BUNTS NEWS, ಮಂಗಳೂರು:
ಬಂಟರ ಯಾನೆ ನಾಡವರ ಮಾತೃ
ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ
ಅಜಿತ್ ಕುಮಾರ್ ರೈ ಮಾಲಾಡಿಯವರು
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2016-2019ನೇ ಸಾಲಿಗೆ
ಬಂಟ ಮಾತೃಸಂಘದ ಅಧ್ಯಕ್ಷರು ಮತ್ತು ಕೇಂದ್ರ ಕಾರ್ಯಕಾರಿ ಸದಸ್ಯರನ್ನು
ಆಯ್ಕೆ ಮಾಡಲು ಚುನಾವಣೆ ನಡೆಯುವ ಬಗ್ಗೆ ನೋಟಿಸು ನೀಡಲಾಗಿತ್ತು. ಅಲ್ಲದೇ ನಾಮಪತ್ರ ಸಲ್ಲಿಸಲು ದಿನಾಂಕವನ್ನು
ನಿಗದಿ ಪಡಿಸಲಾಗಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಕುಮಾರ್ ರೈ ಮಾಲಾಡಿ ಅವರನ್ನು ಬಿಟ್ಟು
ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಮಾಲಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ
2016-2019 ಸಾಲಿನಲ್ಲಿ ಬಂಟರ ಮಾತೃಸಂಘದ ನೂತನ ಸಭಾಭವನ,
ಇನ್ನಿತರ ಅಭಿವೃದ್ಧಿ ಕಾರ್ಯಗಳು ಅಜಿತ್ ಕುಮಾರ್ ರೈ ಮಾಲಾಡಿ
ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಪ್ರತಿಯೊಂದು ಕಾರ್ಯವು ಯಶಸ್ವಿಯಾಗಲೀ ಎಂದು ಬಂಟ್ಸ್ ನ್ಯೂಸ್.ಕಾಂ
ಹಾರೈಸುತ್ತಿದೆ. © www.buntsnews.com
-----------------------------------------------------------------------------------------------------------------------