BUNTS NEWS, ಮಂಜೇಶ್ವರ: ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿಗೆ
ಕಾಸರಗೋಡು ಜಿಲ್ಲೆಯಿಂದ ಕಾರ್ತಿಕ್ ಶೆಟ್ಟಿ ಮಜಿಬೈಲ್ ಅವರು ಆಯ್ಕೆಯಾಗಿದ್ದಾರೆ.
ಬಂಟರ ಸಂಘ ಮಂಜೇಶ್ವರ ವಲಯದಲ್ಲಿ ಮೊತ್ತ ಮೊದಲ ಭಾರಿಗೆ ಯುವ ಬಂಟ ಕಾರ್ತಿಕ್ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಅಲ್ಲದೇ ಮಜಿಬೈಲ್ ಗ್ರಾಮದಿಂದ ಪ್ರಥಮ ಭಾರಿಗೆ ಮಾತೃಸಂಘಕ್ಕೆ ಸೇಪರ್ಡೆಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿಗೆ
ಅವಿರೋಧವಾಗಿ ಆಯ್ಕೆಯಾಗಿರುವ ಕಾರ್ತಿಕ್ ಶೆಟ್ಟಿ ಮಜಿಬೈಲ್ ಅವರಿಗೆ ಬಂಟ್ಸ್ ಮಜಿಬೈಲ್’ನ ಸರ್ವ ಸದಸ್ಯರು
ಅಭಿನಂದನೆ ಸಲ್ಲಿಸಿದ್ದಾರೆ.
-----------------------------------------------------------------------------------------------------------------------