ದೈವಾರಾಧನೆಯ ಮೂಲನಂಬಿಕೆ ಬದಲಾಗಿ ಮೂಡನಂಬಿಕೆಗೆ ಬಲಿಯಾಗುತ್ತಿದ್ದೇವೆ : ವಿದ್ಯಾವಾಚಸ್ಪತಿ ಶ್ರೀ ಸಂತೋಷ ಗುರೂಜಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದೈವಾರಾಧನೆಯ ಮೂಲನಂಬಿಕೆ ಬದಲಾಗಿ ಮೂಡನಂಬಿಕೆಗೆ ಬಲಿಯಾಗುತ್ತಿದ್ದೇವೆ : ವಿದ್ಯಾವಾಚಸ್ಪತಿ ಶ್ರೀ ಸಂತೋಷ ಗುರೂಜಿ

Share This
ಸುರತ್ಕಲ್ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳುವರು ಪ್ರಕೃತಿ ಆರಾಧಕರಾಗಿದ್ದು ತುಳುನಾಡಿನ ಸಂಸ್ಕೃತಿ, ಅಚಾರ ವಿಚಾರಗಳು ವಿಶಿಷ್ಠವಾಗಿದೆ ಎಂದು ಬಾರ್ಕೂರು ಸಂಸ್ಥಾನದ ವಿದ್ಯಾವಾಚಸ್ಪತಿ ಶ್ರೀ ಸಂತೋಷ ಗುರೂಜಿ ನುಡಿದರು.
ಅವರು ಸುರತ್ಕಲ್ ಬಂಟರ ಭವನದಲ್ಲಿ ನಡೆದ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ನಡೆದ ವಿಚಾರ ಸಂಕಿರಣ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಸಂಸ್ಕೃತಿ ಕಟ್ಟುವ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯಕ್ಕೆ ತುಳುವರು ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದಾರೆ. ತುಳುನಾಡಿನ ಬಂಟ ಸಮುದಾಯ ಇತರ ಸಮುದಾಯದ ಬಡಜನರ ಕಷ್ಟ ನೋವುಗಳಿಗೆ ಸ್ಪಂದಿಸುವ ಮೂಲಕ ಇತರರಿಗೆ ಮಾದರಿ ಎಣಿಸಿದೆ. ಇತ್ತೀಚಿನ ದಿನಗಳಲ್ಲಿ ನಾವು ದೈವರಾಧನೆ ಪದ್ದತಿಯಲ್ಲಿ ಮೂಡನಂಬಿಕೆಗೆ ಬಲಿಯಾಗಿ ಮೂಲನಂಬಿಕೆಯನ್ನೇ ಮರೆತಿರುವುದು ವಿಷಾದನನೀಯ. ಇತ್ತೀಚಿನ ವರ್ಷಗಳಲ್ಲಿ ಕೌಟುಂಬಿಕ ಶಿಥಿಲತೆ ಕಾಣುತ್ತಿದೆ. ಮನೆ ದೊಡ್ಡದಾಗಿದೆ, ಮನಸ್ಸು ಸಣ್ಣದಾಗಿದೆ. ತರವಾಡು ಮನೆತನ, ಕೂಡು ಕುಟುಂಬಗಳು, ಸಂಬಂಧಗಳು ದೂರವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಹಿರಿಯರು ನಮ್ಮ ಹಿಂಧು ಸಮಾಜವನ್ನು ಒಟ್ಟುಗೂಡಿಸುವ ನಮ್ಮ ಸಂಸ್ಕೃತಿ ಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯ ಗುತ್ತು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ, ಕಾರ್ಯ ದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯ ದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಾಂಸ್ಕೃತಿಕ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಮಾಜಿ ಅಧ್ಯಕ್ಷ ಉಲ್ಲಾಸ್ ಅರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕಿರಣ್ ಪ್ರಸಾದ್ ರೈ ಸ್ವಾಗತಿಸಿ, ಪುಷ್ಪರಾಜ್ ಶೆಟ್ಟಿ ಮಧ್ಯ ವಂದಿಸಿದರು. ಇದೇ ಸಂದರ್ಭದಲ್ಲಿ ಬಾರ್ಕೂರು ಸಂಸ್ಥಾನದ ಸುರತ್ಕಲ್ ಬೀಡು ಸಮಿತಿಯನ್ನು ರಚಿಸಲಾಯಿತು.

ದೈವಗಳಿಗೆ ಮಂತ್ರ, ಅಭಿಷೇಕ ಇಲ್ಲ, ಗಡಿ ಪ್ರಧಾನರ ನುಡಿಯೇ ಪ್ರಧಾನ : ದೈವಗಳಿಗೆ ಅಭಿಷೇಕ‌ ಮಾಡುವ ಕ್ರಮ ಇಲ್ಲ, ಶಿವನಿಗೆ ಮಾತ್ರ ಅಭಿಷೇಕ. ದೈವಗಳಿಗೆ ಮಂತ್ರ ಇಲ್ಲ, ದೈವಗಳಿಗೆ ನುಡಿ ಮಾತ್ರ. ದೈವಗಳಿಗೆ ಅಷ್ಟಬಂಧ ಇಲ್ಲ, ಚರ ಪ್ರತಿಷ್ಠೆ ಮಾತ್ರ. ಮಂತ್ರಗಳು ಹುಟ್ಟಿದ್ದು ಎರಡು ಸಾವಿರ ವರ್ಷಗಳ ಹಿಂದೆ, ವೇದ ಲಕ್ಷ ವರ್ಷದ ಹಿಂದೆಯೇ ಹುಟ್ಟಿದೆ. ಭೂತಾರಾಧನೆ, ನಾಗಾರಾಧನೆ ಬಗ್ಗೆ ಜನರಿಗೆ ತಿಳುವಳಿಕೆ, ಅರಿವು ಮೂಡಿಸುವ ಕೆಲಸ ಆಗ ಬೇಕಾಗಿದೆ. ಪದ್ದತಿಗಳನ್ನು ಕೈ ಬಿಡಬಾರದು. ಸಮಾಜ ಒಂದಾಗುವ ಕೆಲಸ ಆಗಬೇಕು ಎಂದರು.

Pages