ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿವಾನಿ ಶಿವಾನಂದ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿವಾನಿ ಶಿವಾನಂದ ಶೆಟ್ಟಿ

Share This
ಬಂಟ್ಸ್ ನ್ಯೂಸ್, ಕಾರ್ಕಳ : ಅಂಡಮಾನ್'ನಲ್ಲಿ ಜ. 16ರಂದು ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿರುವ ಉಡುಪಿಯ ಶಿವಾನಿ ಶೆಟ್ಟಿ ಅವರು ಪ್ರಥಮ ಸ್ಥಾನ ಪಡೆಯುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಶಿವಮೊಗ್ಗ ಮತ್ತು ಧ್ಯಾನ ಜ್ಯೋತಿ ಯೋಗ ಎಜುಕೇಶನ್ ಸ್ಪೋರ್ಟ್ಸ್ ಸೋಷಿಯಲ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆಸಿದ 2ನೇ ಅಂತರ್ ರಾಜ್ಯ ಆನ್ಲೈನ್ ಯೋಗಾಸನ ಚಾಂಪಿಯನ್ ಶಿಪ್ 2021ರಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸಿದ್ದರು.

ಶಿವಾನಿ ಶೆಟ್ಟಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಹೆಬ್ರಿಯ ಶ್ರೀಮತಿ ಸುಜಾತ ಶೆಟ್ಟಿ ಹಾಗೂ ಬೇಳಂಜೆ ಶಿವಾನಂದ ಶೆಟ್ಟಿ ಅವರ ಪುತ್ರಿ. ಕಾರ್ಕಳದ ನಿರಂತರ ಯೋಗ ಶಿಕ್ಷಣ ಕೇಂದ್ರದಲ್ಲಿ ಯೋಗಗುರು ಕೆ. ನರೇಂದ್ರ ಕಾಮತ್ ಬಳಿ ಯೋಗಾಸನ ತರಬೇತಿ ಪಡೆಯುತ್ತಿದ್ದಾರೆ.

Pages