ಬಂಟ ಸಮಾಜದ ಕೊಡುಗೆ ಅನನ್ಯ, ಭೂ ಮಸೂದೆಯಲ್ಲಿ ಆಸ್ತಿಪಾಸ್ತಿ ನಷ್ಟವಾದರೂ ಬಂಟರು ವಿಚಲಿತರಾಗದೆ ಎದ್ದು ನಿಂತರು: ಯು.ಟಿ.ಖಾದರ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ ಸಮಾಜದ ಕೊಡುಗೆ ಅನನ್ಯ, ಭೂ ಮಸೂದೆಯಲ್ಲಿ ಆಸ್ತಿಪಾಸ್ತಿ ನಷ್ಟವಾದರೂ ಬಂಟರು ವಿಚಲಿತರಾಗದೆ ಎದ್ದು ನಿಂತರು: ಯು.ಟಿ.ಖಾದರ್

Share This
ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಕಾರ್ಯಕ್ರಮ ಮೂಲ್ಕಿ ಬಳಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಪ್ರವೀಣ ಭೋಜ ಶೆಟ್ಟಿ ಆಡಳಿತ ಕಚೇರಿಯ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಸಭಾಪತಿ ಯು.ಟಿ. ಖಾದರ್ ಅವರು, "ನಮ್ಮ ದೇಶ ಬಲಿಷ್ಠವಾಗಲು ನಾವು ಶಾಸಕರು, ಮಂತ್ರಿಗಳು ಬಲಿಷ್ಠರಾದರೆ ಸಾಲದು, ಎಸಿ ರೂಮ್ ನಲ್ಲಿ ಕೂತ ಅಧಿಕಾರಿಗಳು ಬಲಿಷ್ಠರಾದರೆ ಸಾಲದು, ಕ್ಲಾಸ್ ರೂಮಲ್ಲಿ ಕೂತಿರುವ ವಿದ್ಯಾರ್ಥಿಗಳು ಜ್ಞಾನದಲ್ಲಿ ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾದಂತೆ. ಮಕ್ಕಳು ಬಡತನದಲ್ಲಿ ಹುಟ್ಟಿ ಬೆಳೆಯಬಹುದು, ಆದರೆ ಇಂತಹ ಸಂಘಟನೆಗಳು ಹಮ್ಮಿಕೊಳ್ಳುವ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ಸಮಾಜಕ್ಕೆ ನಿಮ್ಮಿಂದಾದ ಸೇವೆ ಸಲ್ಲಿಸಬೇಕು. ಬಂಟ ಸಮಾಜ ಎಲ್ಲಾ ಜಾತಿ, ಧರ್ಮದ ಜನರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಸಮಾಜ. ಭೂ ಮಸೂದೆಯಲ್ಲಿ ಆಸ್ತಿ ಪಾಸ್ತಿ ನಷ್ಟವಾದರೂ ವಿಚಲಿತರಾಗದೆ ಎದ್ದು ನಿಂತವರು ಬಂಟರು" ಎಂದರು.

ಬಳಿಕ ಮಾತಾಡಿದ ಒಕ್ಕೂಟದ ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು, "ಐಕಳ ಹರೀಶ್ ಶೆಟ್ಟಿ ಅವರಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಇಂದು ಬಂಟ ಸಮಾಜದಲ್ಲಿ ನೊಂದವರ, ಅಶಕ್ತರ ಕಣ್ಣೀರು ಒರೆಸುವ ಕೆಲಸ ನಡೆಯುತ್ತಿದೆ. ಇದರ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಹಲವಾರು ದಾನಿಗಳು ಒಟ್ಟು ಸೇರಿಕೊಂಡು ಸಮಾಜಕ್ಕೆ ನಮ್ಮಿಂದಾದ ಸೇವೆ ಸಲ್ಲಿಸುತ್ತಿದ್ದೇವೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಇನ್ನಷ್ಟು ಮಂದಿ ದಾನಿಗಳು ಜೊತೆ ಸೇರಬೇಕು. ಆ ಮೂಲಕ ಸಂಘಟನೆ ಶಕ್ತಿಶಾಲಿಯಾಗಿ ಬೆಳೆದು ಹೆಮ್ಮರವಾಗಬೇಕು" ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, "ನಾವು ಇನ್ನೊಬ್ಬರಿಗೆ ಮರವಾಗಬೇಕು ಆ ಮೂಲಕ ಬಿಸಿಲಿಗೆ ನೆರಳಾಗಬೇಕು. ಸಂಘಟನೆ ಸಮಾಜದ ನೊಂದವರ ಸೇವೆಗಾಗಿ ಸಾಕಷ್ಟು ಕಷ್ಟಪಡುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರಂತಹ ಕೈಗಳು ಸಾವಿರವಾಗಬೇಕು" ಎಂದು ಶುಭ ಹಾರೈಸಿದರು.

ಬಳಿಕ ಮಾತು ಮುಂದುವರಿಸಿದ ಎಂ.ಆರ್. ಜಿ. ಗ್ರೂಪ್ ಆಡಳಿತ ನಿರ್ದೇಶಕ ಪ್ರಕಾಶ್ ಕೆ. ಶೆಟ್ಟಿ ಅವರು, "ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರತೀ ತಿಂಗಳು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡುವಾಗ ಕೆಲವೊಮ್ಮೆ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಮ್ಮ ಆತ್ಮಸಾಕ್ಷಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂಬ ಅರಿವಿದ್ದರೆ ಸಾಕು ಯಾವುದಕ್ಕೂ ಯೋಚನೆ ಮಾಡಬೇಕಿಲ್ಲ" ಎಂದರು.

ಪ್ರಾಸ್ತಾವಿಕ ಮಾತನ್ನಾಡಿದ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, "ಬಂಟ ಸಮಾಜದ ದಾನಿಗಳ ಮೂಲಕ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಹೆಮ್ಮೆ ಅನಿಸುತ್ತಿದೆ. ನಿತ್ಯ ನಿರಂತರವಾಗಿ ಇಂತಹ ಕಾರ್ಯಕ್ರಮ ನಡೆಯಲು ಎಲ್ಲರ ಸಹಕಾರ ತುಂಬಾ ಅಗತ್ಯ. ಎಲ್ಲರಿಗೂ ಒಳ್ಳೆಯದಾಗಲಿ" ಎಂದರು. ಒಕ್ಕೂಟದ ಪೋಷಕ ತೋನ್ಸೆ ಆನಂದ ಶೆಟ್ಟಿ ಶುಭ ಹಾರೈಸಿದರು.
ವೇದಿಕೆಯಲ್ಲಿ ವೇಣುಗೋಪಾಲ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ಅಶೋಕ್ ಶೆಟ್ಟಿ, ಚಿತ್ರಾ ಶೆಟ್ಟಿ, ಮನೋರಮಾ ಶೆಟ್ಟಿ, ಅಜಿತ್ ಶೆಟ್ಟಿ ಅಂಕಲೇಶ್ವರ್, ಶ್ರೀಧರ್ ಶೆಟ್ಟಿ ಆರೂರ್, ನಾಗೇಶ್ ಹೆಗ್ಡೆ, ಪಾಂಡು ಶೆಟ್ಟಿ ವಸಾಯಿ, ನವೀನ್ ಚಂದ್ರ ಶೆಟ್ಟಿ, ಆದರ್ಶ್ ಶೆಟ್ಟಿ ಹಾಲಾಡಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ನಾಗೇಶ್ ಶೆಟ್ಟಿ, ಶಶಿಧರ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದಯಾಮಣಿ ಶೆಟ್ಟಿ ಎಕ್ಕಾರ್, ಪತ್ರಕರ್ತರಾದ ಅರ್. ರಾಮಕೃಷ್ಣ, ಮುಹಮ್ಮದ್ ಆರಿಫ್ ಪಡುಬಿದ್ರಿ, ಸಚ್ಚಿದಾನಂದ ಶೆಟ್ಟಿ ಚೇರ್ಕಾಡಿ, ನಿತಿನ್ ಸಾಲಿಯಾನ್, ಡಾ.ನಿರಂಜನ್ ಶೆಟ್ಟಿ ಕೆದೂರು, ನೀತಾ ರಾಜೇಶ್ ಶೆಟ್ಟಿ, ಅರ್ಪಿತಾ ಪ್ರಶಾಂತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರಿಯಾ ಹರೀಶ್ ಮತ್ತು ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Pages