ಉದ್ದ ಜಿಗಿತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮುಂಬೈನ ತನಿಷ್ಕಾ ಎಸ್.ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಉದ್ದ ಜಿಗಿತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮುಂಬೈನ ತನಿಷ್ಕಾ ಎಸ್.ಶೆಟ್ಟಿ

Share This
BUNTS NEWS, ಮುಂಬೈ: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟ ಹಾಗೂ ಗುಜರಾತ್ ಬರೋಡಾದಲ್ಲಿ ನಡೆಯಲಿರುವ 'ವೆಸ್ಟ್ ಝೋನ್ ಗೇಮ್' ಗೆ ಮುಂಬೈನ ತನಿಷ್ಕಾ ಎಸ್.ಶೆಟ್ಟಿ ಆಯ್ಕೆಯಾಗಿದ್ದಾರೆ.
ತನಿಷ್ಕಾ ಎಸ್.ಶೆಟ್ಟಿ ಮೂಲತಃ ಉಡುಪಿ ಕಬ್ಯಾಡಿ ಹೊಸಮನೆಯ ಸುಭಾಷ್ ಚಂದ್ರ ಶೆಟ್ಟಿ ಹಾಗೂ ಮುಲ್ಕಿ ಕಿಲ್ಪಾಡಿಯ ಆಶಾ ಎಸ್.ಶೆಟ್ಟಿ ದಂಪತಿಯ ಪುತ್ರಿ. ಇವರು ಸೆ. 17 -18 ರಂದು ಮಹಾರಾಷ್ಟ್ರದ ಮೀರಜ್ ನಲ್ಲಿ ನಡೆದ ರಾಜ್ಯ ಮಟ್ಟದ ಆಥ್ಲೆಟಿಕ್ ಚಾಂಪಿಯನ್ ಶಿಪ್-2016 ಕಿರಿಯರ ವಿಭಾಗದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಲಾಂಗ್ ಜಂಪ್ ಸ್ಪರ್ಧೆಯಲ್ಲಿ ತನಿಷ್ಕಾ 5.51 ಮೀ. ಜಂಪ್ ಮಾಡೋ ಮೂಲಕ ಪ್ರಥಮ ಸ್ಥಾನ ಪಡೆದ ತನಿಷ್ಕಾ ಎಸ್.ಶೆಟ್ಟಿ ಚಿನ್ನದ ಪದಕದ ಪಡೆದಿದ್ದಾರೆ. ಕಳೆದ 8 ವರ್ಷಗಳ ಕ್ರೀಡಾಕೂಟದಲ್ಲಿ  ತನಿಷ್ಕಾ ಒಟ್ಟು 133 ಪದಕಗಳನ್ನು ಪಡೆದಿದ್ದಾರೆ. ಅದರಲ್ಲಿ 86 ಚಿನ್ನ ,33 ಬೆಳ್ಳಿ ಮತ್ತು 14 ಕಂಚು ಪದಕಗಳನ್ನು ಗಳಿಸಿದ್ದಾರೆ. ತನಿಷ್ಕಾ ಸಾಧನೆಯನ್ನು ಗುರುತಿಸಿ ಕಳೆದ ಕನ್ನಡ ರಾಜ್ಯೋತ್ಸವದಂದು ..ಜಿಲ್ಲಾ ರಾಜ್ಯೋತ್ಸವ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಉದ್ದ ಜಿಗಿತ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವ ತನಿಷ್ಕಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧಾನೆ ಮಾಡಿ ದೇಶಕ್ಕೆ ಕೀರ್ತಿ ತರಲೆಂದು ಬಂಟ್ಸ್ ನ್ಯೂಸ್.ಕಾಂ ಹಾರೈಸುತ್ತಿದೆ. © www.buntsnews.com
-------------------------------------------------------------------------------------------------------------------------

Pages