ಸುರತ್ಕಲ್: ಕಲಾಕ್ಷೇತ್ರ ಮತ್ತು ಸಮಾಜ ಸೇವೆಯಲ್ಲಿ ದುಡಿದು ಸಾಧನೆಗೈದಿರುವ ಆಶಾ ಶೆಟ್ಟಿ ಶಿಬರೂರು ಅವರನ್ನು ಇತ್ತೀಚೆಗೆ ಶಿಬರೂರು ದೇಲಂತಬೆಟ್ಟು ಶಾಲಾ ಸಭಾಂಗಣದಲ್ಲಿ ಮಹಿಳಾ ಮಂಡಲದಲ್ಲಿ ನಡೆದ ಜೆಸಿಐ ಗಣೇಶಪುರ ಇವರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಆಶಾ ಶೆಟ್ಟಿ ಅವರು, ನಾಟಕ, ಸಿನಿಮಾ ಯಕ್ಷಗಾನ ಕ್ಷೇತ್ರಗಳಲ್ಲಿ ಅಭಿನಯಿಸಿರುವುದರ ಜೊತೆಗೆ ಧಾರ್ಮಿಕ, ಶೈಕ್ಷಣಿಕ, ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಆಶಾ ಅವರು ಸುರತ್ಕಲ್ ಬಂಟರ ಸಂಘದ ನಿರ್ದೇಶಕಿಯಾಗಿ, ಶಿಬರೂರು-ದೇಲಂತಬೆಟ್ಟು ಮಹಿಳಾ ಮಂಡಲದ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೇದಿಕೆಯಲ್ಲಿ ಗಣೇಶಪುರ ಜೆಸಿಐ ಅಧ್ಯಕ್ಷ ಸನತ್ ಕುಮಾರ್, ಮಹಿಳಾ ಮಂಡಲದ ಅಧ್ಯೆಕ್ಷೆ ಸುಪ್ರಜಾ ಪ್ರಸಾದ್, ಗೀತಾ ಶೆಟ್ಟಿ ಉಪಸ್ಥಿತರಿದ್ದರು.