BUNTS NEWS, ಬೆಂಗಳೂರು: ಬೆಂಗಳೂರು ಬಂಟರ ಸಂಘದ ಚುನಾವಣೆಗೆ
ಕ್ಷಣಗಣನೆ ಆರಂಭವಾಗಿದ್ದು ಜುಲೈ 31ರ ಭಾನುವಾರದಂದು ಚುನಾವಣೆ ನಡೆಯಲಿದೆ. ಈ ಕುರಿತಂತೆ ಬಂಟ್ಸ್
ನ್ಯೂಸ್.ಕಾಂ ಮಾಡಿರುವ ಚುನಾವಣಾ ಪೂರ್ವ ಸಮೀಕ್ಷೆಯ ವಿವರ ಹೀಗಿದೆ.
ಬೆಂಗಳೂರು ಬಂಟರ ಸಂಘದಲ್ಲಿ ನಡೆಯುವ ಚುನಾವಣೆಯ ಕುರಿತಾಗಿ ಕಳೆದ 3-4 ದಿನಗಳಿಂದ ಬಂಟ್ಸ್ ನ್ಯೂಸ್.ಕಾಂ ಚುನಾವಣಾ ಪೂರ್ವ ಸಮೀಕ್ಷೆ
ನಡೆಸಿತ್ತು. ಚುನಾವಣೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಚಿ ಹಾಗೂ ಕಾರ್ಯಕಾರಿ
ಸಮಿತಿಗೆ ಸ್ವರ್ಧಿಸುವ ಎಲ್ಲಾ ಅಭ್ಯರ್ಥಿಗಳಿಗಾಗಿ ವೋಟ್ ಪೋಲ್ ಮಾಡಲಾಗಿತ್ತು. ಬಂಟ್ಸ್
ನ್ಯೂಸ್.ಕಾಂನ ಅಧಿಕೃತ ವೆಬ್’ಸೈಟಲ್ಲಿ ಮುಕ್ತವಾಗಿ ‘VOTE’ ಮಾಡಲು ಅವಕಾಶವನ್ನು ನೀಡಲಾಗಿತ್ತು. ಇಲ್ಲಿ
ನಡೆದಿರುವ ಮತಗಳ ಆಧಾರದಲ್ಲಿನ ಚುನಾವಣಾ ಸಮೀಕ್ಷೆ ವಿವರ ಹೀಗಿದೆ.
ಟೀಂ ಶಶಿಧರ್ ಶೆಟ್ಟಿ ಕೆಂಜೂರು ಬಳಗಕ್ಕೆ
ಗೆಲುವು..?
ಬಂಟ್ಸ್ ನ್ಯೂಸ್.ಕಾಂನ ವೆಬ್’ಸೈಟಿನಲ್ಲಿ ನಡೆದಿರುವ ಮತಗಳ ಆಧಾರದಲ್ಲಿ ನೋಡುವುದಾರೆ
ಟೀಂ ಶಶಿಧರ್ ಶೆಟ್ಟಿ ಬಳಗ ಈ ಭಾರಿ ವಿಜಯ ಪಾತಾಕೆ ಹಾರಿಸುವ ಸಾಧ್ಯತೆಯಿದೆ. ಅಧ್ಯಕ್ಷ, ಉಪಾಧ್ಯಕ್ಷ, ಮಹಿಳಾ ಉಪಾಧ್ಯಕ್ಷೆ ಹಾಗೂ ಖಜಾಂಚಿ
ಸ್ಥಾನಗಳು ಯಾವುದೇ ಪೈಪೋಟಿಯಿಲ್ಲದ ನೇರವಾಗಿ ಟೀಂ ಶಶಿಧರ್ ಶೆಟ್ಟಿ ಪಾಲಾಗಬಹುದು.
ಇನ್ನುಳಿಂದಂತೆ ಗೌರವ ಕಾರ್ಯದರ್ಶಿ, ಜೊತೆ
ಕಾರ್ಯದರ್ಶಿ ಸ್ಥಾನಗಳು ಟೀಂ ಡಿಸಿಆರ್ ಗೆ ಲಭ್ಯವಾಗಲಿದೆ.
ಕಾರ್ಯಕಾರಿ ಸಮಿತಿಯಲ್ಲಿ ಅಮರನಾಥ್ ಶಟ್ಟಿ, ಮಧುಕರ್ ಶೆಟ್ಟಿ ಬಿ. , ಪ್ರವೀಣ್’ಚಂದ್ರ ಶೆಟ್ಟಿ, ಪ್ರೇಮ್ ಪ್ರಸಾದ್ ಶೆಟ್ಟಿ,
ದೀಪಕ್ ಶೆಟ್ಟಿ, ರಾಜಾರಾಂ ಶೆಟ್ಟಿ , ರಮಿತ್ ಬಿ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಸುಭಾಷ್ ರೈ ಕರ್ನೂರು, ಡಾ. ಸುಮಂತ್
ಹೆಗ್ಡೆ, ಸಿಎ ವಿಜಯ್ ಶೆಟ್ಟಿ ಗೆಲುವು ಸಾಧಿಸಬಹುದು.
[ ದಯವಿಟ್ಟು ಗಮನಿಸಿ:
ಇದು ಕೇವಲ ಚುನಾವಣಾ ಸಮೀಕ್ಷೆಯಷ್ಟೇ, ಇಲ್ಲಿ ದಾಖಲಾಗಿರುವ ಮತಗಳು ಕೇವಲ ಸಣ್ಣ ಪ್ರಮಾಣದ್ದು.
ಹೆಚ್ಚಿನ ಸಂಖ್ಯೆಯ ಮತಗಳು ಚುನಾವಣೆಯಂದು ಬೀಳುವುದರಿಂದ ಸಮೀಕ್ಷೆಯ ಫಲಿತಾಂಶ ಬದಲಾಗುವ
ಸಾಧ್ಯತೆಯಿದೆ. ಇತರ ಚುನಾವಣೆಗಳಂತೆ ಬಂಟ ಚುನಾವಣೆಯಲ್ಲೂ ಸಮೀಕ್ಷೆ ನಡೆಯಬಲ್ಲದು ಎಂಬುದಕ್ಕೆ
ಸಾಕ್ಷಿಯಷ್ಟೇ... ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ] www.buntsnews.com