ಸುರತ್ಕಲ್: ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆಯ ಅಧ್ಯೆಕ್ಷೆಯಾಗಿ ಭವ್ಯಾ ಎ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಬಂಟರ ಭವನದಲ್ಲಿ ನಡೆದ ಮಹಿಳಾ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.
ಅಧ್ಯಕ್ಷರಾಗಿ ಭವ್ಯಾ ಎ ಶೆಟ್ಟಿ, ಉಪಾಧ್ಯಕ್ಷರಾಗಿ ಸರೋಜ ಟಿ ಶೆಟ್ಟಿ, ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕೃಷ್ಣಾಪುರ, ಜೊತೆ ಕಾರ್ಯದರ್ಶಿಯಾಗಿ ವಜ್ರಾಕ್ಷಿ ಶೆಟ್ಟಿ, ಕೋಶಾಧಿಕಾರಿಯಾಗಿ ಜ್ಯೋತಿ ಪಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗಲತಾ ಶೆಟ್ಟಿ ತೋಕೂರು, ಕ್ರೀಡಾಕಾರ್ಯದರ್ಶಿಯಾಗಿ ಬಬಿತಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕಾಟಿಪಳ್ಳ ಆಯ್ಕೆಯಾದರು.
ಸಭೆಯಲ್ಲಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಮಾಜೀ ಅಧ್ಯಕ್ಷರಾದ ಅಂಜನಾ ಶೆಟ್ಟಿ, ಬೇಬಿ ಶೆಟ್ಟಿ, ಉಪಸ್ಥಿತರಿದ್ದರು.