನ ಅನುವಂಶಿಕ ಮೊಕ್ತೇಸರ ಕೊಡೆತ್ತೂರು ಡಾ.ರವೀಂದ್ರನಾಥ ಪೂಂಜಾ ವಿಧಿವಶ ಬಂಟ್ಸ್ ನ್ಯೂಸ್, ಮಂಗಳೂರು: ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರ ಕೊಡೆತ್ತೂರು ಡಾ.ರವೀಂದ್ರನಾಥ ಪೂಂಜಾ (74) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ರವೀಂದ್ರನಾಥ ಪೂಂಜಾ ಅವರು ಕಳೆದ 6 ತಿಂಗಳ ಹಿಂದಷ್ಟೇ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರಾಗಿ ಅಧಿಕಾರ ವಹಿಸಿಕೊಂಡಿದ್ದರು.  www.buntsnews.com

ಶ್ರೀ ಕ್ಷೇತ್ರ ಕಟೀಲು ದೇವಳದ ಆಡಳಿತದಲ್ಲಿ ಕೊಡೆತ್ತೂರು ಗುತ್ತಿನವರಿಗೂ ಹಿಂದಿನಿಂದಲೂ ಅಧಿಕಾರದ ಗೌರವವಿದ್ದು, 1888ರಿಂದ 1998ರವರೆಗೂ ಕೊಡೆತ್ತೂರು ಗುತ್ತಿನ ಮನೆತನಕ್ಕೆ ಆಡಳಿತ ಮೊಕ್ತೇಸರಿಕೆ ನೋಡಿಕೊಂಡಿತ್ತು. ಕಾರಣಾಂತರದಿಂದ ಕಳೆದ 16 ವರ್ಷದ ಹಿಂದೆ ಅಧಿಕಾರದ ವಿವಾದವು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ನಿರಂತರವಾಗಿ ನ್ಯಾಯಾಲಯದಲ್ಲಿ ವಾದ ಪ್ರತಿವಾದವನ್ನು ಆಲಿಸಿ ಉಚ್ಚ ನ್ಯಾಯಾಲಯವು ಮೇ 3ರಂದು ತೀರ್ಪು ನೀಡಿದ್ದರಿಂದ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ನೀಡಿದ ಆದೇಶದಂತೆ ಕೊಡೆತ್ತೂರು ಗುತ್ತಿನ ಹಿರಿಯರಾದ ಡಾ.ಕೆ.ರವೀಂದ್ರನಾಥ ಪೂಂಜಾರವರು ಅಧಿಕಾರವನ್ನು ಪಡೆದಿದ್ದರು. www.buntsnews.com

Pages