ಮುಲ್ಕಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ವಸತಿ ರಹಿತ ಸಮಾಜ ಬಾಂಧವರಿಗೆ ಮನೆ ನಿರ್ಮಾಣ ಮಾಡಿ ಕೊಡುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಎಂಬ ವಿನೂತನ ಯೋಜನೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಪಡುಬಿದ್ರಿ ಸಮೀಪದ ಹೆಜಮಾಡಿಯ ಗುಂಡಿ ನಿವಾಸಿ ಶ್ರೀಮತಿ ಇಂದಿರಾ ಶೆಟ್ಟಿಯವರ ಹೊಸ ಮನೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಹಸ್ತಾಂತರಿಸಿದರು.
ಈ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪಡುಬಿದ್ರಿ ಬಂಟರ ಸಂಘ ಹಾಗೂ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತುಂಬು ಹೃದಯದ ಸಹಕಾರವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿಯವರು, ಕಾರ್ಯದರ್ಶಿಗಳಾದ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾಕ್ಟರ್ ದೇವಿಪ್ರಸಾದ್ ಶೆಟ್ಟಿ ಬೆಳಪು , ಕಾರ್ಯದರ್ಶಿ ಶ್ರೀ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಯುವ ಬಂಟರ ವೇದಿಕೆಯ ಶ್ರೀ ನವೀನ್ ಎನ್ ಶೆಟ್ಟಿ, ಮಹಿಳಾ ವಿಭಾಗದ ಶ್ರೀಮತಿ ನೇತ್ರಾವತಿ ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಶೆಟ್ಟಿ ಏರ್ಮಾಲ್, ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷ ಶ್ರೀಮತಿ ಶೋಭಾ ಜಗದೀಶ್ ಶೆಟ್ಟಿ, ಶ್ರೀಮತಿ ಅಕ್ಷತಾ ಶೆಟ್ಟಿ ಬಂಡ್ಸ್ ವೆಲ್ಫೇರ್ ಟ್ರಸ್ಟ್ ನ ಶ್ರೀ ಮಾಧವ ಸಿ ಶೆಟ್ಟಿ ಪದಾಧಿಕಾರಿಗಳಾದ ಶ್ರೀ ಸುಧಾಕರ ಶೆಟ್ಟಿ, ಶ್ರೀ ಮುರಳಿ ನಾಥ ಶೆಟ್ಟಿ, ಶ್ರೀ ವೈ ಗೋಪಾಲ ಶೆಟ್ಟಿ, ಶ್ರೀ ಭಾಸ್ಕರ್ ಶೆಟ್ಟಿ, ಶ್ರೀ ಹರೀಶ್ ಶೆಟ್ಟಿ, ಪಾದೆಬೆಟ್ಟು, ಶ್ರೀಮತಿ ಅಕ್ಷತಾ ಶೆಟ್ಟಿ, ಶ್ರೀಮತಿ ಜಯಂತಿ ಶೆಟ್ಟಿ, ಶ್ರೀಮತಿ ವಾಣಿ ರವಿ ಶೆಟ್ಟಿ, ಶ್ರೀಮತಿ ಕಲ್ಪನಾ ಶೆಟ್ಟಿ, ಶ್ರೀಮತಿ ರಶ್ಮಿ ಶೆಟ್ಟಿ ಶ್ರೀ ಧನಪಾಲ ಶೆಟ್ಟಿ, ಶ್ರೀ ರವಿ ಶೆಟ್ಟಿ ಜತ್ತ ಬೆಟ್ಟು, ಉಪಸ್ಥಿತರಿದ್ದರು.