ಬಂಟ್ಸ್ ನ್ಯೂಸ್, ಮಂಗಳೂರು: ಇಂಟರ್’ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್
(ರಿ) ತೃತೀಯ ವರ್ಷದ ಸವಿ ಸಂಭ್ರಮದ ಅಂಗವಾಗಿ ‘ಬಂಟ ಸಮಾಗಮ – 2017’ ಕಾರ್ಯಕ್ರಮವು ಫೆ.7ರಂದು ಬಂಟ್ವಾಳದ
ಬಂಟರ ಭವನದಲ್ಲಿ ಜರಗಲಿದೆ. www.buntsnews.com
ಬಂಟ ಸಮಾಜದ ಬಾಂಧವ್ಯದ
ಬೆಸುಗೆ ನಾಡು ಹೊರನಾಡಿಗರ ಸ್ನೇಹ ಸಮ್ಮಿಲನದ ಪ್ರತೀಕವಾಗಿ ‘ಬಂಟ ಸಮಾಗಮ – 2017 ಮೂಡಿಬರಲಿದ್ದು ಬೆಳಗ್ಗೆ
9.30ರಿಂದ ಸಂಜೆ 6.30ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ
ಸಾರಥ್ಯದಲ್ಲಿ “ನೆನಪಾದಳಾ ಶಾಕುಂತಳೆ” ಯಕ್ಷನಾಟ್ಯ ರಂಜನೆ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್
ಹಾಗೂ ಸರಿಗಮಪ ಲಿಟಲ್ ಚ್ಯಾಂಪ್ ಖ್ಯಾತಿಯ ನಿಶಾನ್ ರೈ ಮರಂತಬೆಟ್ಟು ಮತ್ತು ಶಿಲ್ವ ವೆಂಕಟೇಶ್ ಅವರಿಂದ
ಸಂಗೀತ ರಸಮಂಜರಿ ನಡೆಯಲಿದೆ. www.buntsnews.com
ಕಾರ್ಯಕ್ರಮದಲ್ಲಿ
“ಬಂಟ್ಸ್ ಕಪಲ್” ಹಾಗೂ “ಮಿಸ್ಟರ್ ಬಂಟ್ – ಮಿಸ್ ಬಂಟ್” ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಮಾರಂಭದಲ್ಲಿ
“ಸದಾಶಯ” ತ್ರೈಮಾಸಿಕದ ದ್ವಿತೀಯ ಸಂಪುಟ ಬಿಡುಗಡೆಗೊಳ್ಳಲಿದೆ. www.buntsnews.com