BUNTSNEWS, ಬಂಟ್ವಾಳ
: ಫರಂಗಿಪೇಟೆ ಬಂಟರ ಸಂಘದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಸಂಭ್ರಮದಿಂದ ಇತ್ತಿಚೇಗೆ
ನಡೆಯಿತು.
ಕಾರ್ಯಕ್ರಮದಲ್ಲಿ
ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಹಿರಿಯ ನ್ಯಾಯವಾದಿ ಆಶಾ ಪ್ರಸಾದ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟ್ವಾಳ ಬಂಟರ ಸಂಘದ
ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಗುತ್ತು , ಪದ್ಮಶ್ರೀ ಡಿ. ಶೆಟ್ಟಿ , ಪದ್ಮನಾಭ ಶೆಟ್ಟಿ ಪುಂಚಮೆ,
ಜಯರಾಮ್ ಸಾಮಾನಿ ತುಂಬೆ, ಹರಿಣಾಕ್ಷಿ ಆರ್. ಶೆಟ್ಟಿ ಕೊಳಂಬೆ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು.