BUNTSNEWS,ಮಂಗಳೂರು: ಮುಲ್ಕಿ ಸುಂದರಂ ಪ್ರಶಸ್ತಿ
2016ಕ್ಕೆ ಸರ್ವೋತ್ತಮ್ ಶೆಟ್ಟಿ ಅಬುದಾಬಿ ಆಯ್ಕೆಯಾಗಿದ್ದಾರೆ.
ವಿಜಯ ಬ್ಯಾಂಕ್ ಸಂಸ್ಥಾಪಕ ಮುಲ್ಕಿ ಸುಂದರಂ ಶೆಟ್ಟಿ ಅವರ ಹೆಸರಿನಲ್ಲಿ
ಸಾಮಾಜಿಕವಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರತಿವರ್ಷವು “ಮುಲ್ಕಿ ಸುಂದರಂ ಪ್ರಶಸ್ತಿ”ಯನ್ನು ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಭಾರಿಯ ‘ಮುಲ್ಕಿ ಸುಂದರಂ ಪ್ರಶಸ್ತಿ 2016ಕ್ಕೆ” ಸರ್ವೋತ್ತಮ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸರ್ವೋತ್ತಮ್ ಶೆಟ್ಟಿ
ಅವರು ಸಾಮಾಜಿಕವಾಗಿ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡಿದ ಮಹನೀಯರಲ್ಲಿ ಒಬ್ಬರಾಗಿದ್ದಾರೆ. ವಿಶೇಷವಾಗಿ
ಯಾವುದೇ ಜಾತಿ ಭೇದವಿಲ್ಲದೆ ಸಾಕಷ್ಟು ಸಮಾಜ ಸೇವೆಯನ್ನು ಮಾಡಿದ್ದಾರೆ. ಪ್ರಸ್ತುತ ಸರ್ವೋತ್ತಮ ಶೆಟ್ಟಿ
ಅವರು ಯುಎಇ ಬಂಟ್ಸ್ ಸಂಘ, ಯುಎಇ ಕನ್ನಡಿಗರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. www.buntsnews.com