ಜನರ ಕಣ್ಣೀರೊರೆಸುವ ಕಾರ್ಯ ನಿರಂತರ : ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜನರ ಕಣ್ಣೀರೊರೆಸುವ ಕಾರ್ಯ ನಿರಂತರ : ಐಕಳ ಹರೀಶ್ ಶೆಟ್ಟಿ

Share This

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಹಿರಂಗ ಅಧಿವೇಶನ

ಮಂಗಳೂರು : ಜಾಗತಿಕ ಬಂಟರ ಸಂಘವು ಒಂದು ದೊಡ್ದ ದೇವಸ್ಥಾನ ಇದ್ದಂತೆ. ಇಲ್ಲಿ ದಾನಿಗಳೇ ದೇವರು. ಪ್ರಾಯೋಜಕರೇ ಭಕ್ತರು. ಬಂಟ ಬಂಧುಗಳೇ ಆಶೀರ್ವಚಕರು. ಸಹೃದಯಿ ದೊಡ್ಡ ಮನಸ್ಸಿನ ದಾನಿಗಳೇ ಆಸ್ತಿಕರು. ಇವರನ್ನೆಲ್ಲರನ್ನೂ ಒಗ್ಗೂಡಿಸಿ ಮುನ್ನಡೆ ಯುವ ಉದ್ದೇಶ ಒಕ್ಕೂಟದ್ದು. ಇವರೆಲ್ಲರ ಸಹಯೋಗ ದಿಂದ ಸಮಾಜದ ಜನ ತೆಯ ಕಣ್ಣೋರೆಸುವ ಕೆಲಸ ಸಾಗು ತ್ತಿದೆ. ಇಂತಹ ಸೇವಾ ಕೈಂಕರ್ಯ ದಲ್ಲಿ ನನಗೆ ತೃಪ್ತಿಯಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಕುರ್ಲಾ ಪೂರ್ವದ ಚುನ್ನಾಭಟ್ಟಿ ಯಲ್ಲಿರುವ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃ ಹದಲ್ಲಿ ನಡೆದ  ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿ ಐಕಳ ಹರೀಶ್ ಶೆಟ್ಟಿ ಮಾತನಾಡಿದರು.


ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ದೀಪ ಬೆಳಗಿಸಿ ಅಧಿವೇಶ ನವನ್ನು ಉದ್ಘಾಟಿಸಿದರು. ಐಕಳ ಹರೀಶ್ ಅವರೋರ್ವ ಅಪ್ರತಿಮ ಸಂಘಟಕ, ಸೇವಾಚಿಂ ತಕರು. ಇದೆಲ್ಲಾ ಅವರ ಮುಂದಾಳುತ್ವದಲ್ಲಿ ಯಶಸ್ವಿಯನ್ನು ಕಾಣುವ ಕಾರ್ಯಕ್ರಮಗಳು. ಸಮುದಾಯದ ಉನ್ನತೀಕರಣಕ್ಕೆ ಅವರ ದೂರದೃಷ್ಟಿತ್ವ ಪ್ರಶ್ನಾತೀತವಾದದ್ದು ಆದ್ದರಿಂದ ಬಂಟ್ಸ್ ಸಂಘ ಮುಂಬಯಿ ಸಹಯೋಗ ಸದಾ ಇದ್ದೇ ಇದೆ ಎಂದು  ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.


ಸ್ವಸಮುದಾಯವನ್ನು ಮತ್ತೆ ಬಲಿಷ್ಠವಾಗಿಸಿ ವಿಶ್ವಮಾನ್ಯ ಆಗಿಸುವ ಕನಸನ್ನು ನನಸಾಗಿಸುವ ಛಲಹೊತ್ತ ಐಕಳ ಬಂಟ ಸಮೂದಾಯದ  ಶಕ್ತಿಯೇ ಸರಿ. ಸೇವೆಯನ್ನೇ ವರವಾಗಿಸಿರುವ ಇವರು ಶಸಕ್ತರಿಂದ ಪಡೆದು ನಿಶಕ್ತರಿಗೆ ನೀಡಿ ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸುವ ಸೇವಾ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಬಂಟರೆಲ್ಲರೂ ಸ್ಪಂದಿಸಬೇಕು. ಒಕ್ಕೂಟದ ಸೇವಾ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಮುಂಬಯಿನ ಪ್ರತಿಷ್ಠಿತ ಕೈಗಾರಿಕೋದ್ಯಮಿ, ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ತೋನ್ಸೆ ಆನಂದ ಎಂ.ಶೆಟ್ಟಿ ತಿಳಿಸಿದರು.


ಪ್ರಧಾನ ಅಭ್ಯಾಗತರಾಗಿ ಬಂಟ್ಸ್ ಮಾತೃ ಸಂಸ್ಥೆಯ ಉಪಾಧ್ಯಕ್ಷ  ಹೇಮಂತ್ ಶೆಟ್ಟಿ ಕಾವು, ಬಂಟ್ಸ್ ಸಂಘ ಮುಂಬಯಿ ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಮುರಳಿ ಕೆ.ಶೆಟ್ಟಿ, ಜವಾಬ್ ಅಧ್ಯಕ್ಷ ಸಿಎ| .ಆರ್ ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ವಸಂತ್ ಶೆಟ್ಟಿ ಪಲಿಮಾರ್, ಚಂದ್ರಹಾಸ ಶೆಟ್ಟಿ , ಥಾಣೆ ಬಂಟ್ಸ್ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಉದ್ಯಮಿಗಳಾದ, ಪ್ರವೀಣ್ ಭೋಜ ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ರಂಜನಿ ಸುಧಾಕರ್ ಹೆಗ್ಡೆ, ಶಿವರಾಮ ಶೆಟ್ಟಿ ಸೂರತ್, ಸತೀಶ್ ಆರ್.ಶೆಟ್ಟಿ, ದಿನೇಶ್ ಶೆಟ್ಟಿ, ಮಹೇಶ್ ಎಸ್.ಶೆಟ್ಟಿ, ಸದಾಶಿವ ಶೆಟ್ಟಿ ಹೇರಂಬ, ರಘುರಾಮ ಕೆ.ಶೆಟ್ಟಿ ಹೇರಂಬ, ಉಮಾ ಕೃಷ್ಣ ಶೆಟ್ಟಿ , ಜೆ.ವಿ.ಶೆಟ್ಟಿ, ರವಿ ಎಸ್.ಶೆಟ್ಟಿ, ಬಿ.ವಿವೇಕ್ ಶೆಟ್ಟಿ , ಅಶೋಕ್ ಎಸ್.ಶೆಟ್ಟಿ, ದಿನಕರ ಎನ್.ಶೆಟ್ಟಿ, ಹರೀಶ್ ಎಸ್.ಶೆಟ್ಟಿ , ಮಂಜುನಾಥ ಶೆಟ್ಟಿ ಕೊಡ್ಲಾಡಿ, ಹಾಲಾಡಿ ಆದರ್ಶ್ ಎಸ್.ಶೆಟ್ಟಿ, ಗಿರೀಶ್ ಆರ್.ಶೆಟ್ಟಿ ತೆಳ್ಳಾರ್, ಜಗದೀಶ್ ಶೆಟ್ಟಿ, ಸಂಜೀವ ಎನ್.ಜಯ ಎನ್.ಶೆಟ್ಟಿ, ಹರೀಶ್ ಪಾಂಡು ಶೆಟ್ಟಿ, ರವೀಂದ್ರನಾಥ ಎಂ.ಭಂಡಾರಿ, ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ, ಕರ್ನೂರು ಶಂಕರ ಕೆ.ಆಳ್ವ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಸುನೀಲ್ ಕುಮಾರ್ ಶೆಟ್ಟಿ ಕುಂದಾಪುರ, ಲತಾ ಪ್ರಭಾಕರ್ ಶೆಟ್ಟಿ, ರತ್ನಾ ಪಿ.ಶೆಟ್ಟಿ, ಮನೋರಮಾ ಎನ್.ಬಿ ಶೆಟ್ಟಿ, ಚಿತ್ರಾ ಆರ್.ಶೆಟ್ಟಿ, ಸತ್ಯ ಪ್ರಸಾದ್ ಶೆಟ್ಟಿ , ಕಾರ್ತಿಕ್ ಶೆಟ್ಟಿ ಕಾಸರಗೋಡು, ಸಂತೋಷ್ ಶೆಟ್ಟಿ  ಗುರುಪುರ, ಶಾಂತರಾಮ ಕೆ.ಶೆಟ್ಟಿ , ಆರ್.ಉಪೇಂದ್ರ ಶೆಟ್ಟಿ ಬೆಂಗಳೂರು, ವಿಜಯ ಭಂಡಾರಿ, ರಾಜ್ಗೋಪಾಲ್ ಶೆಟ್ಟಿ ತೋನ್ಸೆ, ವಿಜಯ ಶೆಟ್ಟಿ , ಪ್ರವೀಣ್ ಶೆಟ್ಟಿ ಪುತ್ತೂರು, ಆನಂದ ಶೆಟ್ಟಿ, ಸಂತೋಷ್ ಶೆಟ್ಟಿ, ದೇವಪ್ಪ ಶೇಖರ್ ಸಾಲೆತ್ತೂರು, ಮನೋಹರ ಶೆಟ್ಟಿ ತೋನ್ಸೆ, ಸಂತೋಷ್ ಕುಮಾರ್ ಹೆಗ್ಡೆ ಮೂಲ್ಕಿ, ಶಶಿಧರ್ ಶೆಟ್ಟಿ,  ಜಗಧೀಶ್ ಶೆಟ್ಟಿ ಬೈಂದೂರು ಸೇರಿದಂತೆ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Pages