ಕುಂದಾಪುರ: ಶ್ರೀ ಮಹಾಲಿಂಗೇಶ್ವರ ಸೌಹಾರ್ದ ಕ್ರೆಡಿಟ್ ಕೋ -ಆಪರೇಟಿವ್ ಲಿ, ತೆಕ್ಕಟ್ಟೆ 2018ರ ಮೇ.18ರಂದು ಪ್ರಾರಂಭವಾಗಿ ಇಂದಿಗೆ ಸಾರ್ಥಕ 5 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿದೆ.
ಸಹಕಾರಿ ಕ್ಷೇತ್ರದ ಅದ್ವಿತೀಯ ಸಾಧಕರು, ಮಾಜಿ ಶಾಸಕರು, ಬಸ್ರೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಬಿ ಅಪ್ಪಣ್ಣ ಹೆಗ್ಡೆ ಉದ್ಘಾಟನೆ ಮಾಡಿ ಹಾಗೂ ಶ್ರೀ ಮಹಾತೋಬಾರ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರು, ಪ್ರಧಾನ ಅರ್ಚಕರಾಗಿದ್ದ ದಿವಂಗತ ಸೀತಾರಾಮ ಅಡಿಗರ ದಿವ್ಯ ಶುಭಾಶೀರ್ವಾದದೊಂದಿಗೆ ಆರಂಭವಾದ ನಮ್ಮ ನಿಮ್ಮೆಲ್ಲರ ಪ್ರೀತಿಯ ಶ್ರೀ ಮಹಾಲಿಂಗೇಶ್ವರ ಸೌಹಾರ್ದ ಕ್ರೆಡಿಟ್ ಕೋ -ಆಪರೇಟಿವ್ ಲಿ. ಯಶಸ್ವಿ 5 ವರ್ಷಗಳ ಸೇವೆಯನ್ನು ಪೂರೈಸಿ 6ನೇ ವರ್ಷದ ಪ್ರಗತಿಯಲ್ಲಿದೆ.
ಸಂಸ್ಥೆಯ ಏಳಿಗೆಯಲ್ಲಿ ಸಹಕಾರ ನೀಡಿದ ಆಡಳಿತ ಮಂಡಳಿಯ ಸದಸ್ಯರು, ಠೇವಣಿದಾರರು, ಷೇರುದಾರರು, ಗ್ರಾಹಕರು, ಪಿಗ್ಮಿದಾರರು, ಸಿಬ್ಬಂದಿಗಳು, ಹಿತೈಷಿಗಳು, ಅಭಿಮಾನಿಗಳು, ಸಹಕಾರಿ ಇಲಾಖೆ ಅಧಿಕಾರಿಗಳು,ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿ, ಪ್ರೋತ್ಸಾಹಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ಮುಂದಿನ ದಿನಗಳಲ್ಲಿ ನಿಮ್ಮ ಸಹಾಯ, ಹೃದಯ ತುಂಬಿದ ಸಹಕಾರ ನಮ್ಮ ಸಂಸ್ಥೆಯ ಮೇಲಿರಲಿ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಚಂದ್ರಕಾಂತ್ ಶೆಟ್ಟಿ ಹಾಗೂ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಅವರು ಹಾರೈಸಿದ್ದಾರೆ.