ಬಂಟರ ಸಂಘ ಮುಂಬಯಿ: ವಾರ್ಷಿಕ ಸ್ನೇಹ ಸಮ್ಮಿಲನ-ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಸಂಘ ಮುಂಬಯಿ: ವಾರ್ಷಿಕ ಸ್ನೇಹ ಸಮ್ಮಿಲನ-ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ

Share This

ಬಂಟರ ಸಂಘದಿಂದ ಡೀಮ್ಡ್ ಯುನಿವರ್ಸಿಟಿ ರೂಪುಗೊಳ್ಳಲಿ : ಎಸ್.ಎಂ ಶೆಟ್ಟಿ

ಬಂಟ್ಸ್ ನ್ಯೂಸ್, ಮುಂಬಯಿ: ಬಂಟರ ಮನೆತನ ಸದಾ ಹೇಳಲು ಪ್ರೌಢಿಮೆ (ಸ್ವಾಭಿಮಾನ) ಆಗುತ್ತದೆ. ನನ್ನ ಈ ಮಟ್ಟದ ಯಶಸ್ಸಿಗೆ ಸ್ವಸಮುದಾಯದಲ್ಲಿ ಪ್ರೀತಿ ಮತ್ತು ಸಹಾನುಭೂತಿ ಹಂಚಿಕೊಳ್ಳಲು ಅಭಿಮಾನ ಪಡುತ್ತೇನೆ. ನಾನು ಸಾಮಾಜಿಕ, ಶೈಕ್ಷಣಿಕ ಸೇವಾಂಕ್ಷಿಯಾಗಲು ಇಷ್ಟಪಡುತ್ತಿದ್ದು ಬಂಟರ ಸಂಘ ಮುಂಬಯಿ ಬೃಹತ್ ಪರಿಗಣಿತ ವಿಶ್ವವಿದ್ಯಾಲಯ (ಡೀಮ್ಡ್ ಯುನಿವರ್ಸಿಟಿ) ನಿರ್ಮಿಸುವ ಕನಸು ಕಂಡಿದ್ದೇನೆ. ಆದರಿಂದ ಬಂಟರ ಮತ್ತು ನಾಡಿನ ಭಾವೀ ಯುವ ಪೀಳಿಗೆಯ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶವಾಗವ ಆಶಯ ಕಂಡಿದ್ದೇನೆ ಎಂದು ಬಂಟ ಸಮುದಾಯದ ಹಿರಿಯ ಧುರೀಣ, ಪ್ರತಿಷ್ಠಿತ ಉದ್ಯಮಿ, ಕೊಡುಗೈದಾನಿ ಎಸ್.ಎಂ ಸಮೂಹದ ಕಾರ್ಯಾಧ್ಯಕ್ಷ ಎಸ್.ಎಂ ಶೆಟ್ಟಿ  ತಿಳಿಸಿದರು.
ಬಂಟರ ಸಂಘ ಮುಂಬಯಿ ಕಳೆದ ಭಾನುವಾರ ಕುರ್ಲಾ ಪೂರ್ವದ  ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಸಂಭ್ರಮಿಸಿದ ವಾರ್ಷಿಕ ಸ್ನೇಹ ಸಮ್ಮಿಲನ ಸಂಭ್ರಮ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸಮ್ಮಾನ, ವೈವಿಧ್ಯಮಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಬಂಟ್ಸ್ ಬೋರಿವಿಲಿ ಶಿಕ್ಷಣ ಯೋಜನೆಗೆ ಸಾಂಕೇತಿಕವಾಗಿ ಚಾಲನೆಯನ್ನಿತ್ತು, ಬಂಟರ ಸಂಘವು ಕೊಡಮಾಡಿದ ಜೀವಮಾನ ಸಾಧನಾ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಎಸ್.ಎಂ ಶೆಟ್ಟಿ  ಮಾತನಾಡಿದರು.

ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಅದ್ದೂರಿ ಸಡಗರದಲ್ಲಿ ಚರಿಷ್ಮಾ ಬಿಲ್ಡರ್ಸ್‍ನ ಕಾರ್ಯಾಧ್ಯಕ್ಷ ಸುಧಿರ್ ವಿ.ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ಬಂಟ್ಸ್ ಫ್ಯಾಮಿಲಿ ಎಡಾಪ್ಶನ್ ಯೋಜನೆಗೆ ಚಾಲನೆಯನ್ನಿತ್ತರು. ಅತಿಥಿ ಅಭ್ಯಾಗತರಾಗಿದ್ದ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಬಂಟ್ಸ್ ಡಿಜಿಟಲ್ ವರ್ಲ್ಡ್ ಮೊಬಾಯ್ಲ್ ಆ್ಯಪ್, ಎಂಆರ್‍ಜಿ ಹಾಸ್ಪಿಟಾಲಿಟಿ ಆ್ಯಂಡ್ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಅವರು ಬಂಟ್ಸ್ ಪ್ರತಿಭಾನ್ವಿತರ ಪ್ರೋತ್ಸಾಹಕ್ಕಾಗಿನ ಬಂಟ್ಸ್ ಟ್ಯಾಲೆಂಟ್ ಎಡಾಪ್ಶನ್ (ಪ್ರತಿಭಾನ್ವಿತರ ದತ್ತು ಸ್ವೀಕಾರ) ಯೋಜನೆಗೆ ನಾಮ ಫಲಕ ಅನಾವರಣ ಗೊಳಿಸಿ ಚಾಲನೆಯನ್ನಿತ್ತರು. ಬೋರಿವಿಲಿ ಶಿಕ್ಷಣ ಯೋಜನೆ ಬಗ್ಗೆ ಕಿರಣ್ ಶೆಟ್ಟಿ, ವೆಬ್‍ಸೈಟ್ ಹಾಗೂ ಮೊಬಾಯ್ಲ್ ಆ್ಯಪ್ ಬಗ್ಗೆ ನಿತ್ಯಾನಂದ ಶೆಟ್ಟಿ ಸ್ಥೂಲವಾದ ಮಾಹಿತಿಯನ್ನಿತ್ತರು.

ಸಮಾರಂಭದಲ್ಲಿ ಎಸ್. ಎಂ ಶೆಟ್ಟಿ (ಪತ್ನಿ ಗೀತಾ ಎಸ್.ಎಂ ಶೆಟ್ಟಿ, ಮನ್‍ಮೋಹನ್ ಆರ್.ಶೆಟ್ಟಿ, ಬಿ.ವಿವೇಕ್ ಶೆಟ್ಟಿ ಅವರನ್ನೊಳಗೊಂಡು) ದಿ. ರಮಾನಾಥ ಎಸ್.ಪಯ್ಯಡೆ ಸ್ಮಾರಕ ವಾರ್ಷಿಕ ಅತ್ಯುತ್ತಮ  ಬಂಟ ಸಾಧಕ ಪ್ರಶಸ್ತಿಯನ್ನು ಪ್ರಸಿದ್ಧ ಉದ್ಯಮಿಗಳಾದ ವಿ.ಕೆ (ಮ್ಯಾಕೊೈ) ಸಮೂಹದ ಕಾರ್ಯಾಧ್ಯಕ್ಷ ಕೆ.ಎಂ ಶೆಟ್ಟಿ ಮತ್ತು ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು (ಕನ್ಯಾನ) ಅವರಿಗೆ, ದಿ. ಶೆಫಾಲಿ ಮನೋಹರ್ ಹೆಗ್ಡೆ ಸ್ಮಾರಕ ವಾರ್ಷಿಕ ಅತ್ಯುತ್ತಮ ಬಂಟ ಸಾಧಕಿ ಪ್ರಶಸ್ತಿಯನ್ನು ನೈಋತ್ಯ  ರೈಲ್ವೇ ವಿಭಾಗದ ಉಪ ಮುಖ್ಯ ವಾಣಿಜ್ಯ  ಪ್ರಬಂಧಕಿ  ಕು| ಪ್ರಿಯಾ ಶೆಟ್ಟಿ (ಐಆರ್‍ಟಿಎಸ್) ಇವರಿಗೆ, ಕ್ರೀಡಾ ಸಾಧಕ ಪ್ರಶಸ್ತಿಯನ್ನು ಇಂಡಿಯನ್ ಬ್ಯಾಡ್ಮಿಂಟನ್, ಒಲಿಂಪಿಕ್ ಆಟಗಾರ, ಅರ್ಜುನ್ ಪ್ರಶಸ್ತಿ ಪುರಸ್ಕೃತ ಮಾ| ಚಿರಾಗ್ ಶೆಟ್ಟಿ ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಯ್ಯಡೆ ಪ್ರಶಸ್ತಿ ಪ್ರಾಯೋಜಕರಾದ  ಗೌರವ್ ಆರ್.ಪಯ್ಯಡೆ, ಪದ್ಮನಾಭ ಎಸ್.ಪಯ್ಯಡೆ, ಮುಂಡಪ್ಪ ಎಸ್.ಪಯ್ಯಡೆ, ಡಾ| ಪದ್ಮನಾಭ ವಿ.ಶೆಟ್ಟಿ, ಶೆಫಾಲಿ ಪ್ರಶಸ್ತಿ ಪ್ರಾಯೋಜಕರಾದ  ಡಾ| ಮನೋಹರ್ ಹೆಗ್ಡೆ ಮತ್ತು ಆಶಾ ಮನೋಹರ್ ಹೆಗ್ಡೆ ಉಪಸ್ಥಿತರಿದ್ದು ಪುರಸ್ಕೃತರನ್ನು ಅಭಿನಂದಿಸಿದರು.

ಅಂತೆಯೇ ಬಂಟ ಸಮಾಜದಲ್ಲಿ  ವಿವಿಧ ಕ್ಷೇತ್ರಗಳಲ್ಲಿ  ವಿಶಿಷ್ಟ  ಸಾಧನೆಗೈದ ಬಂಟ ಸಾಧಕರಾದ ಸಾಹಿತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತೆ ಡಾ| ಸುನೀತಾ ಎಂ.ಶೆಟ್ಟಿ, ಭಾರತೀಯ ಸೇವಾ ವಾಯು ರಕ್ಷಣಾ ನಿಗಮದ ಸೇನಾನಿ ಅಶ್ವಿನಿ ಶೆಟ್ಟಿ, ಹೊಟೇಲ್ ಗುರುದೇವ್ ಕಲ್ಯಾಣ್ ಇದರ ಮಾಲೀಕ ಭಾಸ್ಕರ್ ಶೆಟ್ಟಿ ಕಲ್ಯಾಣ್, ಚಾನೆಲ್‍ಫ್ರೈಟ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಕಿಶನ್ ಜೆ.ಶೆಟ್ಟಿ, ಹೆಸರಾಂತ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ವಿ.ಎಂ ಶೆಟ್ಟಿ, ಲೆಕ್ಕ ಪರಿಶೋಧಕ ಸಿಎ| ಹರೀಶ್ ಹೆಚ್.ಹೆಗ್ಡೆ ಅತಿಥಿಗಳು ಸಮ್ಮಾನಿಸಿ ಅಭಿನಂದಿಸಿದರು. ಸ್ಪರ್ಧಾ ನಿರ್ಣಾಯಕರಾದ ಕೋರಿಯೋಗ್ರಾಫರ್ಸ್‍ಗಳಾದ ಪವನ್ ಶೆಟ್ಟಿ, ಮಿಥಲಿ ಶೆಟ್ಟಿ, ಅಲ್ಫೊಸೆ ಶೆಟ್ಟಿ ಮತ್ತು ಲತಿಕಾ ಶ್ರೀಯಾನ್ ಇವರನ್ನೂ ಗೌರವಿಸಲಾಯಿತು.
ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ಕೋವಿಡ್ ನಿಮಿತ್ತ ಎರಡು ವರ್ಷಗಳ ನಂತರ ನಾವು ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಲು ಹೆಮ್ಮೆಯೆಣಿಸುತ್ತಿದೆ. ನಮ್ಮಲ್ಲಿನ ಸಾಧಕರನ್ನು ಗುರುತಿಸುವುದರಿಂದ ಯುವಜನಾಂಗಕ್ಕೆ ಉತ್ತೇಜನ ನೀಡಿದಂತಾಗುವುದು. ಇದೇ ನಮ್ಮ ಉದ್ದೇಶವೂ ಹೌದು. ಬಂಟರು ಆಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕವಾಗಿ ಗುರುತಿಸಿಕೊಳ್ಳಲು ಸನ್ನದ್ಧಾಗಿದ್ದು ಹೊಸಯುಗದತ್ತ ದಾಪುಕಾಲಿಸುತ್ತಿದೆ ಎಂದೇಳಲು ಅಭಿಮಾನವೆಣಿಸುತ್ತಿದೆ ಎಂದರು. 

ಸ್ವಸಮಾಜವನ್ನು ಸುಶಿಕ್ಷತವಾಗಿಸಿ ಭೌಗೋಳಿಕ ಬಾಳಿಗೆ ಬಂಟರನ್ನು ಪರಿಚಯಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಬಂಟರು ಸ್ವಾಭಿಮಾನಿಗಳು ಆದರೂ ಆರ್ಥಿಕವಾಗಿ ಹಿಂದುಳಿದ್ದಲ್ಲಿ ಇನ್ನು ಯಾವನೇ ಬಂಟನು ಶಿಕ್ಷಣ ವಂಚಿತನಾಗುವ ಪ್ರೆಶ್ನೆಯೇಯಿಲ್ಲ. ಬೋರಿವಿಲಿ ಶಿಕ್ಷಣ ಯೋಜನೆ ಸೇರಿದಂತೆ ಸ್ವಂತಿಕೆಯ 2-3 ಉನ್ನತ ಶಿಕ್ಷಣಾಲಯಗಳು ಸೇವೆಯಲ್ಲಿವೆ. ಬಂಟರ ಶೈಕ್ಷಣಿಕ ಮೂಲಸೌಕರ್ಯ ವು ಮುಂಬಯಿಯಲ್ಲೇ ಪ್ರಥಮ ಶ್ರೇಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲದ ವ್ಯವಸ್ಥೆಯೂ ಮಾಡಿದ್ದೇವೆ. ಸದ್ಯದಲ್ಲೇ ಕಂಕಣ ಭಾಗ್ಯ ಯೋಜನೆಯನ್ನೂ ಸೇವಾರ್ಪಣೆ ಮಾಡಲಿದ್ದೇವೆ. ರಾಷ್ಟ್ರೀಯ ನಾಗರಿಕ ಸೇವೆ ಬಗ್ಗೆ ಇದೀಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮಲ್ಲಿನ ಕ್ರೀಡಾಸಕ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿರಾಗ್ ಶೆಟ್ಟಿ ಸ್ಪೋರ್ಟ್ಸ್ ಅಚೀವರ್ಸ್ ಅವಾರ್ಡ್ ಕೊಡಮಾಡುವ ಬಗ್ಗೆ ಚಿಂತಿಸಿದ್ದೇವೆ ಎಂದು ಬಂಟರ ಸಂಘದ ಅಸ್ತಿತ್ವದಿಂದ ಈ ತನಕದ ಇತಿಹಾಸವನ್ನು ತಿಳಿಸಿ ಸಂಘದ ಸ್ಥಾಪಕರು ಮತ್ತು ಮುನ್ನಡೆಸಿದ ಎಲ್ಲಾ ಹಿರಿಕಿರಿಯ ಬಂಧುಗಳ ಸೇವೆಯನ್ನು ಮನವರಿಸಿ ಅಭಿವಂದಿಸಿದರು. 

ಬಂಟರ ಸಂಘದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮಿತಿ ಕಾರ್ಯಧ್ಯಕ್ಷ ಬಿ.ಆರ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷ ಶಾಂತರಾಮ ಬಿ.ಶೆಟ್ಟಿ, ಬೋರಿವಿಲಿ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ಡಾ| ಪಿ.ವಿ ಶೆಟ್ಟಿ, ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಟಿ.ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ.ಶೆಟ್ಟಿ, ವೇದಿಕೆಯಲ್ಲಿ ಆಸೀನರಾಗಿದ್ದರು.

ಆಲ್ ಕಾರ್ಗೋ ಲಾಜಿಸ್ಟಿಕ್ ಇದರ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ ಅವರ ಸಂದೇಶವನ್ನು ಡಾ| ಆರ್.ಕೆ ಶೆಟ್ಟಿ ವಾಚಿಸಿದ್ದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರು ದೃಶ್ಯಮಾದ್ಯಮದ ಮೂಲಕ ತಮ್ಮ ಸಂದೇಶವನ್ನು ಸಭಿಕರಿಗೆ ನೀಡಿದರು. ಅಧ್ಯಕ್ಷರು ಉಪಸ್ಥಿತ ಸಂಘದ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ದಾನಿಗಳನ್ನು, ಉಪಸ್ಥಿತ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರುಗಳನ್ನು ಗೌರವಿಸಿದರು.

ಸಂಘದ ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕಾರ್ಯಕಾರಿ ಉಪ ಸಮಿತಿಗಳ, ಎಲ್ಲಾ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಸಮನ್ವಯಕರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಸ್ನೇಹ ಸಮ್ಮಿಲನದ ಅಂಗವಾಗಿ ಬಂಟ್ಸ್ ಗಾಟ್ ಟ್ಯಾಲೇಂಟ್ ಪ್ರತಿಭಾನ್ವೇಷಣಾ  ಸ್ಪರ್ಧೆ ನಡೆಸಲಾಗಿದ್ದು ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ಮಾಡಲಾಯಿತು.

ಶೈಲಜಾ ಶೆಟ್ಟಿ, ಜಯಲತಾ ಶೆಟ್ಟಿ, ರಜನಿ ಆರ್.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಚಂದ್ರಹಾಸ ಕೆ.ಶೆಟ್ಟಿ  ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಘದ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಗಳನ್ನೀಡಿ ಗೌರವಿಸಿದರು. ಅಶೋಕ್ ಪಕ್ಕಳ ಮತ್ತು ಅನುಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಳ್ತೂರು ಮೋಹನ್‍ದಾಸ್ ಶೆಟ್ಟಿ ವಂದಿಸಿದರು.

Pages