ಬಂಟ್ಸ್ ನ್ಯೂಸ್.ಕಾಂ, ಮೂಲ್ಕಿ: ಮೂಲ್ಕಿಯ ಪ್ರತಿಷ್ಠಿತ ಶಾರದಾ ಇನ್ಫ್ರಾಡಿಸೈನ್
ಪ್ರೈ.ಲಿ ಇದರ ಆಡಳಿತ ನಿರ್ದೇಶಕ ಜೀವನ್ ಕೆ. ಶೆಟ್ಟಿ ಅವರಿಗೆ ಉದ್ಯಮ ಕ್ಷೇತ್ರದ ಸಾಧಾನೆಗಾಗಿ “ಸರ್.ಎಂ.ವಿಶ್ವೇಶ್ವರಯ್ಯ
ಬೆಸ್ಟ್ ಇಂಜಿನಿಯರಿಂಗ್ ರಾಷ್ಟ್ರೀಯ ಪ್ರಶಸ್ತಿ” ದೊರಕಿದೆ. www.buntsnews.com
ಬೆಂಗಳೂರಿನ ಜಾಗತಿಕ,
ಆರ್ಥಿಕ, ಸಾಮಾಜಿಕ ಪರಿವರ್ತನಾ ಸಂಸ್ಥೆಯು ತನ್ನ 9ನೇ ವಾರ್ಷಿಕೋತ್ಸವ ಪ್ರಯುಕ್ತ ದೇಶದ ವಿವಿಧ ಕ್ಷೇತ್ರಗಳಲ್ಲಿ
ಸಾಧನೆ ಮಾಡಿರುವ 35 ಸಾಧಕರಿಗೆ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನೀಡಿದ್ದು ಅದರಲ್ಲಿ ಜೀವನ್
ಶೆಟ್ಟಿ ಅವರು ಓರ್ವರಾಗಿದ್ದಾರೆ. www.buntsnews.com
ಜ.28ರಂದು
ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ಮಾಡಲಾಗಿದೆ. ಸಂಸ್ಥೆಯ ಅಧ್ಯಕ್ಷ ಡಾ.ಶಿವಪ್ಪ, ಕೆಂದ್ರ ಸರ್ಕಾರದ ಮಾಜಿ ಯೋಜನಾ ಮಂತ್ರಿ ಎಂ.ವಿ. ರಾಜಶೇಖರನ್,
ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಎನ್.ಎಂ.ಸುರೇಶ್ ಅವರು ಜೀವನ್ ಕೆ.
ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ. www.buntsnews.com