ಇಂಟರ್’ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿಗೆ ತೃತೀಯ ಸಂಭ್ರಮ - “ಬಂಟ ಸಮಾಗಮ 2017” - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಇಂಟರ್’ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿಗೆ ತೃತೀಯ ಸಂಭ್ರಮ - “ಬಂಟ ಸಮಾಗಮ 2017”

Share This
ಬಂಟ್ಸ್ ನ್ಯೂಸ್, ಮಂಗಳೂರು: ಇಂಟರ್’ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ) ತೃತೀಯ ವರ್ಷದ ಸವಿ ಸಂಭ್ರಮದ ಅಂಗವಾಗಿ ‘ಬಂಟ ಸಮಾಗಮ – 2017’ ಕಾರ್ಯಕ್ರಮವು ಫೆ.7ರಂದು ಬಂಟ್ವಾಳದ ಬಂಟರ ಭವನದಲ್ಲಿ ಜರಗಿತು.
ಇಂಟರ್’ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿಗೆ ತೃತೀಯ ಸಂಭ್ರಮ:  “ಬಂಟ ಸಮಾಗಮ – 2017”

ಬಂಟ ಸಮಾಗಮ – 2017ವನ್ನು  ಇಂಟರ್’ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ . ಸದಾನಂದ ಶೆಟ್ಟಿ ಮತ್ತು ಮೈನಾ ಶೆಟ್ಟಿ ದಂಪತಿ ದೀಪ ಬೆಳಗುವುದರ  ಮೂಲಕ ಉದ್ಘಾಟಿಸಿದರು. ಬಂಟ ಸಮಾಜದ ಬಾಂಧವ್ಯದ ಬೆಸುಗೆ ನಾಡು ಹೊರನಾಡಿಗರ ಸ್ನೇಹ ಸಮ್ಮಿಲನದ ಪ್ರತೀಕವಾಗಿ ‘ಬಂಟ ಸಮಾಗಮ’ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ “ನೆನಪಾದಳಾ ಶಾಕುಂತಳೆ” ಯಕ್ಷನಾಟ್ಯ ರಂಜನೆ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಸರಿಗಮಪ ಲಿಟಲ್ ಚ್ಯಾಂಪ್ ಖ್ಯಾತಿಯ ನಿಶಾನ್ ರೈ ಮರಂತಬೆಟ್ಟು ಮತ್ತು ಅವರಿಂದ ನಡೆದ ಸಂಗೀತ ರಸಮಂಜರಿ ಮೆರುಗನ್ನು ತುಂಬಿತು. ಕಾರ್ಯಕ್ರಮದಲ್ಲಿ “ಬಂಟ್ಸ್ ಕಪಲ್” ಹಾಗೂ “ಮಿಸ್ಟರ್ ಬಂಟ್ – ಮಿಸ್ ಬಂಟ್” ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ “ಸದಾಶಯ” ತ್ರೈಮಾಸಿಕದ ದ್ವಿತೀಯ ಸಂಪುಟ ಹಾಗೂ ವಿಶೇಷಾಂಕ ಬಿಡುಗಡೆಗೊಂಡಿತು.
ಇಂಟರ್’ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿಗೆ ತೃತೀಯ ಸಂಭ್ರಮ:  “ಬಂಟ ಸಮಾಗಮ – 2017”
ಸಮಾರಂಭದಲ್ಲಿ ಉದ್ಯಮಿಗಳಾದ ಡಾ. .ಜೆ. ಶೆಟ್ಟಿ, ಡಾ.ಭಾಸ್ಕರ ಶೆಟ್ಟಿ, ಡಾ. ಸರ್ವೋತ್ತಮ ಶೆಟ್ಟಿ ಅಬುದಾಬಿ, ಪಾದೆ ಅಜಿತ್ ರೈ, ವಿಜಯನಾಥ ವಿಠಲ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ನಗ್ರಿ ರೋಹಿತ್ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ ಆಳ್ವ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಎಲ್. ಪ್ರಭಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಮುಂಬೈ ಸಂಘದ ಮಾಜಿ ಅಧ್ಯಕ್ಷರಾದ ಸಿ.. ಶಂಕರ ಶೆಟ್ಟಿ, ಐಕಳ ಹರೀಶ್ ಶಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ರಶ್ಮಿ ಶಿಕ್ಷಣ ಸಂಸ್ಥೆಯ ಸವಣೂರು ಸೀತಾರಾಮ ರೈ, ಸುಳ್ಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಮುಂಬೈ ಬಂಟರ ಯಾನೆ ನಾಡವರ ಸಂಘದ ಖಜಾಂಚಿ ಸತೀಶ್ ಶೆಟ್ಟಿ, ಪ್ರಮೋದ್ ರೈ ಕೆದಂಬಾಡಿ, ಸದಾನಂದ ಶೆಟ್ಟಿ ರಂಗೋಲಿ ಬಿ.ಸಿ.ರೋಡು, ಅಭಿನಂದನ್ ಶೆಟ್ಟಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮಂಜುನಾಥ ಭಂಡಾರಿ, ನೇಮಿರಾಜ ರೈ ಬೋಳಂತೂರು, ನ್ಯಾಯವಾದಿ ಸೀತಾರಾಮ ಶೆಟ್ಟಿ, ದೇವಾನಂದ ಶೆಟ್ಟಿ ದಿಕ್ಸಿ, ಶಾಂತರಾಮ ಶೆಟ್ಟಿ ದಂಪತಿ, ಸಂತೋಷ್ ಶೆಟ್ಟಿ ಮೂಲ್ಕಿ, ಜಯಕರ ಆಳ್ವ ದಂಪತಿ, ಗೀತಾಭಾಸ್ಕರ ಶೆಟ್ಟಿ, ಸುಧಾಕರ ಶೆಟ್ಟಿ ಬಾರಕೂರು, ಪಟ್ಲ ಸತೀಶ್ ಶೆಟ್ಟಿ, ಕಿರಣ್ ಹೆಗ್ಡೆ, ತೋನ್ಸೆ ಮನೋಹರ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. www.buntsnews.com

Pages