ಬಂಟ್ಸ್ ನ್ಯೂಸ್, ಸುರತ್ಕಲ್ : ಪರಸ್ಪರ ಪ್ರೀತಿ ಮತ್ತು
ನಂಬಿಕೆಯನ್ನು ಬೆಳೆಸಿಕೊಂಡು ನಾವೆಲ್ಲರೂ ಐಕ್ಯತೆಯಿಂದ ಇದ್ದಾಗ ಮಾತ್ರ ಸಮಾಜ
ಪರ ಚಿಂತನೆ ಬೆಳೆಯುತ್ತದೆ ಎಂದು
ಬಂಟರ ಯಾನೆ ನಾಡವರ ಮಾತೃಸಂಘದ
ಮಂಗಳೂರು ತಾಲೂಕು ಸಮಿತಿ ಸಂಚಾಲಕ
ಜಯರಾಮ ಸಾಂತ ಹೇಳಿದರು.
ಅವರು ಡಿ.18
ರಂದು ಬಂಟರ ಸಂಘ(ರಿ)
ಸುರತ್ಕಲ್ ಹಾಗೂ ಬಂಟರ ಯಾನೆ
ನಾಡವರ ಮಾತೃ ಸಂಘ ಮಂಗಳೂರು
ತಾಲೂಕು ಸಮಿತಿ ಇವರ ಸಹಯೋಗದಲ್ಲಿ
ಗೋವಿಂದದಾಸ ಕಾಲೇಜು ಮೈದಾನದಲ್ಲಿ ನಡೆದ
ಬಂಟರ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. www.buntsnews.com
ನಮ್ಮ ದುಡಿಮೆಯ ಒಂದಂಶ ಭಾಗವನ್ನು
ಸಮಾಜಕ್ಕೆ ದಾರೆ ಎರೆದಾಗ ಭಗವಂತನ
ಕೃಪೆ ದೊರೆಯಲು ಸಾಧ್ಯ ಎಂದು
ಸಮಾಜಮುಖಿ ಉತ್ತಮ
ಚಿಂತನೆ ನಮ್ಮ ಜೀವನವನ್ನು ಯಶಸ್ವಿ
ಕಡೆ ಕೊಂಡೊಯ್ಯುತ್ತಿದೆ ಜನಪರ ಸೇವೆಯಿಂದ ಶ್ರೇಷ್ಠರಾಗಿ
ಮಾತೃ ಭಾಷೆ ಶಿಕ್ಷಣವು ನಮ್ಮ
ವ್ಯಕ್ತಿತ್ವವನ್ನು ವಿಕಸನ ಮಾಡುವಲ್ಲಿ ಸಹಕಾರಿಯಾಗಿದೆ ಎಂದವರು
ತಿಳಿಸಿದರು. ಸುರತ್ಕಲ್ ಗೋವಿಂದದಾಸ ಕಾಲೇಜ್ನ ಪ್ರಾಚಾರ್ಯ
ಡಾ| ಮುರಳೀಧರ ರಾವ್ ಮಾತನಾಡಿ ಆರೋಗ್ಯವಂತ
ವ್ಯಕಿತ್ವ ನಿರ್ಮಾಣವಾಗಲು ಕ್ರೀಡಾ
ಮನೋಭಾವನೆಯನ್ನು ಮೈಗೂಡಿಸಬೇಕು, ವಿಜ್ಞಾನ ಕ್ಷೇತ್ರಕ್ಕೂ ಕ್ರೀಡೆಗೂ
ಮಹತ್ವವಾದ ಸಂಬಂಧವಿದೆ ಎಂದರು.
www.buntsnews.com
ಅಧ್ಯಕ್ಷತೆಯನ್ನು
ಸುರತ್ಕಲ್ ಬಂಟರ
ಸಂಘದ ಅಧ್ಯಕ್ಷ ಉಲ್ಲಾಸ್ ಆರ್
ಶೆಟ್ಟಿ ವಹಿಸಿದ್ದರು. ಗುತ್ತಿಗೆದಾರ ಬಿ.ಬಿ. ರೈ,
ಉದ್ಯಮಿ ಬೊಳ್ಳಾರುಗುತ್ತು ಮನೋಹರ ಶೆಟ್ಟಿ, ಮಹಿಳಾ
ವೇದಿಕೆ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ, ಬಂಟರ ಸಂಘ
ಸುರತ್ಕಲ್ನ ಕ್ರೀಡಾ
ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಉಪಾಧ್ಯಕ್ಷ ಸುಧಾಕರ
ಪೂಂಜಾ, ಕಾರ್ಯದರ್ಶಿ
ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಪಿ. ಶೆಟ್ಟಿ
ಉಪಸ್ಥಿತರಿದ್ದರು. www.buntsnews.com