ಮೇ. 3-7: ಅರಂತಬೆಟ್ಟುಗುತ್ತು ಶ್ರೀ ಉಳ್ಳಾಯ ಮತ್ತು ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮ ದೈವಗಳ ನೇಮೋತ್ಸವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೇ. 3-7: ಅರಂತಬೆಟ್ಟುಗುತ್ತು ಶ್ರೀ ಉಳ್ಳಾಯ ಮತ್ತು ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮ ದೈವಗಳ ನೇಮೋತ್ಸವ

Share This
ಸುರತ್ಕಲ್: ಅರಂತಬೆಟ್ಟು ಶ್ರೀ ಉಳ್ಳಾಯ ಮತ್ತು ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಧರ್ಮದೈವಗಳ ನೇಮೋತ್ಸವ ಮತ್ತು ಅರಂತಬೆಟ್ಟುಗುತ್ತು ಧರ್ಮ ಚಾವಡಿಯ ಗೃಹ ಪ್ರವೇಶ ಕಾರ್ಯಕ್ರಮವು ಮೇ 3ರಿಂದ 6ರ ವರೆಗೆ ನಡೆಯಲಿದೆ. ಸುರತ್ಕಲ್ ಮಧುಸೂಧನ ಮಯ್ಯರವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಕಾರ್ಯಕ್ರಮ ಜರಗಲಿದೆ.
ಸಮಾರಂಭದ ಕುರಿತು ಪೂರ್ವಭಾವಿ ಸಭೆ ಮೊನ್ನೆ ಅರಂತಬೆಟ್ಟುಗುತ್ತುವಿನಲ್ಲಿ ನಡೆಯಿತು. ಸಭೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ ಕಳೆದ 80 ವರ್ಷಕ್ಕೂ ಮಿಕ್ಕಿ ಅಜೀಣಾವಸ್ಥೆಯಲ್ಲಿದ್ದ ಅರಂತಬೆಟ್ಟು ಉಳ್ಳಾಯ ಮತ್ತು ಪರಿವಾರ ದೈವಗಳ ದೇವಸ್ಥಾನ ಕುಟುಂಬಿಕರ ಮತ್ತು ಊರವರ ಸಹಕಾರದೊಂದಿಗೆ ಜೀಣೋದ್ಧಾರಗೊಂಡು ಪುನಃ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಗೃಹಪ್ರವೇಶಕ್ಕೆ ದಿನ ನಿಗದಿಯಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ಸಭೆಯಲ್ಲಿ ಕುಟುಂಬಿಕರಾದ ದಿಲ್ ರಾಜ್ ಆಳ್ವ, ಮುದ್ದಣ್ಣ ಶೆಟ್ಟಿ, ಕೋಶಾಧಿಕಾರಿ ನವೀನ್ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಶೆಟ್ಟಿ, ರಾಜೇಶ್ ಶೆಟ್ಟಿ, ಉಪಸ್ಥಿತರಿದ್ದರು.

ಬಾಲಕೃಷ್ಣ ಶೆಟ್ಟಿ ಅಂಗಡಿಗುತ್ತು, ರಮಾನಾಥ ರೈ, ಡಾ. ಎಸ್.ರಾಮಕೃಷ್ಣ ಶರ್ಮಾ, ಸತ್ಯಜಿತ್ ಸುರತ್ಕಲ್, ಭುಜಂಗ ಶೆಟ್ಟಿ , ಪ್ರಶಾಂತ್ ಶೆಟ್ಟಿ, ಕಾರ್ಪೋರೇಟರ್ ಶ್ವೇತಾ ಪೂಜಾರಿ, ಲೋಕಯ್ಯ ಶೆಟ್ಟಿ ಮುಂಚೂರು, ಸತೀಶ್ ಮುಂಚೂರು, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮಗಳು: ಮೇ 3ರಂದು ಬುಧವಾರ ಬೆಳಿಗ್ಗೆ ಗಂಟೆ 8 ರಿಂದ ನಾಗದೇವರಿಗೆ ಪವಮಾನ ಹೋಮ, 25 ಕಲಶ, ತಂಬಿಲ, ಆಶ್ಲೇಷಾ ಪೂಜೆ ಮತ್ತು ಮಹಾಪೂಜೆ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಶಿಲ್ಪಿಗಳಿಂದ ಆಲಯ ಪರಿಗ್ರಹ, ಸ್ವಸ್ತಿ ಪುಣ್ಯಾಹ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜೆ, ದಿಕ್ಪಾಲಕ ಬಲಿ ನಡೆಯಲಿದೆ.

ಮೇ 4 ರಂದು ಬೆಳಿಗ್ಗೆ 6.30 ಕ್ಕೆ ಗಣಹೋಮ, ವೆಂಕಟರಮಣ ದೇವರಿಗೆ ಮುಡಿಪು ಕಟ್ಟುವುದು, ಗೃಹಪ್ರವೇಶ, ಮಿಥುನ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ದೈವಗಳ ದರ್ಶನ, ನವಗ್ರಹ ಶಾಂತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 5.30 ರಿಂದ ದೈವಗಳ ಕಲಶ ಪ್ರತಿಷ್ಠೆ, ಸುದರ್ಶನ ಹೋಮ, ಅಧಿವಾಸ ಹೋಮ, ರಾತ್ರಿ 8.30 ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಮೇ 5 ರಂದು ಬೆಳಿಗ್ಗೆ 6 ಗಂಟೆಗೆ ಗಣಹೋಮ, ದೈವಗಳಿಗೆ ಕಲಶಾಭಿಷೇಕ, ಪರ್ವಸೇವೆ, ಬೆಳಿಗ್ಗೆ 10 ಕ್ಕೆ ಶ್ರೀ ಉಳ್ಳಾಯ ದೈವಕ್ಕೆ ನೇಮೋತ್ಸವ, 
ಬೆಳಿಗ್ಗೆ 11 ಗಂಟೆಗೆ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.

ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಮೈಸಂದಾಯ ದೈವಕ್ಕೆ ನೇಮೋತ್ಸವ, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ, ರಾತ್ರಿ 9 ರಿಂದ ಕಾಂತೇರಿ ಜುಮಾದಿ, ಬಂಟ, ಸರಳ ಜುಮಾದಿ ಬಂಟ ಮತ್ತು ಪಿಲಿಚಾಮುಂಡಿ ದೈವಗಳಿಗೆ ನೇಮೋತ್ಸವ ಜರಗಲಿದೆ. ಮೇ 6ರಂದು ಶನಿವಾರ ಸಂಜೆ 7ಕ್ಕೆ ಜಾಗೆದ ಪಂಜುರ್ಲಿ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಗಳ ನೇಮೋತ್ಸವ, ರಾತ್ರಿ 8 ರಿಂದ ಅನ್ನ ಸಂತರ್ಪಣೆ ನಡೆಯಲಿದೆ.

Pages