ಒಡಿಯೂರು ರಥೋತ್ಸವ - ತುಳುನಾಡ ಜಾತ್ರೆ, ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಜ್ಞಾನವಾಹಿನಿ ಸಮಾರೋಪ - ಆನಂದೋತ್ಸವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಒಡಿಯೂರು ರಥೋತ್ಸವ - ತುಳುನಾಡ ಜಾತ್ರೆ, ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಜ್ಞಾನವಾಹಿನಿ ಸಮಾರೋಪ - ಆನಂದೋತ್ಸವ

Share This

ಎಚ್ಚರದಿಂದ ಬದುಕುವ ಗುಣ ನಮ್ಮದಾಗಬೇಕು: ಒಡಿಯೂರು ಶ್ರೀ

ವಿಟ್ಲ: ಇದೊಂದು ಸಂಭ್ರಮದ ಸಂದರ್ಭ. ಸಂತನ ಬದುಕು ನೀರಿನಲ್ಲಿರುವ ಮೀನಿನಂತೆ. ಸಮಾಜದಲ್ಲಿರುವ ಕೊಳೆಯನ್ನು ತೆಗೆಯುವ ಕೆಲಸ ಸಂತರಿಂದ ಆಗುತ್ತಿದೆ. ಮಕ್ಕಳಿಗೆ ಸಂಸ್ಕಾರ ನೀಡಿ ಅವರನ್ನು ಸತ್ಪ್ರಜೆಯನ್ನಾಗಿ ಮಾಡುವ ಪ್ರಯತ್ನವಾಗಬೇಕು. ಧಾನಗುಣ ಶ್ರೇಷ್ಟ ವಾದುದು. ಎಚ್ಚರದಿಂದ ಬದುಕುವ ಗುಣ ನಮ್ಮದಾಗಬೇಕು ಎಂದು ಒಡಿಯೂರು‌ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಫೆ.11ರಂದು ಸಂಸ್ಥಾನದ ಆತ್ರೇಯ ಮಂಟಪದಲ್ಲಿ ನಡೆದ ಶ್ರೀ ಒಡಿಯೂರು ರಥೋತ್ಸವ - ತುಳುನಾಡ ಜಾತ್ರೆ, ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಜ್ಞಾನವಾಹಿನಿ ಸಮಾರೋಪ - ಆನಂದೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಭಗವಂತನ ಲೆಕ್ಕಾಚಾರದಲ್ಲಿ ಎಡಿಟ್ - ಡಿಲಿಟ್ ಮಾಡಲಾಗದು. ಸಂಪತ್ತನ್ನು ಧಾನ ಮಾಡಬೇಕು ಇಲ್ಲವಾದಲ್ಲಿ ಬೋಗಮಾಡಬೇಕು ಇಲ್ಲವಾದಲ್ಲಿ ಅದು ಸಾಶವಾಗುತ್ತದೆ. ಧರ್ಮದ ಒಡಲು ಸತ್ಯ. ಬದುಕಿನಲ್ಲಿ ಲೆಕ್ಕಾಚಾರ ಅತೀ‌ ಮುಖ್ಯ. ಹೃದಯ ಪೀಠ ಭಲವಾದಾಗ ಬದುಕು ಸುಂದರವಾಗುತ್ತದೆ. ಜೀವನ ರಥಕ್ಕೆ ಪತಮುಖ್ಯ. ಜೀವನದಲ್ಲಿ ವ್ಯಕ್ತಿತ್ವವನ್ನು ಮೂಡಿಸುವ ಶಿಲ್ಪಿಗಳು ನಾವಾಗಬೇಕು ಎಂದು ಕುಡಿಯುವರು ಕುಡಿಯುವರು ಶ್ರೀಗಳ ನುಡಿದರು. 

ಸಮರ್ಪಣಾ ಭಾವದ ಭಕ್ತಿ ನಮ್ಮಲ್ಲಿರಬೇಕು: ಮಾಣಿಲ ಶ್ರೀ : ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಸಮರ್ಪಣಾ ಭಾವದ ಭಕ್ತಿ ನಮ್ಮಲ್ಲಿರಬೇಕು. ಸಮಾಜದಲ್ಲಿ ರಾಮನ ಸಂದೇಶ ಪ್ರಕಾಶವಾಗಿ ಬೆಳಗಬೇಕು. ಆಧ್ಯಾತ್ಮಿಕ ಮೌಲ್ಯ ಮನೆಮನೆಗೆ ತಲುಪಿಸುವ ಕೆಲಸ ಸಂತರಿಂದ ಆಗುತ್ತಿದೆ. ಹಿಂದೂ ಸಮಾಜ ಸುದೃಡವಾಗಲು ಮತೀಯವಾದ ಬಿಡಬೇಕು. ಸಂತನ ಆದರ್ಶವನ್ನು ನಾವೆಲ್ಲ ಪಾಲಿಸಬೇಕು. ವಿಶ್ವಮಾನ್ಯವಾದ ನಮ್ಮದೇಶ ವಿಶ್ವ ಗುರುವಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಮಾಡುವ. ನಮ್ಮ ಬದುಕಿನ ದಾರಿಗೆ ಗುರುಗಳು ಶಕ್ತಿತುಂಬಲಿದ್ದಾರೆ. ಗುರುತತ್ವವನ್ನು ಅರ್ಥೈಸಿ ಜೀವನ‌ ನಡೆಸಿ. ಸಾಧನೆಯ‌ ಧೀಮಂತಿಗೆಯನ್ನು ಮಕ್ಕಳಿಗೆ ತಿಳಿಸುವ‌ ಕೆಲಸಮಾಡಬೇಕಾಗಿದೆ ಎಂದರು.

ಆನಂದ ಎಂಬುದು ಭಾರತ ಅಡಿಪಾಯ: ಸಾಧ್ವೀ: ಸಾಧ್ವೀ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ ಗುರು ಎಂದರೆ ತಾಯಿಯ ಮಡಿಲು. ಆನಂದ ಎಂಬುದು ಭಾರತ ಅಡಿಪಾಯ. ಶ್ರೀ ಗಳ ಷಷ್ಠ್ಯಬ್ದ ಕಾರ್ಯಕ್ರಮವನ್ನು ಗುರುಬಂಧುಗಳು ವಿವಿಧಕಡೆಗಳಲ್ಲಿ ಬಹಳ ಸುಂದರವಾಗಿ ಮಾಡಿದ್ದಾರೆ. ಈ ಕಾರ್ಯಕ್ರಮಗಳು ಹಲವಾರು ಬಡವರ ಬಾಳಿನಲ್ಲಿ ಬೆಳಕಾದಂತಾಗಿದೆ ಎಂದರು.

ತ್ಯಾಗಪೂರ್ಣ ಸೇವೆಗೆ ದೇಶದಲ್ಲಿ ಮಹತ್ವವಿದೆ: ಡಾ. ಪ್ರಭಾಕರ ಭಟ್ : ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕರವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಡಿಯೂರು ಬಹುದೊಡ್ಡ ಆದ್ಯಾತ್ಮ ಕ್ಷೇತ್ರವಾಗಿ ಮೂಡಿಬಂದಿದೆ. ದೇಶದ ಉಸಿರು ಆದ್ಯಾತ್ಮ. ದೇಶಕ್ಕೆ ಜೀವ ತುಂಬಿದವರು ಇಂತಹ ಸಂತರು. ತ್ಯಾಗಪೂರ್ಣ ಸೇವೆಗೆ ದೇಶದಲ್ಲಿ ಮಹತ್ವವಿದೆ. ಸಾಧು ಸಂತರ ದೇಶದ ಅಸ್ಥಿತ್ವವನ್ನು ಉಳಿಸಿದ್ದಾರೆ. ಸಂತನ ಬದುಕು ಲೋಕದ ಹಿತಕ್ಕೆ. ತಾಯಿ ಇಲ್ಲದೆ ಜೀವನವಿಲ್ಲ. ತಾಯಿಯ ಜೀವನ‌ ಶ್ರೇಷ್ಟವಾದದ್ದು. ತುಳುವಿನ ದೊಡ್ಡ ಶತ್ರು ಆಂಗ್ಲಬಾಷೆ. ಅದೇ ನಮ್ಮನ್ನು ಸರ್ವನಾಶಮಾಡುತ್ತದೆ. ಆಂಗ್ಲಭಾಷೆಯ ವ್ಯಾಮೋಹದಿಂದ ಸಂಸ್ಕೃತಿ ನಾಶವಾಗುತ್ತಿದೆ. ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ಕೆಲಸ ತಾಯಂದಿರಿಂದ ಆಗಬೇಕು. ತಾಯಂದಿರು ತಮ್ಮ ಜವಾಬ್ದಾರಿಯನ್ನು ಮರೆಯದೆ ಪಾಲಿಸಬೇಕು. ತಮ್ಮ ಮನೆಗಳಲ್ಲಿ ಭಾವನಾತ್ಮಕ ಶಬ್ದಗಳ ಬಳಕೆ ಮಾಡಿ. ಹಣದ ಹಿಂದೆ ಗುಣ ಭಾರದು, ಗುಣವಿದ್ದರೆ ಹಣ ಬರುತ್ತದೆ. ಧರ್ಮ ಸಂಸ್ಕೃತಿ ಜೀವನ ಮೌಲ್ಯ ಅಪಾಯದಲ್ಲಿದೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಸರ್ವನಾಶ ಖಂಡಿತ. ಆಗ ಮಾತ್ರ ನಮ್ಮ ಮಠ ಮಂದಿರಗಳು ಉಳಿಯಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಮುಂಬೈ ಹೇರಂಬನ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕರಾದ ಸದಾಶಿವ ಶೆಟ್ಟಿ ಕನ್ಯಾನ,‌ ಮಂಗಳೂರಿನ ಚಾರ್ಟೆಡ್ ಅಕೌಂಟೆ ಶಾಂತರಾಮ ಶೆಟ್ಟಿ, ಪೂನಾ ಗುರುದೇವಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಮುಂಬೈನ ಉದ್ಯಮಿ ವಾಮಯ್ಯ ಶೆಟ್ಟಿ‌ ಚೆಂಬೂರು, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಡಿಯೂರು ಶ್ರೀಗುರುದೇವ ಸೇವಾ ಬಳಗ 1.70ಲಕ್ಷ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ 2.61ಲಕ್ಷ ಗುರುಕಾಣಿಕೆ ಸಮರ್ಪಿಸಿ ಗುರುವಂದನೆ ಮಾಡಿದರು ಒಡಿಯೂರು ವೈದಿಕ ಬಂದುಗಳು ಗುರುವಂದನೆ ಸಲ್ಲಿಸಲ್ಲಿಸಿದರು. ಒಡಿಯೂರು ಶ್ರೀಗಳವರೊಂದಿಗೆ ಅನುಭವ ಸೇರಾಜೆ ಗಣಪತಿ ಭಟ್ ಅವರ ಲೇಖನ ಕೃತಿ ಸ್ಪಟಿಕಮಾಲೆ ಬಿಡುಗಡೆ ಮಾಡಲಾಯಿತು. ಅಮೃತವರ್ಷದ ಆಂಗ್ಲ ತರ್ಜುಮೆ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರನ್ನು ನಾರಾಯಣ ಶೆಟ್ಟಿ ಪೂಣೆ ಫಲಪುಷ್ಪನೀಡಿ ಗೌರವಿಸಿದರು. ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹಮದಾಸ ಪರಮಹಂಸ ಸ್ವಾಮೀಜಿಯವರಿಗೆ ಮಲಾರು ಜಯರಾಮ ರೈ ರವರು ಫಲಪುಷ್ಪ ನೀಡಿ ಗೌರವಿಸಿದರು. ಸಾಧ್ವಿ ಶ್ರೀ ಮಾತಾನಂದಮಯೀರವರಿಗೆ ಒಡಿಯೂರು ಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರಾದ ಶಾರದಾಮಣಿ ಎಸ್.ರೈ, ಫಲಪುಷ್ಪ‌ನೀಡಿ ಗೌರವಿಸಿದರು.

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು ಯಶವಂತ‌ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ಗುರುದೇವ‌ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ವಂದಿಸಿದರು. 

ಒಡಿಯೂರು ರಥೋತ್ಸವ: ಸಾಯಂಕಾಲ ಶ್ರೀ ದತ್ತಾಂಜನೇಯ ದೇವರ ವೈಭವದ ರಥಯಾತ್ರೆ ನಡೆಯಿತು. ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ(ಮಿತ್ತನಡ್ಕ)ಕ್ಕೆ ಹೋಗಿ, ಕನ್ಯಾನ ಪೇಟೆ ಸವಾರಿ ನಡೆಯಿತು.ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ರಥವು ಶ್ರೀ ಸಂಸ್ಥಾನಕ್ಕೆ ಹಿಂತಿರುಗಿತು. ಕಾರ್ಯಕ್ರಮದಲ್ಲಿ ಊರಪರವೂರ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡರು.

ವಿಶೇಷ ಆಕರ್ಷಣೆ: ಕನ್ಯಾನ ಸದ್ಗುರು ನಿತ್ಯಾನಂದ ಮಂದಿರದ ಬಳಿ ಪಾವಂಜೆ ಮೇಳದವರಿಂದ 'ಶ್ರೀ ದೇವಿ ಮಹಾತ್ಮ್ಯೆ' ಯಕ್ಷಗಾನ ಬಯಲಾಟ ನಡೆಯಿತು. ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕಮ್ಮಾಜೆಯಲ್ಲಿ ಅಮ್ಮಾಗ್ರೂಪ್ಸ್‌ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Pages