ಮಂಗಳೂರು: ಆನಂದ ಫಿಲಂಸ್ ಮತ್ತು ದ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ 'ಯಾನ್ ಸೂಪರ್ ಸ್ಟಾರ್' ತುಳು ಚಲನ ಚಿತ್ರದ ಚಿತ್ರೀಕರಣ, ಡಬ್ಬಿಂಗ್ ಕೆಲಸ ಕಾರ್ಯಗಳು ಸಂಪೂರ್ಣಗೊಂಡಿದ್ದು, ಸಿನಿಮಾ ಆಗೋಸ್ಟ್ ತಿಂಗಳಿನಲ್ಲಿ ತೆರೆಕಾಣಲಿದೆ.
ಉಡುಪಿ ಸುತ್ತಮುತ್ತ ಒಂದೇ ಹಂತದಲ್ಲಿ 25 ದಿನಗಳ ಕಾಲ ಯಾನ್ ಸೂಪರ್ ಸ್ಟಾರ್ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು.
ಮುಖ್ಯವಾಗಿ ಇಲ್ಲಿ ಜನಮನ್ನಣೆ ಪಡೆದಿರುವ ಸಿಐಡಿ ಧಾರಾವಾಹಿಯ ಮುಂಬಯಿ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಲ್ ರೊಂದಿಗೆ ತುಳು ನಾಡಿನ ಖ್ಯಾತ ಕಲಾವಿದರಾದ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಮಾನಸಿ ಸುಧೀರ್, ಅನ್ ಷಾ, ಅಶೋಕ್ ಪಕ್ಕಳ, ಮಾಸ್ಟರ್ ಅತಿಶ್ ಶೆಟ್ಟಿ, ಮಾಸ್ಟರ್ ಅರುಷ್ ಯು ಪೂಜಾರಿ, ಕುಮಾರಿ ಶ್ರೀಯಾ ಹೆಗ್ಡೆ ಮೊದಲಾದವರು ತಾರಾಗಣದಲ್ಲಿದ್ದಾರೆ.
ಸಂತೋಷ್ ಶೆಟ್ಟಿಯವರ ಕತೆಗೆ ಸಚಿನ್ ಶೆಟ್ಟಿ ಕುಂಬಳೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆ : ಅಂಕಣ ಜೋಷಿ, ಸಂತೋಷ್ ಶೆಟ್ಟಿ, ಸಾಹಿತ್ಯ ಹಾಡು: ವಿ ಮನೋಹರ್, ಗುರುಕಿರಣ್ ಈ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಹಿನ್ನಲೆ ಸಂಗೀತ: ಸಂಜಯ್ ವಾಂದ್ರೇಕರ್, ಕ್ಯಾಮರಾ: ಕೃಷ್ಣರಾಜ್ ಕೋಟ್ಯಾನ್, ಸಾಹಸ: ಆನಂದ ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಸತೀಶ್ ದುಬೆ, ಕ್ರಿಯೇಟಿವ್ ಡೈರಕ್ಟರ್ : ಕ್ರಿಸ್ತಬೆಲ್ಲೆ ಡಿ ಸೋಜ, ಪ್ರೊಡಕ್ಷನ್ ಹೆಡ್ಡ್ : ಚಂದ್ರಕಾಂತ್ ಭಂಡಾರಿ, ಸಿನಿಮಾ ಪೂರ್ಣಗೊಂಡಿದ್ದು, ಅಗೋಸ್ಟ್ ತಿಂಗಳಲ್ಲಿ ತೆರೆಕಾಣಲಿದೆ.
ಮನರಂಜನೆಯ ಸಿನಿಮಾ: ಯಾನ್ ಸೂಪರ್ ಸ್ಟಾರ್ ಹೆಸರು ಸೂಚಿಸಿರುವಂತೆ ಇದು ತುಳುವಿನಲ್ಲಿ ಹೊಸ ಬಗೆಯ ಸಿನಿಮಾ. ಪ್ರೇಕ್ಷಕರ ನಾಡಿಮಿಡಿತವನ್ನು ಅರಿತು ನಿರ್ದೇಶಕರು ಇಲ್ಲಿ ಸಿನಿಮಾದ ಕತೆಯನ್ನು ಹೆಣೆದಿದ್ದಾರೆ. ಸಿನಿಮಾದಲ್ಲಿ ಹಾಸ್ಯವೂ ಇದೆ, ಸಂದೇಶವೂ ಇದೆ. ಪ್ರೆಕ್ಷಕರಿಗೆ ಸಿನಿಮಾದ ಕುರಿತು ಅತೀವ ಕುತೂಹಲ ಇದೆ. ಆನಂದ್ ಫಿಲಂಸ್ ನಲ್ಲಿ ತೆರೆಕಂಡಿರುವ ಸಿನಿಮಾಗಳು ಯಶಸ್ವೀ ಪ್ರದರ್ಶನಗಳನ್ನು ಕಂಡಿರುವುದರಿಂದ ಪ್ರೇಕ್ಷಕರು ಯಾನ್ ಸೂಪರ್ ಸ್ಟಾರ್ ಸಿನಿಮಾದ ಕುರಿತು ಕೂಡಾ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದಾರೆ.