ವಿಟ್ಲ ಪಡ್ನೂರು ಗ್ರಾಮದ ಮೋನಪ್ಪ ಪೂಜಾರಿ ಅವರ ಕುಟುಂಬಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಹಸ್ತ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿಟ್ಲ ಪಡ್ನೂರು ಗ್ರಾಮದ ಮೋನಪ್ಪ ಪೂಜಾರಿ ಅವರ ಕುಟುಂಬಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಹಸ್ತ

Share This
ಬಂಟ್ವಾಳ : ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ ಕುರ್ನ್ಯ ಮನೆಯ ಯಜಮಾನರಾದ ಮೋನಪ್ಪ ಪೂಜಾರಿಯವರ ಕುಟುಂಬಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಆರ್ಥಿಕ ಸಹಾಯ ಹಸ್ತದ ನೆರವು ನೀಡಿದೆ.
ಮನೆಯ ಯಜಮಾನರಾದ ಮೋನಪ್ಪ ಪೂಜಾರಿಯವರ ದೇಹದ ಒಂದು ಪಾರ್ಶ್ವದ ಸ್ವಾಧಿನತೆಯನ್ನು ಕಳೆದುಕೊಂಡು ಕಷ್ಟದಲ್ಲಿರುವಾಗಲೇ ಮಗನಾದ ಅಜಯಗೆ ಅಪಘಾತವಾಗಿ ನಡೆಯಲಾರದ ಸ್ಥಿತಿಯಲ್ಲಿದ್ದು ಈ ಕುಟುಂಬದ ಮನವಿಯ ಮೇರೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಹಾಯ ಹಸ್ತದ ಚೆಕ್ ವಿತರಿಸಿದ್ದರು.

ಈ ಚೆಕ್ಕನ್ನು ಬಂಟರ ಸಂಘ, ಸಾಲೆತ್ತೂರು ವಲಯದ ಅಧ್ಯಕ್ಷರಾದ ದೇವಪ್ಪ ಶೇಖ ಪೀಲ್ಯಡ್ಕರವರು ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು, ಜೊತೆ ಕಾರ್ಯದರ್ಶಿ ಅಮರೇಶ್ ಶೆಟ್ಟಿ ತಿರುವಾಜೆ, ವಿಟ್ಲಪಡ್ನೂರು ಗ್ರಾಮಪಂಚಾಯತಿಯ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ, ಕರ್ಕಳರವರು ಉಪಸ್ಥಿತರಿದ್ದರು.

Pages