ಉಡುಪಿ: ಶಿವಮೊಗ್ಗ ಓಪನ್ 3ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ 2022ರಲ್ಲಿ ಭಾಗವಹಿಸಿದ ಉಡುಪಿ ಒಳಕಾಡು ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ರಿಯಾ ಶೆಟ್ಟಿ ಕಟ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುತ್ತಾಳೆ.
ಈಕೆ ಉಡುಪಿ ಹಾವಂಜೆ ಗ್ರಾಮದ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಮತ್ತು ಜಯಲಕ್ಷ್ಮೀ ಶೆಟ್ಟಿಯವರ ಪುತ್ರಿಯಾಗಿದ್ದಾಳೆ.
ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದು ಹೆಮ್ಮೆ ಪಡುವ ಸಾಧನೆ ಮಾಡಿರುವ ರಿಯಾ ಶೆಟ್ಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪರ್ಕಳದ ಪ್ರವೀಣ ಪಿ.ಕೆ.ಸಿ ಯವರ ಶಿಷ್ಯೆಯಾಗಿದ್ದು, ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದಾಳೆ.