ಮಂಗಳೂರು: ಪದವಿನಂಗಡಿ ನಿವಾಸಿ ಬಂಟರ ಮಾತೃಸಂಘದ ಮಾಜಿ ಕಾರ್ಯದರ್ಶಿ Ln.ನಿಟ್ಟೆ ಶಶಿಧರ ಶೆಟ್ಟಿ ಜೂ.1ರಂದು ವಿಧಿವಶರಾದರು.


ಅವರು ತುಳುಕೂಟ ಕುಡ್ಲದ ಹಿರಿಯ ಸದಸ್ಯರಾಗಿ ಶಾರದಾ ಕ್ಯಾಟರರ್ಸ್ ಸಂಸ್ಥೆಗಳ ಮಾಲಕರಾಗಿ, ಪದವಿನಂಗಡಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ, ಅ.ಭಾ.ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕವಾಗಿ ಗುರುತಿಸಿ ಕೊಂಡಿದ್ದರು.
ಮೃತರ ಪುತ್ರಿ ವಿದೇಶದಿಂದ ಆಗಮಿಸ ಬೇಕಾಗಿರುವುದರಿಂದ ಅಂತ್ಯಕ್ರಿಯೆ ಜೂನ್ 4ರಂದು ನಿಟ್ಟೆಯ ಸ್ವಗೃಹದಲ್ಲಿ ಜರಗಲಿದೆ.