ಬಂಟ್ಸ್ ನ್ಯೂಸ್, ಮುಂಬೈ: ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ದುಬೈನ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಚೇರ್ಮನ್ ವಕ್ವಾಡಿ ಪ್ರವೀಣ್ ಶೆಟ್ಟಿ ಅವರು ನಿರ್ದೇಶಕರಾಗಿ ನೇಮಕ ಗೊಂಡಿದ್ದಾರೆ.
ಜಾಗತಿಕ
ಬಂಟರ ಸಂಘಗಳ ಒಕ್ಕೂಟವು ಇದುವರೆಗೆ
ಮಾಡಿದ ದೀನರ ಕಲ್ಯಾಣ ಸೇವೆಯನ್ನು
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ
ಅವರು ಯಶಸ್ವಿಯಾಗಿ ನಡೆಸಿರುವುದನ್ನು ತಿಳಿದುಕೊಂಡ ಹೆಮ್ಮೆಯ ಬಂಟ ಸಮಾಜದ
ಸುಪುತ್ರ ವಕ್ವಾಡಿ ಪ್ರವೀಣ್ ಶೆಟ್ಟಿಯವರು
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ
ಹರೀಶ್ ಶೆಟ್ಟಿಯವರ ಕೋರಿಕೆಯನ್ನು ಮನ್ನಿಸಿ ನಿರ್ದೇಶಕ ಸ್ಥಾನವನ್ನು
ಹೊಂದಲು ತನ್ನ ಒಪ್ಪಿಗೆಯನ್ನು ಸೂಚಿಸಿ
ಒಕ್ಕೂಟದ ಸಾಮಾಜಿಕ ಕೆಲಸಕ್ಕೆ ಬಲವನ್ನು
ತುಂಬಿದ್ದಾರೆ.
ಸಮಾಜದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಹೊಸಬದುಕಿನ ನಿರ್ಮಾಣ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿ ಒಕ್ಕೂಟದಿಂದ ವಿಶೇಷವಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜದ ಕೆಲಸ ಮಾಡಬೇಕೆಂದು ಹಾರೈಸಿ ತುಂಬು ಹೃದಯದಿಂದ ನಿರ್ದೇಶಕರಾಗಿ ಒಕ್ಕೂಟಕ್ಕೆ ತನ್ನ ಕೊಡುಗೆಯನ್ನು ನೀಡುವುದರ ಮೂಲಕ ಸ್ಪೂರ್ತಿಯನ್ನು ತುಂಬಿದ್ದಾರೆ.
ದುಬೈನ ಖ್ಯಾತ ಉದ್ಯಮಿ ವಕ್ವಾಡಿ
ಪ್ರವೀಣ್ ಶೆಟ್ಟಿ ಅವರನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷರಾದ
ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ,
ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ,
ಜೊತೆ ಕಾರ್ಯದರ್ಶಿ ಸಂಕಬೈಲ್
ಸತೀಶ್ ಅಡಪ್ಪ, ನಿರ್ದೇಶಕರು, ಮಹಾ ಪೋಷಕರು, ಪೋಷಕರು, ಕಾರ್ಯಕಾರಿ ಸಮಿತಿ ಸದಸ್ಯರು
ಸರ್ವ ಸದಸ್ಯರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಮಂಗಳೂರು ಹೃದಯಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸುತ್ತದೆ.