ಮಂಗಳೂರು: ಯಕ್ಷಗಾನವನ್ನು ದೂರದಿಂದ ನೋಡುವಾಗ ಸುಲಭ ಎನಿಸುತ್ತದೆ. ಆದರೆ ಅದನ್ನು ಆರಾಧಿಸಿಕೊಂಡು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ಅವರು ಶನಿವಾರ ಯಕ್ಷಧ್ರವ ಪಟ್ಲ ಫೌಂಡೆಶನ್ ಟ್ರಸ್ಟ್ ವತಿಯಿಂದ ನಡೆದ ಟ್ರಸ್ಟ್‌ಗೆ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾನು ಘಟ್ಟ ಪ್ರದೇಶದವನಾಗಿದ್ದರೂ ನಮ್ಮ ಪ್ರದೇಶದಲ್ಲಿ ಯಕ್ಷಗಾನವನ್ನು ದೈವಗಳಿಗೆ ಹರಿಕೆಯನ್ನು ಹೊತ್ತು ಅದನ್ನು ತೀರಿಸಲು ನಡೆಸಲಾಗುತ್ತದೆ. ಅದನ್ನು ಕೇವಲ ದೈವಾರಾಧನೆಗೆ ಎಂಬುವುದನ್ನು ಬಯಸುವ ಬದಲು ಅದರಲ್ಲಿನ ಕಲೆಯನ್ನು ಗುರುತಿಸಿ, ಅದರಲ್ಲಿನ ಶ್ರಮವನ್ನು ನಾವು ಗೌರವಿಸಬೇಕು ಎಂದರು.
ದೇಶದಲ್ಲಿ ಕರ್ನಾಟಕವನ್ನು ಗುರುತಿಸುವಾಗ ಕಲೆಯಲ್ಲಿ ಮೊದಲು ಬರುವುದು ಯಕ್ಷಗಾನ ಎಂದ ಅವರು ತನ್ನ ಐಎಎಸ್ ತರಬೇತಿಯ ಸಂದರ್ಭದಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿದ್ದನ್ನು ನೆನೆಸಿಕೊಂಡರು.
ಪಟ್ಲ ಯಕ್ಷಗಾನದ ಲಿಟಲ್ ಮಾಸ್ಟರ್: ಸದಾಶಿವ ಶೆಟ್ಟಿ : ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ತಮ್ಮ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಕ್ರಿಕೇಟ್‌ನಲ್ಲಿ ಸಚಿನ್ ತೆಂಡುಲ್ಕರ್ ಹೇಗೆ ದೇವರು ಹಾಗೆ ಯಕ್ಷಗಾನದಲ್ಲಿ ಸತೀಶ್ ಪಟ್ಲ ಅವರು ದೇವರು ಎಂದ ಅವರು ಯಕ್ಷಗಾನದ ಲಿಟಲ್ ಮಾಸ್ಟರ್. ಯಕ್ಷಗಾನ ಕಲೆಯನ್ನು ಪ್ರತಿಭೆಯ ಮೂಲಕ ಮೇಲಕ್ಕೆ ಕೊಂಡೊಗಿದ್ದಾರೆ ಎಂದರು.
ಸಮಾಜ ಸೇವೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರು ಬಂಟ ಸಮಾಜದ ಎರಡು ಕಣ್ಣುಗಳು. ಇದ್ದವರಿಂದ ಪಡೆದು ಇಲ್ಲದವರಿಗೆ ಕೊಡುತ್ತಿದ್ದಾರೆ, ಹಂಚುತ್ತಿದ್ದಾರೆ, ಇದರಿಂದಾಗಿ ಸಮಾಜವನ್ನು ಬೆಳೆಸಲು ಶಮಿಸುತ್ತಿದ್ದಾರೆ ಎಂದ ಅವರು ಸನಾತನ ಧರ್ಮ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಹೊಂದಿರುವ ಕಲೆ ಯಕ್ಷಗಾನ. ಯಕ್ಷಗಾನ ನಾಟಕವಲ್ಲ ಅದರಲ್ಲಿ ದೈವತ್ವವಿದೆ. ಯಕ್ಷಗಾರ ರಂಗಸ್ಥಳದಲ್ಲಿ ಒಬ್ಬ ಕಲಾವಿದ ದೇವೆಂದ್ರನಾಗುತ್ತಾನೆ. ಅವನೊಂದಿಗೆ ರಂಭಾ ಊರ್ವಶಿ ಸಂಪತ್ತು ಎಲ್ಲವೂ ಇರುತ್ತದೆ. ಅವನು ತನ್ನ ಮನೆಯಲ್ಲಿ ಯಾವುದೇ ಕಷ್ಟ ಇದ್ದರೂ ಅದನ್ನು ಮರೆತು ರಂಗಸ್ಥಳದಲ್ಲಿ ದೇವೆಂದ್ರನಂತೆ ಇರುತ್ತಾನೆ. ಅವನು ರಂಗಸ್ಥಳದಿಂದ ಬಟ್ಟೆ ಬದಲಿಸಿ ಮನೆಗೆ ಹೋಗುವಾಗ ಮತ್ತೆ ಅವನ ಕಷ್ಟಗಳು ಎದುರಾಗುತ್ತವೆ ಇದನ್ನು ಗುರುತಿಸಿದ ಸತೀಶ್ ಪಟ್ಲ ಅಂತವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಸದಾಶಿವ ಶೆಟ್ಟಿ ಹೇಳಿದರು.
ಡಾ. ಎಂ.ಎಲ್. ಸಾಮಗ, ಮಾಜಿ ಸಚಿವ ಅಭಯ್‌ಚಂದ್ರ ಜೈನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿದರು. ಈ ಸಂದರ್ಭ ಸಾಧನೆ ಮಾಡಿದ ಯುವ ಪ್ರತಿಭೆ ವೃಂಧಾ ಅವರನ್ನು ಸನ್ಮಾನಿಸಲಾಯತು. ಐದು ಮಂದಿಗೆ ಆರ್ಥಿಕ ನೆರವು ನೀಡಲಾಯಿತು. ಕದ್ರಿ ನವನೀತ್ ಶೆಟ್ಟಿ ಅವರು ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರ ಬಗ್ಗೆ ಮಾತನಾಡಿದರು. ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರವನ್ನು ವಾಚಿಸಿದರು.
ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ಎಸಿ ಮಧನ್ ಮೋಹನ್, ಉದ್ಯಮಿ ಬರೋಡಾ ಶಶಿಧರ್ ಶೆಟ್ಟಿ ಡಾ.ಸತೀಶ್ ಭಂಡಾರಿ, ಸಿಎ ದಿವಾಕರ ರಾವ್ ಶುಭ ಹಾರೈಸಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಾರ್ಗದರ್ಶಕರಾದ ಮಹಾಬಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ರೈ, ಉಪಾಧ್ಯಕ್ಷರಾದ ಡಾ. ಮನುರಾವ್, ದುರ್ಗಾಪ್ರಕಾಶ್ ರಾವ್, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ ನಗರ, ರಾಜೀವ ಪೂಜಾರಿ ಕೈಕಂಬ ಮತ್ತಿತರರು ಇದ್ದರು. ರವಿ ಶೆಟ್ಟಿ ಅಶೋಕನಗರ ವಂದಿಸಿದರು.ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.